

ಹೈದರಾಬಾದ್: ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ಡಿವೋರ್ಸ್ ಹಂತಕ್ಕೆ ತಲುಪಿದೆ ಎಂಬ ವಿಚಾರ ಬೆಳಕಿಗೆ ಬಂದಾಗಿನಿಂದ ಸಮಂತಾ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಅಕ್ಕಿನೇನಿ ಕುಟುಂಬದಿಂದ ಸಮಂತಾ ಅಂತರ ಕಾಯ್ದುಕೊಂಡಿದ್ದು, ಇಬ್ಬರ ನಡುವೆ ಏನೂ ಸರಿಯಿಲ್ಲ ಎಂಬುದು ಬಹುತೇಕ ಖಚಿವಾದಂತಿದೆ.
ಇತ್ತೀಚೆಗೆ ನಡೆದ ನಾಗಾರ್ಜುನ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲೂ ಸಮಂತಾ ಕಾಣಿಸಿಕೊಳ್ಳಲಿಲ್ಲ. ಇದೇ ವಿಚಾರ ಸಿನಿ ಗಲ್ಲಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಎಲ್ಲಿಯೂ ತಮ್ಮ ವೈವಾಹಿಕ ಸಂಬಂಧದ ಬಗ್ಗೆ ಬಾಯ್ಬಿಡದ ಸಮಂತಾ ಸಿನಿಮಾ ಶೂಟಿಂಗ್ನಿಂದ ಬಿಡುವು ಪಡೆದುಕೊಂಡು ಜಾಲಿಮೂಡ್ನಲ್ಲಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ಸಮಂತಾ ಇತ್ತೀಚೆಗಷ್ಟೇ ಗೋವಾದಲ್ಲಿ ಕಳೆದ ಸುಂದರ ಕ್ಷಣಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅಲ್ಲಿಯೂ ಕೂಡ ನಾಗಚೈತನ್ಯ ಕಾಣದಿರುವುದು ಊಹಾಪೋಹಗಳಿಗೆ ರೆಕ್ಕೆಬಂದಾಂತಾಗಿದೆ.
ಸಮಂತಾ ವೈವಾಹಿಕ ಜೀವನವನ್ನು ಹೊರತುಪಡಿಸಿದರೆ, ಇನ್ನೊಂದು ವಿಚಾರದಲ್ಲಿ ಸಮಂತಾ ಸದ್ಯ ಭಾರಿ ಸುದ್ದಿಯಾಗಿದ್ದಾರೆ. ಹೌದು, ಸಮಂತಾ ಅವರು ತಮ್ಮ ಸೈಡ್ ಇನ್ಕಮ್ನಿಂದ ಎಲ್ಲರ ಹುಬ್ಬೇರಿಸಿದ್ದಾರೆ. ಸಿನಿಮಾದಿಂದಾಚೆಗೆ ಸಮಂತಾ ಭಾರಿ ಹಣವನ್ನು ಸಂಪಾದಿಸುತ್ತಾರೆ. ಜಾಲತಾಣದಲ್ಲಿ ಸದಾ ತಮ್ಮ ಮಾದಕ ಫೋಟೋಗಳನ್ನು ಹರಿಬಿಡುವ ಸಮಂತಾ, ಇನ್ಸ್ಟಾಗ್ರಾಂನಲ್ಲಿ 15 ಮಿಲಿಯನ್ಗೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
ತಮ್ಮ ಜಾಲತಾಣ ಖಾತೆ ಮೂಲಕ ಸಮಂತಾ ಲೂಯಿಸ್ ವಿಟಾನ್ ಬಟ್ಟೆ ಮತ್ತು ಬ್ಯಾಗ್‌ಗಳು ಸೇರಿದಂತೆ ಅನೇಕ ಬ್ರ್ಯಾಂಡ್ಗಳನ್ನು ಪ್ರಚಾರ ಮಾಡುತ್ತಾರೆ. ಪ್ರತಿಯೊಂದು ಬ್ರ್ಯಾಂಡ್ ಪ್ರಚಾರಕ್ಕೂ ಸಮಂತಾ ಪೊಸ್ಟ್ ಆಧಾರದ ಮೇಲೆ ಬೆಲೆ ನಿಗದಿ ಮಾಡುತ್ತಾರೆ. ಒಂದು ಮೂಲಗಳ ಪ್ರಕಾರ ಇನ್ಸ್ಟಾಗ್ರಾಂನ ಪ್ರತಿ ಪೋಸ್ಟ್ಗೆ 7 ರಿಂದ 13 ಲಕ್ಷವನ್ನು ಸಮಂತಾ ಚಾರ್ಜ್ ಮಾಡುತ್ತಾರಂತೆ. ಪ್ರತಿ ಇನ್ಸ್ಟಾಗ್ರಾಂ ಸ್ಟೋರಿಗೆ ಶೇ. 70 ರಷ್ಟು ಚಾರ್ಜ್ ಮಾಡುತ್ತಾರಂತೆ.
ಇದೀಗ ಲೂಯಿಸ್ ವಿಟಾನ್ ಕಂಪನಿಯ ಬ್ಯಾಗ್ ಒಂದನ್ನು ಹಿಡಿದು ಸಮಂತಾ ಮಾದಕ ಫೋಸ್ ನೀಡಿದ್ದಾರೆ. ಸಮಂತಾ ಕೇವಲ ಬ್ರಾನಲ್ಲಿ ಕಾಣಿಸಿಕೊಂಡಿರುವುದು ಹಲವರ ಹುಬ್ಬೇರಿಸಿದೆ. ಇನ್ನು ಕೆಲವರು ನಾಗಚೈತನ್ಯ ವೈಮನಸ್ಸಿಗೆ ಇದು ಕಾರಣವಾಗಿರಬಹುದೆಂದು ನೆಟ್ಟಿಗರು ಸಮಂತಾ ಕಾಲೆಳೆದಿದ್ದಾರೆ.
ಏನೇ ಆಗಿರಲಿ ಸಮಂತಾ ಅವರ ಮಾದಕ ನೋಟ ಎಲ್ಲರ ಗಮನ ಸೆಳೆದಿದ್ದು, ಅಂತರ್ಜಾಲಕ್ಕೆ ಬೆಂಕಿ ಹಚ್ಚಿದ್ದಾರೆ. ನಿಸ್ಸಂದೇಹವಾಗಿ, ಕೆಲವೇ ಸಮಯದಲ್ಲಿ, ಸಾಮಾಜಿಕ ಮಾಧ್ಯಮವು ಸಮಂತಾರ ಹಾಟ್ ಲುಕ್‌ಗಳಿಂದ ಉರಿಯುತ್ತಿದೆ. (ಏಜೆನ್ಸೀಸ್)