ಥಾಯ್ಲೆಂಡ್​ ಬೀಚ್​ನಲ್ಲಿ ಆಶಿಕಾ ಹಾಟ್​ ಅವತಾರ: ಪಟಾಕಿ ಪೊರಿಯೋ ಬೋಲ್ಡ್​ ಫೋಟೋಗಳು ವೈರಲ್!​

1288155
Published on

ಬೆಂಗಳೂರು: ಪ್ರಸ್ತುತ ಜಮಾನದಲ್ಲಿ ಸ್ಯಾಂಡಲ್​ವುಡ್​ ಸ್ಟಾರ್​ ನಟಿಯರಲ್ಲಿ ಆಶಿಕಾ ರಂಗನಾಥ್​ ಕೂಡ ಒಬ್ಬರು. ಕೌಟುಂಬಿಕ ಪಾತ್ರಗಳಿಗೂ ಸೈ ಹಾಗೂ ಮೈಮಾಟ ಪ್ರದರ್ಶಿಸುವ ಬೋಲ್ಡ್​ ಪಾತ್ರಗಳಿಗೂ ಸೈ ಎನ್ನುವ ಆಶಿಕಾ, ಚಂದನವನದ ಬಹು ಬೇಡಿಕೆ ನಟಿಯಾಗಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಆಶಿಕಾ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರ ನಟನೆಯ ಅವತಾರ ಪುರುಷ ಸಿನಿಮಾ ಬಿಡುಗಡೆಯಾಗಿ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಸದ್ಯ ಶೂಟಿಂಗ್​ನಿಂದ ಕೊಂಚ ಬಿಡುವು ಪಡೆದುಕೊಂಡಿರುವ ಆಶಿಕಾ, ಪ್ರವಾಸದ ಮೂಡ್​ನಲ್ಲಿರುವಂತೆ ಕಾಣುತ್ತಿದೆ.

ಸಹಜ ಸೌಂದರ್ಯದ ಮೂಲಕ ಸ್ಯಾಂಡಲ್​ವುಡ್​ನ ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ, ಸದ್ಯ ಥಾಯ್ಲೆಂಡ್​ ಪ್ರವಾಸದಲ್ಲಿದ್ದಾರೆ. ಅಲ್ಲಿನ, ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ ಎನ್ನುವುದಕ್ಕೆ ಇನ್​ಸ್ಟಾಗ್ರಾಂನಲ್ಲಿ ಅವರು ಹರಿ ಬಿಟ್ಟಿರುವ ಫೋಟೋಗಳೇ ಸಾಕ್ಷಿಯಾಗಿವೆ.

ಆಶಿಕಾ ಅವರು ಥಾಯ್ಲೆಂಡ್​ನ ಟಪ್ ಐಲ್ಯಾಂಡ್ ನ್ಯಾಚುರಲ್​ ಬೀಚ್​ನಲ್ಲಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಶೇರ್​ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕೆಂಪು ಬಣ್ಣದ ಬಿಕಿನಿ ಕಟ್​ ಮತ್ತು ಜೀನ್ಸ್​ ಶಾರ್ಟ್ಸ್​ ಧರಿಸಿ ಸಖತ್​ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಬೋಟ್​ ಮೇಲೆ ಕುಳಿತು ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಆಶಿಕಾ ಅವರ ಹಾಟ್​ ಅವತಾರ ಪಡ್ಡೆ ಹುಡುಗರ ಮೈ ಬಿಸಿಯೇರಿಸಿದೆ.

ಇನ್​ಸ್ಟಾಗ್ರಾಂನಲ್ಲಿ ಆಶಿಕಾ ಹರಿಬಿಟ್ಟಿರುವ ಫೋಟೋಗಳು ವೈರಲ್​ ಆಗಿದ್ದು, ಈಗಾಗಲೇ 39 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಿಟ್ಟಿಸಿಕೊಂಡಿದೆ. ಆಶಿಕಾ ಮೈಮಾಟಕ್ಕೆ ಮನಸೋತಿರುವ ಅಭಿಮಾನಿಗಳು ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ. ನಿಮ್ಮ ಬ್ಯೂಟಿಗೆ ನಾವು ಫಿದಾ ಆಗಿದ್ದೇವೆ ಎನ್ನುತ್ತಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಪವನ್​ ಒಡೆಯರ್​ ನಿರ್ದೇಶನದ ಹಾಗೂ ನಟ ಇಶಾನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ರೇಮೋ ಸಿನಿಮಾದಲ್ಲಿ ಆಶಿಕಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಇದಲ್ಲದೆ, ಹೆಸರಿಡಿದ ಸಿನಿಮಾಗಳಿಗೆ ಈಗಾಗಲೇ ಆಶಿಕಾ ಸಹಿ ಹಾಕಿದ್ದಾರೆ.​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net