ಸಮಂತಾರ ಈ ನಡೆಯಿಂದ ಅಭಿಮಾನಿಗಳು ಫುಲ್​ ಖುಷ್! ಮನಸ್ಸು ಬದಲಿಸಿದ್ರಾ ಸೌತ್​ ಬ್ಯೂಟಿ?

Samantha
Published on

ಸಮಂತಾ: ನಟಿ ಸಮಂತಾ ವೈಯಕ್ತಿಕ ಜೀವನ ಇದೀಗ ಭಾರಿ ಚರ್ಚೆಯಲ್ಲಿದೆ. ನಾಗಚೈತನ್ಯರಿಂದ ಡಿವೋರ್ಸ್​ ಪಡೆಯುವ ಮೂಲಕ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲಿದ್ದಾರೆ ಎಂಬ ಸುದ್ದಿ ಟ್ರೆಂಡಿಂಗ್​ ಟಾಪಿಕ್​ ಆಗಿದೆ.

ವಾಸ್ತವವಾಗಿ ಸಮಂತಾ ಮತ್ತು ನಾಗಚೈತನ್ಯ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಎಲ್ಲಿಯು ತುಟಿ ಬಿಚ್ಚದೆ ಮೌನ ವಹಿಸಿದ್ದಾರೆ. ಡಿವೋರ್ಸ್​ ಕುರಿತು ಕೇಳಲಾದ ಪ್ರಶ್ನೆಗಳಿಗೆ ಕಿವಿಗೊಡದೆ, ನಿರ್ಲಕ್ಷಿಸುವ ಮೂಲಕ ತಮ್ಮ ಸಂಬಂಧವನ್ನು ಗುಟ್ಟನ್ನು ರಟ್ಟು ಮಾಡಲು ಇಬ್ಬರು ಸಿದ್ಧರಿಲ್ಲ.

ಸಮಂತಾ ಮತ್ತು ನಾಗಚೈತನ್ಯ ಕುರಿತು ನೂರಾರು ವದಂತಿಗಳು ಹರಿದಾಡುತ್ತಿವೆ. ಅದರಲ್ಲೂ ಸಮಂತಾ, ಮುಂಬೈ ಸ್ಥಳಾಂತರ ಆಗಲಿದ್ದಾರೆ ಎಂಬ ವದಂತಿಯೂ ಒಂದು. ಆದರೆ, ಈಗಾಗಲೇ ಅಭಿಮಾನಿಗಳ ಜತೆಗಿನ ಸಂಭಾಷಣೆ ವೇಳೆ ಹೈದರಾಬಾದ್​ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂದು ಹೇಳುವ ಮೂಲಕ ವದಂತಿಗೆ ಬ್ರೇಕ್​ ಹಾಕಿದ್ದಾರೆ.

ಇದೆಲ್ಲದರ ನಡುವೆ ಸಮಂತಾ ಮತ್ತು ನಾಗಚೈತನ್ಯ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, ತಾರಾ ದಂಪತಿ ಮಕ್ಕಳು ಮಾಡಿಕೊಳ್ಳುವ ಪ್ಲಾನ್​ ಮಾಡಿದ್ದಾರೆ ಎಂಬುದು. ಒಂದು ಮೂಲಗಳ ಪ್ರಕಾರ ಸಮಂತಾ ಅವರು ನಾಗಚೈತನ್ಯರೊಂದಿಗೆ ಸಂಪೂರ್ಣ ಕುಟುಂಬ ಜೀವನ ಆರಂಭಿಸಲು ಬಯಸಿದ್ದಾರೆಂದು ತಿಳಿದುಬಂದಿದೆ.

ಹೌದು, ಟಾಲಿವುಡ್​, ಕಾಲಿವುಡ್​ ಮತ್ತು ಬಾಲಿವುಡ್​ ಬಹು ಬೇಡಿಕೆ ನಟಿಯಾಗಿರುವ ನಟಿ ಸಮಂತಾ ಯಾವುದೇ ಹೊಸ ಚಿತ್ರಗಳಿಗೆ ಸಹಿ ಹಾಕಿಲ್ಲ. ಮತ್ತೆ ನಾಗಚೈತನ್ಯರೊಂದಿಗೆ ಜತೆಗೂಡಿ ಹೊಸ ಬಾಳು ಶುರು ಮಾಡುವ ತವಕದಲ್ಲಿ ಸಮಂತಾ ಇದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರು ಮತ್ತೆ ಒಂದಾಗಿ ಅಭಿಮಾನಿಗಳ ಮುಖದಲ್ಲಿ ಸಂತಸ ತರುತ್ತಾರಾ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net