ಮಹಾಲಕ್ಷ್ಮೀಗೆ ರವೀಂದರ್​ ನೀಡಿರುವ ದುಬಾರಿ ಉಡುಗೊರೆಗಳ ಬಗ್ಗೆ ತಿಳಿದ್ರೆ ಹುಬ್ಬೇರಿಸ್ತೀರಾ! ಇಲ್ಲಿದೆ ಮಾಹಿತಿ...

Mahalakshmi
Published on

ಚೆನ್ನೈ: ಧಾರಾವಾಹಿ ನಟಿ ವಿ.ಜೆ. ಮಹಾಲಕ್ಷ್ಮೀ ಮತ್ತು ತಮಿಳು ನಿರ್ಮಾಪಕ ರವೀಂದರ್​ ತಮ್ಮ ಪ್ರೇಮ ವಿವಾಹದಿಂದಲೇ ಇತ್ತೀಚೆಗೆ ಭಾರಿ ಸುದ್ದಿಯಾದರು. ಅಲ್ಲದೆ, ಕಳೆದ ದಿನಗಳಿಂದ ಈ ಜೋಡಿ ಟ್ರೆಂಡಿಂಗ್​ನಲ್ಲಿದೆ. ಅದಕ್ಕೆ ಕಾರಣ ನಟಿ ಮತ್ತು ನಿರ್ಮಾಪಕ ನಡುವಿನ ವ್ಯತ್ಯಾಸ. ಅದೇನೆಂದರೆ, ಮಹಾಲಕ್ಷ್ಮೀ ಸೌಂದರ್ಯವತಿಯಾಗಿದ್ದು, ಆಕೆ ಮದುವೆ ಆಗಿರುವ ರವೀಂದರ್​ ದಡೂತಿ ಮನುಷ್ಯ. ಹೀಗಾಗಿ ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಸಿಕ್ಕಾಪಟ್ಟೆ ಟ್ರೋಲ್​ ಸಹ ಆಯಿತು.

ಮಹಾಲಕ್ಷ್ಮೀ ಮತ್ತು ರವಿಂದರ್​ ಇಬ್ಬರು ತಿರುಪತಿಯಲ್ಲಿ ಸೆ.1ರಂದು ಮದುವೆ ಆದರು. ಇಬ್ಬರಿಗೂ ಇದು ಎರಡನೇ ಮದುವೆ ಆಗಿದ್ದು, ಮಹಾಬಲಿಪುರಂನಲ್ಲಿ ಇಬ್ಬರು ಹನಿಮೂನ್​ ಎಂಜಾಯ್​ ಮಾಡುತ್ತಿದ್ದಾರೆ. ಮಾಧ್ಯಮ ಸಂದರ್ಶನದಲ್ಲಿ ಇಬ್ಬರ ಆಪ್ತಪೆಯನ್ನು ಕಂಡು ನೆಟ್ಟಿಗರು ಅಚ್ಚರಿಯ ಜೊತೆಗೆ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಇಬ್ಬರ ವಿಚಾರದಲ್ಲಿ ಬಂದಿರುವ ತಾಜಾ ಸುದ್ದಿಯೇನೆಂದರೆ, ಮಹಾಲಕ್ಷ್ಮೀಗೆ ರವೀಂದರ್​ ಅವರು ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ 300 ರೇಷ್ಮೆ ಸೀರೆ ಮತ್ತು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣವನ್ನು ಹೊರತು ಪಡಿಸಿದರೆ, ಮಹಾಲಕ್ಷ್ಮೀಗಾಗಿಯೇ ರವೀಂದರ್​ ಅವರು 75 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಐಷಾರಾಮಿ ಮನೆಯನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಮಹಾಲಕ್ಷ್ಮೀ ಮಲಗುವ ಬೆಡ್​ ಚಿನ್ನ ಲೇಪಿತವಾಗಿರಲಿದೆ ಎಂದು ಹೇಳಲಾಗಿದೆ. ಈ ದುಬಾರಿ ಉಡುಗೊರೆಯನ್ನು ರವೀಂದರ್​ ನೀಡುತ್ತಿದ್ದಾರೆ ಎಂದು ಸುದ್ದಿಯಾಗಿದ್ದು, ಇದು ನಿಜವೋ? ಅಥವಾ ಸುಳ್ಳು ಮಾಹಿತಿಯೋ? ಎಂಬುದನ್ನು ನವಜೋಡಿಯೇ ಸ್ಪಷ್ಟಪಡಿಸಬೇಕಿದೆ. ಸದ್ಯ ಈ ಸುದ್ದಿಯಂತೂ ಕಾಲಿವುಡ್​ ಗಲ್ಲಿಯಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ.

ಅಂದಹಾಗೆ ಮಹಾಲಕ್ಷ್ಮೀ ಅವರು ಕಿರುತೆರೆ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ವಾಣಿ ರಾಣಿ, ಆಫೀಸ್‌, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ಪ್ರಸ್ತುತ ಅವರು ನಟಿಸಿರುವ ಮಹಾರಸಿ ಎಂಬ ಧಾರಾವಾಹಿ ಪ್ರಸಾರವಾಗುತ್ತಿದೆ. ರವೀಂದರ್‌ ಚಂದ್ರಶೇಖರನ್‌ ಅವರು ‘ನಟ್ಪುನ ಎನ್ನಡು ಥೆರಿಯುಮ’, ‘ಮುರುಂಗೈಕೈ ಚಿಪ್ಸ್’, ‘ವಿಡಿಯುಮ್‌ ವಾರೈ ಕಾಥಿರು’ ಮುಂತಾದ ಸಿನಿಮಾಗಳನ್ನು ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

ರವೀಂದರ್ ನಿರ್ಮಾಣದ ‘ವಿಡಿಯುಮ್‌ ವಾರೈ ಕಾಥಿರು’ ಸಿನಿಮಾದಲ್ಲೂ ಮಹಾಲಕ್ಷ್ಮೀ ಅಭಿನಯಿಸಿದ್ದರು. ಆ ಚಿತ್ರದಲ್ಲಿ ವಿದಾರ್ಥ್‌ ಮತ್ತು ವಿಕ್ರಾಂತ್ ಪ್ರಮುಖ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಮದುವೆಗೆ ಚಿತ್ರರಂಗದವರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net