ಆರ್​ಆರ್​ಆರ್​ ಸಿನಿಮಾ ನೋಡಿ ರಾಮ್​ಚರಣ್​-ಜೂ. ಎನ್​ಟಿಆರ್​ ಬಗ್ಗೆ ಖ್ಯಾತ ನೀಲಿ ತಾರೆ ಹೇಳಿದ್ದು ಹೀಗೆ...

Kedra Lust
Published on

ಹೈದರಾಬಾದ್​: ಭಾರತೀಯ ಸಿನಿಮಾಗಳ ಬಗ್ಗೆ ಆಗಾಗ ಒಲವು ತೋರುವ ಖ್ಯಾತ ನೀಲಿ ತಾರೆ ಕೇಂದ್ರ ಲಸ್ಟ್, ತಮಗೆ ಶಾರುಖ್​ ಖಾನ್​ ಅಂದರೆ ಇಷ್ಟ ಎಂದು ಹೇಳಿಕೊಂಡಿರುವುದು ಹಳೇ ಸಂಗತಿ. ತಾಜಾ ಸಂಗತಿ ಅಂದರೆ, ಲಸ್ಟ್​ ಅವರು ಟಾಲಿವುಡ್​ ಸೂಪರ್​ ಸ್ಟಾರ್​ಗಳಾದ ರಾಮಚರಣ್​ ಹಾಗೂ ಜೂನಿಯರ್​ ಎನ್​ಟಿಆರ್​ ಅವರನ್ನು ಕೊಂಡಾಡಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾದ ಆರ್​ಆರ್​ಆರ್​ ಸಿನಿಮಾ ಭಾರತದ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಈ ಸಿನಿಮಾ 1000ಕ್ಕೂ ಹೆಚ್ಚು ಕೋಟಿ ರೂಪಾಯಿಯನ್ನು ಬಾಚಿಕೊಂಡಿದೆ. ಅಲ್ಲದೆ, ವಿದೇಶದಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡಿತು. ಅದರಲ್ಲೂ ಈ ಸಿನಿಮಾ ಬಿಡುಗಡೆಯಾದ ಎರಡು ತಿಂಗಳ ಬಳಿಕ ನೆಟ್​ಫ್ಲಿಕ್ಸ್​ ಒಟಿಟಿಯಲ್ಲಿ ತೆರೆಕಂಡು, ಅಲ್ಲೂ ದಾಖಲೆ ಬರೆಯಿತು.

ಒಟಿಟಿಯಲ್ಲಿ ಸಿನಿಮಾ ವೀಕ್ಷಣೆ ಮಾಡಿರುವ ಕೇಂದ್ರ ಲಸ್ಟ್​ ಅವರು ಆರ್​ಆರ್​ಆರ್​ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿರುವ ಲಸ್ಟ್​, ರಾಜಮೌಳಿ ನಿರ್ದೇಶನಕ್ಕೆ ನಾನು ಸಂಪೂರ್ಣ ಮನಸೋತಿದ್ದೇನೆ. ವಾವ್​ ರಾಮಚರಣ್​ ಮತ್ತು ತಾರಕ್​. ಎಂಥಾ ಸಿನಿಮಾ ಇದು! ನಟನೆ, ಹಾಡುಗಳು, ಸಿನಿಮಾಟೋಗ್ರಫಿ, ಸಾಹಸ ಡೈಲಾಗ್​ ಡೆಲಿವತಿ ಎಲ್ಲವೂ ಪರಿಪೂರ್ಣವಾಗಿದೆ. ಇಬ್ಬರು ನಟರು (ರಾಮ್​ಚರಣ್​ ಮತ್ತು ಎನ್​ಟಿಆರ್​) ಕೂಡ ನೋಡಲು ಸುಂದರವಾಗಿದ್ದಾರೆ. ಅವರ ಅದ್ಭುತ ನಟನೆಯೇ ಈ ಸಿನಿಮಾದ ಆತ್ಮ ಎಂದು ಲಸ್ಟ್​ ಕೊಂಡಾಡಿದ್ದಾರೆ.

ಇತ್ತೀಚಿನ ಸುದ್ದಿಯೊಂದರಲ್ಲಿ, ಶಾರುಖ್​ ಖಾನ್​ ನಾಯಕನಾಗಿ ನಟಿಸಿರುವ 'ಡಾನ್ 3' ಅಲ್ಲಿ ನಟಿಸಲು ಕೇಂದ್ರ ಲಸ್ಟ್​ ಅವರಿಗೆ ಆಫರ್​ ಮಾಡಲಾಗಿತ್ತು ಎನ್ನಲಾಗಿದೆ. ಈ ಸುದ್ದಿಗೆ ಪ್ರತಿಕ್ರಿಯಿಸಿದ ಲಸ್ಟ್​, ನಾನು ಬಾಲಿವುಡ್ ಚಿತ್ರದ ಭಾಗವಾಗಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಅಟ್ಲಿ ನಿರ್ದೇಶನದ 'ಜವಾನ್' ಚಿತ್ರದ ಮೊದಲ ಪೋಸ್ಟರ್ ಅನ್ನು ಸಹ ಲಸ್ಟ್​ ಮೆಚ್ಚಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net