ಸಮಂತಾರ ಈ ಫೋಟೋ ಬಳಸಿದವರಿಗೆ ಸಂಕಷ್ಟ: ನಟಿಯ ನಿರ್ಧಾರದಿಂದ ಕೆಲವರಿಗೆ ಸಮಸ್ಯೆ ಖಂಡಿತ​

Samantha
Published on

ಹೈದರಾಬಾದ್​: ಅಕ್ಟೋಬರ್​ 2ರಂದು ಸಮಂತಾ-ನಾಗಚೈತನ್ಯ ಅಧಿಕೃತವಾಗಿ ಡಿವೋರ್ಸ್​ ಘೋಷಣೆ ಮಾಡಿದ ಬೆನ್ನಲ್ಲೇ ಅನೇಕ ವದಂತಿಗಳು ಹರಿದಾಡುತ್ತಿವೆ. ಎರಡು ಕುಟುಂಬಗಳ ಇತಿಹಾಸ ಕೆದಕ್ಕುತ್ತಿರುವುದಲ್ಲದೆ, ಡಿವೋರ್ಸ್​ ಹಿಂದಿನ ಕಾರಣಗಳನ್ನು ತಿಳಿಯಲು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಪ್ರಯತ್ನಿಸಲಾಗುತ್ತಿದೆ.

ಈಗಾಗಲೇ ನಾಗಸಮಂತಾ ಕುರಿತಾದ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲೂ ಯೂಟ್ಯೂಬ್​​ನಲ್ಲಿ ತೀರಾ ವೈಯಕ್ತಿಕ ವಿಚಾರಗಳನ್ನು ಬಹಿರಂಗವಾಗಿಯೇ ಊಹಾಪೋಹಗಳನ್ನು ಸೇರಿಸಿ ಹರಿಬಿಡುತ್ತಿರುವುದು ಸಮಂತಾ ಮನಸ್ಸನ್ನು ಕದಡಿದೆ. ಹೀಗಾಗಿಯೇ ಸ್ಯಾಮ್​ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧಾರ ಮಾಡಿದ್ದಾರೆ.

ಸಮಂತಾ ತಮ್ಮ ಫ್ಯಾಷನ್​ ಡಿಸೈನರ್​ ಪ್ರೀತಂ ಝುಕಲ್ಕರ್​ ಜತೆ ಕ್ಯಾಮೆರಾಗೆ ಪೋಸ್​​ ನೀಡಿರುವ ಫೋಟೋವನ್ನು ಯೂಟ್ಯೂಬ್​ನಲ್ಲಿ ಥಂಬ್​ನೈಲ್​ ಆಗಿ ಬಳಸಿ ಊಹಾಪೋಹಗಳನ್ನು ಹರಿಬಿಡಲಾಗುತ್ತಿದೆ. ಫೋಟೋಗೂ ಮತ್ತು ಹೇಳುವ ಸ್ಟೋರಿಗೂ ಒಂದಕ್ಕೊಂದು ಸಂಬಂಧ ಇಲ್ಲದಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಕೆಲ ಡಿಜಿಟಲ್​ ಕಂಟೆಂಟ್​ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಸಮಂತಾ ಅವರ ತಂಡ ಮುಂದಾಗಿದೆ ಎಂದು ತಿಳಿದುಬಂದಿದೆ.

ಸೆಲೆಬ್ರಿಟಿ ಬ್ರೇಕ್‌ಅಪ್‌ ಬಳಿಕ ಇಂತಹ ಸುದ್ದಿಗಳು ಸಾಮಾನ್ಯ ಆದಷ್ಟು ಮೌನವಾಗಿರಿ ಎಂದು ಉದ್ಯಮದ ಕೆಲವು ಜನರು ಸಲಹೆ ನೀಡಿದ್ದಾರೆನ್ನಲಾಗಿದೆ. ಆದರೆ, ಚಿತ್ರರಂಗದಲ್ಲಿ ಆ ಥಂಬ್‌ನೇಲ್‌ಗಳು ತನ್ನ ಭವಿಷ್ಯಕ್ಕೆ ಆಗುವ ಹಾನಿಯ ಬಗ್ಗೆ ನಟಿ ಯೋಚಿಸುತ್ತಿದ್ದಾರೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net