ಅಮೆರಿಕದಲ್ಲಿ ಅಖಂಡ ಅಬ್ಬರ ಜೋರು: ಚಿತ್ರಮಂದಿರದಲ್ಲಿ ಈಡುಗಾಯಿ ಒಡೆದು ಅಭಿಮಾನಿಗಳ ಸಂಭ್ರಮಾಚರಣೆ

ವಿದೇಶದಲ್ಲಿ ಅಖಂಡ ಅಬ್ಬರ; ಚಿತ್ರಮಂದಿರದಲ್ಲಿ ಈಡುಗಾಯಿ ಒಡೆದ ಬಾಲಯ್ಯ ಅಭಿಮಾನಿಗಳು... #balayyafans #AkhandaFilm - youtube
Published on

ವಾಷಿಂಗ್ಟನ್​​: ಸಾಮಾನ್ಯವಾಗಿ ಸ್ಟಾರ್​ ನಟರ ಸಿನಿಮಾಗಳು ಬಿಡುಗಡೆಯಾದಾಗ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ಇರುತ್ತದೆ. ನೆಚ್ಚಿನ ನಟ ಕಟೌಟ್​ಗೆ ಹಾಲಾಭಿಷೇಕ, ಈಡುಗಾಯಿ ಹೊಡೆಯುವುದು ಮತ್ತು ಪೂಜೆ ಮಾಡುವುದು ಸಾಮಾನ್ಯವಾಗಿರುತ್ತದೆ.

ಆದರೆ, ಇದೆಲ್ಲ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಡೆಯುತ್ತದೆ ಅಂದರೆ ಯಾರು ಕೂಡ ನಂಬುವುದೇ ಇಲ್ಲ. ಭಾರತದ ಯಾವುದೇ ಚಿತ್ರಗಳು ಬಿಡುಗಡೆಯಾದರೂ ಕೂಡ ಸಂಭ್ರಮಾಚರಣೆ ಇರುವುದೇ ಇಲ್ಲ. ಆದರೆ, ಅಮೆರಿಕದಲ್ಲಿ ಕಳೆದ ರಾತ್ರಿ ಇದುವರೆಗೂ ನಡೆದಿರದ ಘಟನೆಯೊಂದು ನಡೆದಿದೆ.

ಅಮೆರಿಕದಲ್ಲಿ ಟಾಲಿವುಡ್​ ಸ್ಟಾರ್​ ನಂದಮೂರಿ ಬಾಲಕೃಷ್ಣ ಅವರ ಅಖಂಡ ಚಿತ್ರ ಬಿಡುಗಡೆಯಾಗಿದ್ದು, ಕ್ಯಾಲಿಫೋರ್ನಿಯಾದ ಸೆರ್ರಾ ಚಿತ್ರಮಂದಿರದಲ್ಲಿ ಬಾಲಕೃಷ್ಣ ಅವರ ಪೋಸ್ಟರ್​ ಮುಂದೆ ಕೇಕ್​ ಕತ್ತರಿಸಿ, ಈಡುಗಾಯಿ ಹೊಡೆದು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ರೀತಿಯ ಆಚರಣೆ ಕೇವಲ ಸ್ಥಳೀಯ ಚಿತ್ರಮಂದಿರಗಳಲ್ಲಿ ಮಾತ್ರ ಕಾಣಸಿಗುತ್ತದೆ. ಅಮೆರಿಕದಂತಹ ರಾಷ್ಟ್ರಗಳಲ್ಲಿ ಇದು ನಡೆಯುತ್ತದೆ ಅಂದರೆ ಅದೊಂದು ಅಚ್ಚರಿಯೇ ಸರಿ. ಅಖಂಡ ಸಿನಿಮಾವನ್ನು ಬೊಯಾಪಟಿ ಶ್ರೀನು ಅವರು ನಿರ್ದೇಶಿಸಿದ್ದು, ಪ್ರಗ್ಯಾ ಜೈಸ್ವಾಲ್​, ಶ್ರೀಕಾಂತ್​ ಮತ್ತು ಜಗಪತಿ ಬಾಬು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್​ ಕೇಳಿಬರುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net