ನಮ್ಮಿಬ್ಬರನ್ನೂ ಒಂದು ಕೋಣೆಯಲ್ಲಿ ಇರಿಸಿದರೆ... ನಾಗಚೈತನ್ಯ ಬಗ್ಗೆ ಅಚ್ಚರಿಕೆ ಹೇಳಿಕೆ ನೀಡಿದ ಸಮಂತಾ!

Samantha
Published on

ನವದೆಹಲಿ: ಬಾಲಿವುಡ್​ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್​ ಜೋಹರ್​ ನಡೆಸಿಕೊಡುವ ಕಾಫಿ ವಿತ್​ ಕರಣ್​ ಕಾರ್ಯಕ್ರಮದ 7ನೇ ಸೀಸನ್​ನ 3ನೇ ಎಪಿಸೋಡ್​ನಲ್ಲಿ ಖ್ಯಾತ ನಟಿ ಸಮಂತಾ ಮತ್ತು ನಟ ಅಕ್ಷಯ್​ ಕುಮಾರ್​ ಅವರು ಅತಿಥಿಗಳಾಗಿ ಭಾಗವಹಿಸಿದ್ದಾರೆ. ಈ ಎಪಿಸೋಡ್​ನ ಮುಖ್ಯ ಆಕರ್ಷಣೆ ಅಂದರೆ, ಸಮಂತಾ ಏಕೆಂದರೆ, ಇದೇ ಮೊದಲ ಬಾರಿಗೆ ಬಾಲಿವುಡ್​ ಟಾಕ್​ ಶೋನಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡುವ ಮೂಲಕ ಸಮಂತಾ ಎಲ್ಲರ ಗಮನ ಸೆಳೆದಿದ್ದಾರೆ.

ಮಾಜಿ ಪತಿ ನಾಗಚೈತನ್ಯ ಜೊತೆಗಿನ ತನ್ನ ಸಂಬಂಧ ಹಾಗೂ ಕೆಲವು ವದಂತಿಗಳ ಬಗ್ಗೆ ಸಮಂತಾ ಮಾತನಾಡಿದ್ದಾರೆ. ಕರಣ್​ ಜೋಹರ್​, ನಾಗಚೈತನ್ಯರನ್ನು ನಿಮ್ಮ ಪತಿ ಎಂದು ಸಂಭೋದಿಸಿದಾಗ ತಕ್ಷಣ ಅದನ್ನು ಸರಿಪಡಿಸಿದ ಸಮಂತಾ ಪತಿಯಲ್ಲ, ಮಾಜಿ ಪತಿ ಎಂದರು. ಅದನ್ನು ಸರಿಪಡಿಸಿಕೊಂಡ ಬಳಿಕ ಸಮಂತಾರನ್ನು ಉದ್ದೇಶಿಸಿ, ನೀವು ಮತ್ತು ನಾಗಚೈತನ್ಯ ಸೌಹಾರ್ದಯುತವಾಗಿದ್ದೀರಾ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಮಂತಾ, ನೀವು ನಮ್ಮಿಬ್ಬರನ್ನೂ ಒಂದು ಕೋಣೆಯಲ್ಲಿ ಇರಿಸಿದರೆ, ನೀವು ಚೂಪಾದ ವಸ್ತುಗಳನ್ನು ಮರೆಮಾಡಬೇಕು ಎಂಬುದು ನಿಮ್ಮ ಮಾತಿನ ಅರ್ಥವೇ? ಸದ್ಯದ ಪರಿಸ್ಥಿತಿಯಲ್ಲಿ ಇದು ಹೌದು ಎಂದರು. ತದನಂತರದಲ್ಲಿ ಮುಂದುವರಿದು ಬಹುಶಃ ಭವಿಷ್ಯದಲ್ಲಿ ಇರಬಹುದು ಎಂದರು.

ಡಿವೋರ್ಸ್​ ಬಳಿಕ ಜಾಲತಾಣದಲ್ಲಿ ನಡೆದ ಟ್ರೋಲ್​​ ಬಗ್ಗೆ ಕರಣ್​ ಜೋಹರ್ ಅವರು​ ಸಮಂತಾರನ್ನು ಪ್ರಶ್ನೆ ಮಾಡಿದರು. ಅದಕ್ಕೆ ಉತ್ತರಿಸಿದ ಸಮಂತಾ, ನಾನು ಅದರ ಬಗ್ಗೆ ನಿಜವಾಗಿಯೂ ದೂರು ನೀಡಲು ಸಾಧ್ಯವಾಗಲಿಲ್ಲ. ಏಕೆಂದರೆ ನಾನು ಆ ಮಾರ್ಗವನ್ನು ಆರಿಸಿಕೊಂಡಿದ್ದೇನೆ. ನಾನು ಪಾರದರ್ಶಕವಾಗಿರಲು ಬಯಸುತ್ತೇನೆ ಮತ್ತು ನನ್ನ ಬಹಳಷ್ಟು ಜೀವನವನ್ನು ಬಹಿರಂಗಪಡಿಸಲು ನಾನು ಆಯ್ಕೆ ಮಾಡಿಕೊಂಡಿದ್ದೇನೆ. ಡಿವೋರ್ಸ್​ ಆದಾಗ ಟ್ರೋಲ್​ ಬಗ್ಗೆ ನಾನು ಹೆಚ್ಚು ಬೇಸರ ಮಾಡಿಕೊಳ್ಳಲಿಲ್ಲ. ಏಕೆಂದರೆ ಅವರು ಕೂಡ ನನ್ನ ಜೀವನದಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದಾರೆ ಮತ್ತು ಅವರ ಎಲ್ಲ ಪ್ರಶ್ನೆಗಳಿಗೂ ನಾನೂ ಜವಬ್ದಾರಳಾಗಿದ್ದೆ ಎಂದು ಹೇಳಿದರು.

ಡಿವೋರ್ಸ್​ ಪಡೆದ ಆರಂಭದಲ್ಲಿ ತುಂಬಾ ನೋವಾಯಿತು. ಅದರಿಂದ ಹೊರ ಬರುವುದು ತುಂಬಾ ಕಷ್ಟವಾಯಿತು. ಆದರೆ, ಈಗ ನಾನು ಶಕ್ತಳಾಗಿದ್ದೇನೆ ಮತ್ತು ಚೆನ್ನಾಗಿದ್ದೇನೆ. ಎಂದಿಗಿಂತ ಈಗ ತುಂಬಾ ಬಲಶಾಲಿ ಆಗಿದ್ದೇನೆಂದು ಸಮಂತಾ ಹೇಳಿದರು. ಸಮಂತಾ ಅವರ ಸಂಬಂಧದ ಕುರಿತು ಮಾತುಕತೆಯೇ ಸಂದರ್ಶನದಲ್ಲಿ ಪ್ರಮುಖ ವಿಷಯವಾಗಿದೆ. ಕರಣ್​ ಜೋಹರ್​ ಬಳಿ ಈಗಾಗಲೇ ತನ್ನ ಸಂಬಂಧ ಮತ್ತು ವಿಚ್ಛೇದನದ ಬಗ್ಗೆ ಆಫ್ ಕ್ಯಾಮೆರಾದಲ್ಲಿ ಹೇಳಿರುವುದಾಗಿ ಸಮಂತಾ ಬಹಿರಂಗಪಡಿಸಿದ್ದಾರೆ.

ಇನ್ನು ಸಮಂತಾ ಅವರು ಡಿವೋರ್ಸ್​ ಪರಿಹಾರದ ಬಗ್ಗೆ ಕೇಳಿಬಂದ ವದಂತಿಯ ಕುರಿತು ಇದೆ ಸಂದರ್ಭದಲ್ಲಿ ಸ್ಪಷ್ಟನೆಯನ್ನು ನೀಡಿದರು. 250 ಕೋಟಿ ರೂಪಾಯಿ ಪರಿಹಾರ ಪಡಿದಿದ್ದೇನೆ ಎಂದು ಕೆಲವರು ವರದಿ ಮಾಡಿದ್ದಾರೆ. ಯಾವಾಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನನ್ನ ಮನೆಯ ಮೇಲೆ ದಾಳಿ ಮಾಡಲು ಬರುತ್ತಾರೆ ಅಂತಾ ಕಾಯುತ್ತಿದ್ದೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net