ಮಗಳ ಡಿವೋರ್ಸ್​ ಕುರಿತು ಅಚ್ಚರಿಯ ಹೇಳಿಕೆ ನೀಡಿದ ಸಮಂತಾ ತಂದೆ ಜೋಸೆಫ್​ ಪ್ರಭು..!

Samantha Prabhu
Published on

ಹೈದರಾಬಾದ್​: ತಾರಾದಂಪತಿ ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್​ ಆಗಿದ್ದಾರೆ ಎಂಬ ವಿಚಾರವನ್ನು ಅಭಿಮಾನಿಗಳು ಈಗಲೂ ಸಹ ಅರಗಿಸಿಕೊಳ್ಳಲು ಆಗುತ್ತಿಲ್ಲ. ಮತ್ತೆ ಅವರಿಬ್ಬರು ಒಂದಾಗಬಹುದೇನೋ ಎಂಬ ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ. ಇನ್ನು ನಾಗಸಮಂತಾ ಡಿವೋರ್ಸ್​ ಬೆನ್ನಲ್ಲೇ ಅಕ್ಕಿನೇನಿ ಕುಟುಂಬ ಪ್ರತಿಕ್ರಿಯೆ ನೀಡಿತ್ತು. ಆದರೆ, ಸಮಂತಾ ಕುಟುಂಬದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದೀಗ ಸಮಂತಾ ತಂದೆ ಮೌನ ಮುರಿದಿದ್ದಾರೆ.

ಇಬ್ಬರು ಡಿವೋರ್ಸ್​ ಆಗಿದ್ದಾರೆ ಎಂದು ಗೊತ್ತಾದ ಕ್ಷಣ ನನ್ನ ಮನಸ್ಸು ಸಂಪೂರ್ಣ ಬ್ಲಾಕ್​​ ಆಗಿ ಹೋಯಿತು. ಆ ಕ್ಷಣದಲ್ಲಿ ಏನನ್ನೂ ಯೋಚಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಡಿವೋರ್ಸ್​ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸು ಎಂದು ನನ್ನ ಮಗಳಿಗೆ ಸಲಹೆ ನೀಡಿದ್ದೇನೆ ಎನ್ನುತ್ತಾರೆ ಸಮಂತಾ ತಂದೆ ಜೋಸೆಫ್​ ಪ್ರಭು.

ಇನ್ನು ಸಮಂತಾ ತಂದೆಗೆ ಮಗಳ ಜೀವನದಲ್ಲಿ ಏನು ನಡೆಯುತ್ತಿದೆ ಎಂಬ ಸುಳಿವು ಸಹ ಇರಲಿಲ್ಲವಂತೆ. ತುಂಬಾ ಯೋಚಿಸಿಯೇ ಮಗಳು ಈ ನಿರ್ಧಾರ ತೆಗೆದುಕೊಂಡಿರುತ್ತಾಳೆಂದು ನನಗೆ ಅರಿವಾಯಿತು. ಮುಂದಿನ ಪರಿಣಾಮದ ಬಗ್ಗೆ ಅವಳಿಗೆ ತುಂಬಾ ತಿಳಿದಿದೆ. ಆದಷ್ಟು ಬೇಗ ಎಲ್ಲವೂ ಸರಿ ಹೋಗುತ್ತದೆ ಎಂಬ ಭರವಸೆ ಇದೆ ಎಂದು ಜೋಸೆಫ್​ ಪ್ರಭು ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ಇನ್ನು ಚಾಯ್ ಮತ್ತು ಸ್ಯಾಮ್ ಅವರ ಅಭಿಮಾನಿಗಳು ಡಿವೋರ್ಸ್​ ಹಿಂದಿನ ನಿಜವಾದ ಕಾರಣಗಳನ್ನು ತಿಳಿದುಕೊಳ್ಳಲು ಬಯಸುತ್ತಿದ್ದಾರೆ. ಸಮಂತಾರಿಂದ ಯಾವುದೇ ತಪ್ಪಿಲ್ಲ ಎಂದು ಹೇಳಿಕೊಂಡರೂ ಕೂಡ ಅಕ್ಕಿನೇನಿ ಕುಟುಂಬದ ಕುಡಿಯಿಂದಲೂ ಏನನ್ನೂ ಆರೋಪಿಸಲಾಗದು ಎಂದು ಅಹ ಅಷ್ಟೇ ಸತ್ಯ. ಹೀಗಾಗಿ ಇಬ್ಬರ ಡಿವೋರ್ಸ್​ ವಿಚಾರದಲ್ಲಿ ರಹಸ್ಯ ಹಾಗೇ ಮುಂದುವರಿದಿದೆ.

ಅಕ್ಟೋಬರ್​ 2ರಂದು ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ತಂತಮ್ಮ ಇನ್​ಸ್ಟಾಗ್ರಾಂ ಖಾತೆಗಳಲ್ಲಿ ಒಂದೇ ರೀತಿಯ ಸಂದೇಶಗಳನ್ನು ಪೋಸ್ಟ್​ ಮಾಡಿಡುವ ಮೂಲಕ ಅಧಿಕೃತ ಡಿವೋರ್ಸ್​ ಘೋಷಣೆ ಮಾಡಿದರು. “ಸಾಕಷ್ಟು ಸಮಾಲೋಚನೆಯ ಬಳಿಕವು ನಾವಿಬ್ಬರೂ ಗಂಡ-ಹೆಂಡತಿಯ ಸಂಬಂಧ ಬಿಟ್ಟು ಬೇರೆ ಬೇರೆಯಾಗುವ ನಿರ್ಧಾರ ತೆಗೆದುಕೊಂಡಿದ್ದೇವೆ. ಒಂದು ದಶಕದ ಮಟ್ಟಿಗಿನ ಆಪ್ತಸ್ನೇಹವನ್ನು ನಾವು ಹೊಂದಿದ್ದೆವು. ಬಹುಶಃ ಅದೇ ನಮ್ಮಿಬ್ಬರ ಸಂಬಂಧದ ಸತ್ವವಾಗಿತ್ತು. ಇದರಿಂದಲೇ ಮುಂದೆಯೂ ನಮ್ಮಿಬ್ಬರ ನಡುವೆ ವಿಶೇಷ ನಂಟು ಮುಂದುವರಿಯುತ್ತದೆ ಎಂದು ನಂಬಿದ್ದೇವೆ” ಎಂದು ಸಮಂತಾ ಮತ್ತು ನಾಗಚೈತನ್ಯ ಬರೆದಿದ್ದಾರೆ. ಜೊತೆಗೆ, ತಮ್ಮ ಈ ಕಷ್ಟಕಾಲದಲ್ಲಿ ತಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮದವರು ತಮಗೆ ಬೆಂಬಲ ನೀಡಬೇಕು. ತಾವು ಮೂವ್​ ಆನ್​ ಆಗಲು ಅಗತ್ಯವಾದ ಪ್ರೈವೆಸಿ ಕೊಡಬೇಕು ಎಂದೂ ಮನವಿ ಮಾಡಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ವಿಘ್ನೇಶ್ ಶಿವನ್ ನಿರ್ದೇಶನದ ಮತ್ತು ವಿಘ್ನೇಶ್ ಶಿವನ್ ರೌಡಿ ಪಿಕ್ಚರ್ಸ್ ಸಹಯೋಗದೊಂದಿಗೆ ಸೆವೆನ್ ಸ್ಕ್ರೀನ್ ಸ್ಟುಡಿಯೋದಿಂದ ಬಂಡವಾಳ ಹೂಡುತ್ತಿರುವ ತಮಿಳು ಸಿನಿಮಾ ಕಾತು ವಾಕುಲಾ ರಂಡು ಕಾದಲ್​ ನಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಜೊತೆ ಸಮಂತಾ ನಟಿಸುತ್ತಿದ್ದಾರೆ. ಇದರೊಂದಿಗೆ ಗುಣಶೇಖರ್ ನಿರ್ದೇಶನದ ಶಾಕುಂತಲಂ ಸಿನಿಮಾದಲ್ಲಿ ಶಾಕುಂತಲೆಯಾಗಿ ಸಮಂತಾ ಬಣ್ಣ ಹಚ್ಚಿದ್ದು, ಶಾಕುಂತಲಂ ಚಿತ್ರದ ಚಿತ್ರೀಕರಣವನ್ನು ಸಮಂತಾ ಸಂಪೂರ್ಣ ಮುಗಿಸಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net