ನನ್ನ ಬಳಿ ರೆಕಾರ್ಡಿಂಗ್ಸ್​ ಇವೆ...ಟಾಲಿವುಟ್​ ನಟಿ, ನಿರೂಪಕಿ ರಶ್ಮಿ ವಿರುದ್ಧ ಶಾಕಿಂಗ್​ ಹೇಳಿಕೆ ಕೊಟ್ಟ ನಿರ್ಮಾಪಕ..!

1250718
Published on

ಹೈದರಾಬಾದ್​: ನಟಿ ಹಾಗೂ ನಿರೂಪಕಿ ರಶ್ಮಿ ಗೌತಮ್​ ಟಾಲಿವುಡ್​ನಲ್ಲಿ ಪ್ರಖ್ಯಾತರು. ಇವರ ಹೆಸರಿನಲ್ಲಿ ಅಭಿಮಾನಿ ಬಳಗವೇ ಇದೆ. ಮೊದಲು ನಾಯಕಿಯಾಗಿ ಸಿನಿಮಾಗೆ ಎಂಟ್ರಿ ಕೊಟ್ಟ ರಶ್ಮಿ, ಅಲ್ಲಿ ಸರಿಯಾದ ಯಶಸ್ಸು ಸಿಗದಿದ್ದಕ್ಕೆ ಕಿರುತೆರೆಯಲ್ಲಿ ನಿರೂಪಕಿಯಾಗಿ ಎರಡನೇ ಇನ್ನಿಂಗ್ಸ್​ ಆರಂಭಿಸಿದರು. ಆ ಬಳಿಕವಷ್ಟೇ ರಶ್ಮಿ ಒಳ್ಳೆಯ ಖ್ಯಾತಿ ಗಳಿಸಿದರು. ಇದರ ನಡುವೆ ರಶ್ಮಿ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ಹಿರಿಯ ನಿರ್ಮಾಪಕ ಬಾಲಾಜಿ ನಾಗಲಿಂಗಂ​ ಅವರು ರಶ್ಮಿ ವಿರುದ್ಧ ಶಾಕಿಂಗ್​ ಕಾಮೆಂಟ್​ ಮಾಡಿದ್ದಾರೆ.

ನಾಗಲಿಂಗಂ ಅವರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ರಶ್ಮಿ ಅವರು ಆರೋಪ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿರುವ ನಾಗಲಿಂಗಂ, ನಾನು ರಶ್ಮಿ ಹಿಂದೆ ಬಿದ್ದಿರುವುದು ನಿಜ. ಅದಕ್ಕೆ ಕಾರಣವೂ ಇದೆ. ನನಗೆ ಅವರ ಮೇಲೆ ಗೌರವವು ಇದೆ. ಸಾಮಾನ್ಯವಾಗಿ ನಾನು ಇನ್ನೊಬ್ಬರ ಮಾತನಾಡುವ ವ್ಯಕ್ತಿಯಲ್ಲ. ನನ್ನ ಕೋಪವನ್ನು ನಿಯಂತ್ರಣ ಮಾಡಿಕೊಳ್ಳುವ ಸಾಮರ್ಥ್ಯ ನನಗಿದೆ ಎಂದರು.

ಅಸಲಿಗೆ ನಡೆದಿದ್ದೇನೆಂದರೆ, ಬಾಂಗ್ಲಾ ಹೆಸರಿನ ಸಿನಿಮಾ ಮಾಡಲು ರಶ್ಮಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ದಿವಾಕರ ಬಾಬು ನನ್ನ ಕಿರಿಯ ಸಹೋದರ. ಸ್ಟೀಲ್​ ಪ್ಲಾಂಟ್​ ಒಂದರ ಉದ್ಯೋಗಿ ಆಗಿದ್ದಾರೆ. ಅದರ ಜತೆಯಲ್ಲಿ ಶ್ರೀ ಲಕ್ಷ್ಮೀ ಪಿಕ್ಚರ್​ ಹೆಸರಿನ ತನ್ನದೇ ಸ್ವಂತ ಸಿನಿಮಾ ವಿತರಣ ಕಂಪನಿಯನ್ನು ವಿಶಾಖಪಟ್ಟಣದಲ್ಲಿ ಸ್ಥಾಪಿಸಿದ್ದಾರೆ. ಒಂದು ಸಿನಿಮಾ ಮಾಡಬೇಕೆಂದು ಬಯಸಿದ್ದರು. ತನ್ನ ಸ್ನೇಹಿತ ತನು ಪ್ರಸಾದ್​ ಜತೆ ಬಂದು ನನ್ನ ಜೊತೆ ಮಾತನಾಡಿದರು.

ಸಿನಿಮಾಗೆ ರಶ್ಮಿ ಗೌತಮ್​ ಪ್ರಮುಖ ಪಾತ್ರಗಳಲ್ಲಿ ಒಬ್ಬರು ಎಂದು ತೀರ್ಮಾನ ಮಾಡಿದೆವು. ಈ ಬಗ್ಗೆ ಅವರ ಜತೆಯು ಮಾತನಾಡಿದೆವು. ಅದಕ್ಕೆ ರಶ್ಮಿ ಓಕೆ ಕೂಡ ಮಾಡಿದರು. ನಿಯಮಿತ ಬಜೆಟ್​ನಲ್ಲಿ ಸಿನಿಮಾ ಮಾಡಬೇಕೆಂದುಕೊಂಡಿದ್ದೇವೆ. ನಿಮಗೆ ಎಷ್ಟು ಸಂಭಾವನೆ ಕೊಡಬೇಕು ಎಂದು ಕೇಳಿದೆವು. ಆ ಸಂದರ್ಭದಲ್ಲಿ ಅವರು ಗುಂಟೂರು ಟಾಕೀಸ್​ ಸಿನಿಮಾ ಮಾಡಿದ್ದರು. ಅದು ಬೇರೆ ಸಿನಿಮಾ ಮತ್ತು ನಮ್ಮದು ಬೇರೆ ಸಿನಿಮಾ ಆಗಿದೆ. ಎಲ್ಲವೂ ಓಕೆ ಆಗಿ ಸಿನಿಮಾ ಬಹುತೇಕ ಭಾಗ ಮುಗಿದಿತ್ತು. ಸಾಂಗ್​ ಮತ್ತು ಡಬ್ಬಿಂಗ್​ ಮಾತ್ರ ಬಾಕಿ ಇತ್ತು. ಈ ಸಂದರ್ಭದಲ್ಲಿ ರಶ್ಮಿ ಕ್ಯಾತೆ ತೆಗೆದರು. ನಾಯಕನನ್ನು ಬದಲಾಯಿಸುವಂತೆ ಕೇಳಿದರು.

ನಾವು ಮನವರಿಕೆ ಮಾಡಿದೆವು. ಆದರೆ, ನನಗೆ ಅವರು ಗೊತ್ತು..ಇವರು ಗೊತ್ತು ಎಂದು ಬೆದರಿಕೆ ಹಾಕಿದರು. ನಾನು ಅವರು ಮಾತನಾಡಿರುವುದನ್ನು ರೆಕಾರ್ಡ್​ ಮಾಡಿದ್ದೇನೆ. ನಾನು ಫಿಲ್ಮ್​ ಚೇಂಬರ್​ ಮೆಟ್ಟಿಲೇರುವುದಾಗಿ ಹೇಳಿದೆ. ನಾನು ಬೆದರಿಕೆ ಹಾಕಿದ್ದು ನಿಜ. ಆದರೆ, ನನ್ನ ಬೆದರಿಕೆ ಪ್ರಾಮಾಣಿಕವಾಗಿದೆ. ನನ್ನ ವಯಸ್ಸೇನು? ರಶ್ಮಿ ವಯಸ್ಸೇನು? ಸಂಭಾವನೆ ಕೊಡಲು ಒಪ್ಪಿದ ಮೇಲೆಯೂ ಅಂತಿಮ ಘಟ್ಟದಲ್ಲಿ ತುಂಬಾ ತೊಂದರೆ ನೀಡಿದರು. ನಾನು ಶ್ರೀದೇವಿ ಮತ್ತು ರಾಧಾರಂತಹ ಶ್ರೇಷ್ಠ ನಟಿಯರನ್ನೇ ನೋಡಿದ್ದೇನೆ. ಆದರೆ, ಇಂತಹ ನಟಿಯನ್ನು ನೋಡಿಲ್ಲ ರಶ್ಮಿ ವಿರುದ್ಧ ವಾಗ್ದಾಳಿ ನಡೆಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net