ಮದುವೆಗೂ ಮುನ್ನವೇ ಒಪ್ಪಂದವೊಂದಕ್ಕೆ ಸಹಿ ಹಾಕಿ ತನ್ನ ಹಕ್ಕನ್ನು ಕಳೆದುಕೊಂಡರಾ ನಟಿ ಸಮಂತಾ?

Samantha
Published on

ಹೈದರಾಬಾದ್​: ತಾರಾದಂಪತಿ ಸಮಂತಾ-ನಾಗಚೈತನ್ಯ 4 ವರ್ಷಗಳ ವೈವಾಹಿಕ ಜೀವನಕ್ಕೆ ವಿದಾಯ ಹೇಳಿದ್ದಾರೆ. ಇಬ್ಬರ ನಡುವಿನ ಮನಸ್ತಾಪಗಳಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಸಮಂತಾ ಡಿವೋರ್ಸ್​ ಪಡೆದ ಮೇಲೆ ಜೀವನಾಂಶ ಪಡೆಯುತ್ತಾರೆಂಬ ಸುದ್ದಿಯಾಗಿತ್ತು. ಆದರೆ, ಜೀವನಾಂಶ ಬೇಡ ಎಂದಿದ್ದಾರೆ ಎನ್ನಲಾಗಿದೆ. ಇದೀಗ ಜೀವನಾಂಶ ಸಿಗದಿರುವುದಕ್ಕೆ ಕಾರಣವೊಂದು ಬಯಲಾಗಿದೆ.

ಸಮಂತಾ ಸುಮಾರು 200 ಕೋಟಿ ರೂಪಾಯಿ ಜೀವನಾಂಶವನ್ನು ತಿರಸ್ಕರಿಸಿದ್ದಾರೆ ಎಂದು ಸುದ್ದಿಯಾಗಿದೆ. ಆದರೆ, ಇದೀಗ ತಿಳಿದುಬಂದಿರುವ ವಿಚಾರವೆಂದರೆ, ಮದುವೆ ಮುಂಚೆಯೇ ಯಾವುದೇ ಜೀವನಾಂಶ ಕೇಳುವುದಿಲ್ಲ ಎಂಬ ಒಪ್ಪಂದಕ್ಕೆ ಸಮಂತಾ ಸಹಿ ಹಾಕಿದ್ದರು ಮಾತುಗಳು ಟಾಲಿವುಡ್​ ಗಲ್ಲಿಯಲ್ಲಿ ಕೇಳಿಬರುತ್ತದೆ. ಆದರೆ, ಇದೆಷ್ಟು ಸತ್ಯವೋ ತಿಳಿದಿಲ್ಲ.

ನಿರ್ಮಾಪಕ ಸುರೇಶ್ ಬಾಬು ಮತ್ತು ನಾಗಾರ್ಜುನ ಅವರು ಮದುವೆಗೂ ಮುನ್ನವೇ ಮುಂದಾಲೋಚನೆ ನಡೆಸಿ, ಏನಾದರೂ ಕೆಟ್ಟ ಘಟನೆ ನಡೆದರೆ ಜೀವನಾಂಶವಿಲ್ಲದ ಷರತ್ತನ್ನು ಸೇರಿಸುವುದು ಸರಿಯೆಂದು ಭಾವಿಸಿದ್ದರಂತೆ. ಅದರಂತೆ ಜನಪ್ರಿಯ ವಕೀಲ ಮತ್ತು ತೆಲುಗು ನಿರ್ಮಾಪಕ ನಿರಂಜನ್ ರೆಡ್ಡಿ ಅವರು ವಿಚ್ಛೇದನ ಒಪ್ಪಂದವನ್ನು ರಚಿಸಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ. ಯಾವುದೇ ಜೀವನಾಂಶವಿಲ್ಲದ ಒಪ್ಪಂದಕ್ಕೆ ಮದುವೆಗು ಮುನ್ನ ಸಮಂತಾ ಸಹಿ ಹಾಕಿದ್ದರಿಂದ ಅವರಿಗೆ ಜೀವನಾಂಶದ ಅವಕಾಶವಿಲ್ಲ ಎಂದು ಹೇಳಲಾಗುತ್ತಿದೆ.

ಅಕ್ಟೋಬರ್​ 2ರಂದು ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ತಂತಮ್ಮ ಇನ್​ಸ್ಟಾಗ್ರಾಂ ಖಾತೆಗಳಲ್ಲಿ ಒಂದೇ ರೀತಿಯ ಸಂದೇಶಗಳನ್ನು ಪೋಸ್ಟ್​ ಮಾಡಿಡುವ ಮೂಲಕ ಅಧಿಕೃತ ಡಿವೋರ್ಸ್​ ಘೋಷಣೆ ಮಾಡಿದರು. “ಸಾಕಷ್ಟು ಸಮಾಲೋಚನೆಯ ಬಳಿಕವು ನಾವಿಬ್ಬರೂ ಗಂಡ-ಹೆಂಡತಿಯ ಸಂಬಂಧ ಬಿಟ್ಟು ಬೇರೆ ಬೇರೆಯಾಗುವ ನಿರ್ಧಾರ ತೆಗೆದುಕೊಂಡಿದ್ದೇವೆ. ಒಂದು ದಶಕದ ಮಟ್ಟಿಗಿನ ಆಪ್ತಸ್ನೇಹವನ್ನು ನಾವು ಹೊಂದಿದ್ದೆವು. ಬಹುಶಃ ಅದೇ ನಮ್ಮಿಬ್ಬರ ಸಂಬಂಧದ ಸತ್ವವಾಗಿತ್ತು. ಇದರಿಂದಲೇ ಮುಂದೆಯೂ ನಮ್ಮಿಬ್ಬರ ನಡುವೆ ವಿಶೇಷ ನಂಟು ಮುಂದುವರಿಯುತ್ತದೆ ಎಂದು ನಂಬಿದ್ದೇವೆ” ಎಂದು ಸಮಂತಾ ಮತ್ತು ನಾಗಚೈತನ್ಯ ಬರೆದಿದ್ದಾರೆ. ಜೊತೆಗೆ, ತಮ್ಮ ಈ ಕಷ್ಟಕಾಲದಲ್ಲಿ ತಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮದವರು ತಮಗೆ ಬೆಂಬಲ ನೀಡಬೇಕು. ತಾವು ಮೂವ್​ ಆನ್​ ಆಗಲು ಅಗತ್ಯವಾದ ಪ್ರೈವೆಸಿ ಕೊಡಬೇಕು ಎಂದೂ ಮನವಿ ಮಾಡಿದ್ದಾರೆ.

ನಾಗಚೈತನ್ಯ ಮತ್ತು ಸಮಂತಾ ಡಿವೋರ್ಸ್​ ಸುದ್ದಿ ಕೇಳಿ ಅಭಿಮಾನಿಗಳಿಗೆ ಶಾಕ್​ ಆಗಿದೆ. ಅನೇಕರು ನೀವಿಬ್ಬರು ದೂರಾಗಬಾರದಿತ್ತು, ಮತ್ತೆ ಒಂದಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ವಿಘ್ನೇಶ್ ಶಿವನ್ ನಿರ್ದೇಶನದ ಮತ್ತು ವಿಘ್ನೇಶ್ ಶಿವನ್ ರೌಡಿ ಪಿಕ್ಚರ್ಸ್ ಸಹಯೋಗದೊಂದಿಗೆ ಸೆವೆನ್ ಸ್ಕ್ರೀನ್ ಸ್ಟುಡಿಯೋದಿಂದ ಬಂಡವಾಳ ಹೂಡುತ್ತಿರುವ ತಮಿಳು ಸಿನಿಮಾ ಕಾತು ವಾಕುಲಾ ರಂಡು ಕಾದಲ್​ ನಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಜೊತೆ ಸಮಂತಾ ನಟಿಸುತ್ತಿದ್ದಾರೆ. ಇದರೊಂದಿಗೆ ಗುಣಶೇಖರ್ ನಿರ್ದೇಶನದ ಶಾಕುಂತಲಂ ಸಿನಿಮಾದಲ್ಲಿ ಶಾಕುಂತಲೆಯಾಗಿ ಸಮಂತಾ ಬಣ್ಣ ಹಚ್ಚಿದ್ದು, ಶಾಕುಂತಲಂ ಚಿತ್ರದ ಚಿತ್ರೀಕರಣವನ್ನು ಸಮಂತಾ ಸಂಪೂರ್ಣ ಮುಗಿಸಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net