ಹುಬ್ಬೇರಿಸುವಂತಿದೆ ಸಲಿಂಗಕಾಮಿ ಜೋಡಿ ಮದುವೆ ಕುರಿತು ಸಮಂತಾ ಮಾಡಿರುವ ಪೋಸ್ಟ್​..!

Samantha
Published on

ಹೈದರಾಬಾದ್​: ನಾಗಚೈತನ್ಯರೊಂದಿಗೆ ಡಿವೋರ್ಸ್​ ಘೋಷಣೆ ಮಾಡಿದಾಗಿನಿಂದ ನಟಿ ಸಮಂತಾ ರುತು ಪ್ರಭು ಭಾರಿ ಸುದ್ದಿಯಲ್ಲಿದ್ದಾರೆ. ಸಮಂತಾ ಏನೇ ಮಾಡಿದರು ಹಾಗೂ ಏನೇ ಮಾತನಾಡಿದರೂ ಭಾರಿ ಸುದ್ದಿಯಾಗುತ್ತಿದೆ. ಸಮಂತಾರ ಪ್ರತಿ ಚಲವಲನಗಳ ಮೇಲೆ ಮಾಧ್ಯಮಗಳು ಗಮನ ಕೇಂದ್ರೀಕರಿಸಿವೆ.

ಸಮಂತಾರ ಇನ್​ಸ್ಟಾಗ್ರಾಂನಲ್ಲಿನ ಸ್ಫೂರ್ತಿದಾಯಕ ಮಾತುಗಳು, ಧಾರ್ಮಿಕ ಪ್ರವಾಸಗಳು ಸೇರಿದಂತೆ ಬ್ರ್ಯಾಂಡ್​ಗಳ ಪೋಸ್ಟ್​ಗಳು ತುಂಬಿವೆ. ಇವೆಲ್ಲವೂ ಸಹ ಮಾಧ್ಯಮ ಗಮನ ಪಡೆದುಕೊಂಡಿವೆ. ಇದೀಗ ಸಮಂತಾ, ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್​ ಮಾಡಿರುವ ಪೋಸ್ಟ್​ ಎಲ್ಲರ ಹುಬ್ಬೇರಿಸಿದೆ.

ಇದೇ ಮೊದಲ ಬಾರಿಗೆ ತೆಲಂಗಾಣದಲ್ಲಿ ಸಲಿಂಗಕಾಮಿ ಜೋಡಿ ಮದುವೆ ನಡೆದಿರುವುದು ಭಾರೀ ಸುದ್ದಿಯಾಗಿದೆ. ಇದಕ್ಕೆ ಸಂಬಂಧಿಸಿದ ಮಾಹಿತಿ ದಿನ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಅದರ ತುಣಕೊಂದನ್ನು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಸಮಂತಾ ಶೇರ್​ ಮಾಡಿದ್ದಾರೆ. ಸಮಂತಾ ಪೋಸ್ಟ್​ ನೋಡಿ ಹುಬ್ಬೇರಿಸಿರುವ ಹಲವರು, ಸ್ಯಾಮ್​ ಈ ಪೋಸ್ಟ್ ಅನ್ನು ಏಕೆ ಹಂಚಿಕೊಂಡಿದ್ದಾರೆ ಅಥವಾ ಅವರು ಏನಾದರೂ ಸುಳಿವು ನೀಡುತ್ತಿದ್ದಾರೆಯೇ ತಮಗೆ ತಾವೇ ಪ್ರಶ್ನೆ ಹಾಕಿಕೊಂಡಿದ್ದಾರೆ.

ಸಮಂತಾರ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಆದರೆ, ಸಮಂತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿನಿಮಾ ವಿಚಾರಕ್ಕೆ ಬಂದರೆ, ತೆಲುಗು ಸಿನಿಮಾ ಶಾಕುಂತಲಂ ಮತ್ತು ತಮಿಳಿನ ವಿಘ್ನೇಶ್ ಶಿವನ್ ನಿರ್ದೇಶನದ ಕಾತುವಾಕುಲ ರೆಂಡು ಕಾದಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರು ಎರಡು ದ್ವಿಭಾಷಾ ಯೋಜನೆಗಳಿಗೆ ಸಹಿ ಹಾಕಿದ್ದಾರೆ ಮತ್ತು ಬಾಲಿವುಡ್ ಚೊಚ್ಚಲ ಚಿತ್ರಕ್ಕೆ ಸಮಂತಾಗೆ ಸಹಿ ಹಾಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net