ಅಣ್ಣಾವ್ರ ಕುಟುಂಬದ ಬಗ್ಗೆ ಗೌರವವಿದೆ ಆದ್ರೆ ಪುನೀತ್​ ಸರ್​ 5 ಲಕ್ಷ ರೂ. ಕೊಟ್ಟಿಲ್ಲ: ಬುಲೆಟ್​ ಪ್ರಕಾಶ್​ ಪುತ್ರ ರಕ್ಷಕ್​

ಪುನೀತ್​ ಸರ್​ 5 ಲಕ್ಷ ರೂ. ಕೊಟ್ಟಿಲ್ಲ, ಅದು ಸುಳ್ಳು ಸುದ್ದಿ: ಬುಲೆಟ್​ ಪ್ರಕಾಶ್​ ಪುತ್ರ #puneeth #bulletprakash - youtube
Published on

ಬೆಂಗಳೂರು: ನಟ ಪುನೀತ್​ ರಾಜ್​​ಕುಮಾರ್​ ಅಗಲಿದ ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಅವರ ಸಮಾಜಮುಖಿ ಕಾರ್ಯಗಳಿಗೆ ಸಂಬಂಧಿಸಿದ ಅನೇಕ ಪೋಸ್ಟ್​ಗಳು ವೈರಲ್​ ಆಗುತ್ತಿದೆ. ಪುನೀತ್​ ಮಾಡಿರುವ ಮಾನವೀಯ ಕೆಲಸಗಳನ್ನು ನೋಡಿದ ಜನರು ಕನ್ನಡ ನಾಡು ಓರ್ವ ಚಿನ್ನದಂತ ವ್ಯಕ್ತಿಯನ್ನು ಕಳೆದುಕೊಂಡಿತಲ್ಲ ಅಂತಾ ಕಂಬನಿ ಮಿಡಿಯುತ್ತಿದ್ದಾರೆ. ಆದರೆ, ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್​ಗಳಲ್ಲಿ ಕೆಲವೊಂದಿಷ್ಟು ನಕಲಿಯು ಇವೆ.

ನಟ ಬುಲೆಟ್ ಪ್ರಕಾಶ್ ನಿಧನರಾದಾಗ ಅವರ ಮನೆಗೆ ತೆರಳಿ ಕುಟುಂಬಕ್ಕೆ ಧೈರ್ಯ ತುಂಬಿದ್ದರು ಮತ್ತು 5 ಲಕ್ಷ ರೂ. ಧನಸಹಾಯವನ್ನು ಮಾಡಿದ್ದರು ಅಂತಾ ಸ್ವತಃ ಬುಲೆಟ್​ ಪ್ರಕಾಶ್​ ಪುತ್ರ ರಕ್ಷಕ್​ ಹೇಳಿಕೊಂಡಿದ್ದಾರೆ ಎಂದು ಬರೆದಿರುವ ಎಡಿಟ್​ ಮಾಡಲಾದ ಪೋಸ್ಟ್​ ಒಂದು ಜಾಲತಾಣದಲ್ಲಿ ವೈರಲ್​ ಆಗಿದೆ. ಆದರೆ, ಅದು ಸುಳ್ಳೆಂದು ಬುಲೆಟ್​ ಪ್ರಕಾಶ್​ ಪುತ್ರ ರಕ್ಷಕ್ ಅವರು ತಿಳಿಸಿದ್ದಾರೆ.

ಈ ಬಗ್ಗೆ ದಿಗ್ವಿಜಯ ನ್ಯೂಸ್​ಗೆ ಸ್ಪಷ್ಟನೆ ನೀಡಿರುವ ರಕ್ಷಕ್​, ಅಣ್ಣಾವ್ರ ಕುಟುಂಬದ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಆದರೆ, ಪುನೀತ್​ ಸರ್​ ನಮ್ಮ ಕುಟುಂಬಕ್ಕೆ 5 ಲಕ್ಷ ರೂಪಾಯಿ ಕೊಟ್ಟಿಲ್ಲ. ಕೊಟ್ಟಿದ್ದಾರೆಂದು ಸೋಶಿಯಲ್ ಮೀಡಿಯಾಗಳಲ್ಲಿ ವದಂತಿಗಳನ್ನು ಹಬ್ಬಿಸುತ್ತಿದ್ದಾರೆಂದು ಅಸಮಾಧಾನ ಹೊರಹಾಕಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net