ಸಮಂತಾರ ಹಾದಿಯನ್ನೇ ಹಿಡಿದ ಪ್ರಿಯಾಂಕಾ ಚೋಪ್ರಾ! ಜಾಲತಾಣದಲ್ಲಿ ಸಿಡಿಯಿತು ಬಾಂಬ್​

Piggy
Published on

ನವದೆಹಲಿ: ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಾಸ್ ಬಾಲಿವುಡ್​ನ ಅತ್ಯಂ​ತ ಪ್ರೀತಿಯ ಜೋಡಿ. ಸಾಮಾಜಿಕ ಜಾಲತಾಣದಲ್ಲಿ ಫ್ಯಾಮಿಲಿ ಫೋಟೋಗಳ ಮೂಲಕ ಸದಾ ಸಂಚಲನ ಮೂಡಿಸುವ ತಾರಾದಂಪತಿ ಆರಂಭದಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ.

ಪ್ರಿಯಾಂಕಾ ಅವರಿಗಿಂತಲೂ ನಿಕ್​ ಜೋನಸ್​ 11 ವರ್ಷ ಕಿರಿಯರು. ಇದೇ ವಿಚಾರ ಮದುವೆ ಸಮಯದಲ್ಲಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಯಾವುದೇ ಟೀಕೆಗೂ ಚಿಂತಿಸದ ಪಿಗ್ಗಿ, 2018ರ ಡಿಸೆಂಬರ್​ 1ರಂದು ಅಮೆರಿಕ ಪಾಪ್​ ಗಾಯಕ ನಿಕ್ ಜೋನಾಸ್​​ರನ್ನು ಮದುವೆ ಆಗುವ ಮೂಲಕ ಪ್ರೀತಿಗೆ ವಯಸ್ಸಿನ ಅಂತರ ಮುಖ್ಯವಲ್ಲ ಎಂದು ತೋರಿಸಿದ್ದರು. ಅಲ್ಲದೆ, ಇಬ್ಬರು ಅನೋನ್ಯವಾಗಿ ಜೀವನ ಸಹ ಸಾಗಿಸುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡುತ್ತಾ ಬಂದಿದ್ದಾರೆ.

ಆದರೆ, ಇದೀಗ ಪಿಗ್ಗಿ ಮಾಡಿರುವ ಕೆಲಸವೊಂದು ಅಭಿಮಾನಿಗಳಿಗೆ ಶಾಕ್​ ನೀಡಿದೆ. ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಜೋನಾಸ್​ ಎಂಬ ಸರ್​ನೇಮ್​ ಅನ್ನು ತೆಗೆದು ಹಾಕಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಪಿಗ್ಗಿ ಮತ್ತು ನಿಕ್ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಒಟ್ಟಾರೆ, ಪಿಗ್ಗಿ ನಡೆಯಿಂದ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಆದರೆ, ಈವರೆಗೂ ಪಿಗ್ಗಿ ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಅವರು ಏನು ಉತ್ತರಿಸುತ್ತಾರೆ ಎಂಬುದರ ಮೇಲೆ ಅಭಿಮಾನಿಗಳ ದೃಷ್ಟಿ ನೆಟ್ಟಿದೆ. ಆದರೆ, ತಮ್ಮ ಹೆಸರಿನ ದಿಢೀರ್​ ಬದಲಾವಣೆ ಮುಂದೆ ಆಗಬಹುದಾದ ಬಹುದೊಡ್ಡ ಬದಲಾವಣೆಯ ಮುನ್ಸೂಚನೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನು ಸಮಂತಾ ವಿಚಾರದಲ್ಲೂ ಇದೇ ರೀತಿ ನಡೆದಿರುವುದರಿಂದ ಪಿಗ್ಗಿ ಅಭಿಮಾನಿಗಳ ಆತಂಕ ಹೆಚ್ಚಾಗಿದೆ. ಸಮಂತಾ ಆರಂಭದಲ್ಲಿ ತಮ್ಮ ಸಾಮಾಜಿಕ ಜಾಲತಾಣದಿಂದ ಅಕ್ಕಿನೇನಿ ಸರ್​ನೇಮ್​ ತೆಗೆದು ಹಾಕಿದ್ದರು. ಬಳಿಕ ಸಮಂತಾ ಮತ್ತು ನಾಗಚೈತನ್ಯ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಅದಕ್ಕೆ ಪುಷ್ಠಿ ನೀಡುವಂತಹ ಒಂದಷ್ಟು ಘಟನೆಗಳು ಸಹ ನಡೆದಿತ್ತು. ಕೊನೆಗೆ ಅಕ್ಟೋಬರ್​ 2ರಂದು ಸಮಂತಾ ಮತ್ತು ನಾಗಚೈತನ್ಯ ಅಧಿಕೃತವಾಗಿ ಡಿವೋರ್ಸ್​ ಘೋಷಣೆ ಮಾಡಿಯೇ ಬಿಟ್ಟರು. ಪಿಗ್ಗಿ ವಿಚಾರದಲ್ಲೂ ಇದೇ ನಡೆಯುತ್ತಾ ಎಂಬ ಅನುಮಾನ ಹುಟ್ಟುಹಾಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net