ಟಾಲಿವುಡ್​ ಸೂಪರ್​ಸ್ಟಾರ್​ ಮಹೇಶ್​ ಬಾಬುಗೆ ಮಾತೃ ವಿಯೋಗ

Mahesh Babu
Published on

ಹೈದರಾಬಾದ್​: ಟಾಲಿವುಡ್​ ಸೂಪರ್​ಸ್ಟಾರ್​ ಮಹೇಶ್​ ಬಾಬು ಅವರ ತಾಯಿ ಘಟ್ಟಮನೇನಿ ಇಂದಿರಾದೇವಿ ಅವರು ಬುಧವಾರ ಬೆಳಗ್ಗೆ ಹೈದರಾಬಾದ್​ನ ನಿವಾಸದಲ್ಲಿ ಕೊನೆಯುಸಿರೆಳೆದರು.

ಇಂದಿರಾದೇವಿ ಅವರಿಗೆ 70 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ನಿಧನರಾದರು. ಅವರ ಪಾರ್ಥೀವ ಶರೀರವನ್ನು ಪದ್ಮಾಲಯ ಸ್ಟುಡಿಯೋದಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗಿದೆ. ಕುಟುಂಬಸ್ಥರು ದೌಡಾಯಿಸಿದ್ದು, ಅಂತಿಮ ಗೌರವ ಸಲ್ಲಿಸುತ್ತಿದ್ದಾರೆ.

ಹೈದರಾಬಾದ್‌ನ ಮಹಾಪ್ರಸ್ಥಾನದಲ್ಲಿ ಘಟ್ಟಮನೇನಿ ಇಂದಿರಾ ದೇವಿಯ ಅಂತಿಮ ಸಂಸ್ಕಾರ ನೆರವೇರಲಿದೆ. ನಿಧನದ ಸುದ್ದಿಯ ನಂತರ ಹಲವಾರು ಟಾಲಿವುಡ್ ಸೆಲೆಬ್ರಿಟಿಗಳು ಸಾವಿಗೆ ಸಂತಾಪ ಸೂಚಿಸಿ, ಮಹೇಶ್​ ಬಾಬು ಕುಟುಂಬಕ್ಕೆ ಸಾಂತ್ವಾನ ಹೇಳುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net