ಖ್ಯಾತ ತಮಿಳು ನಿರ್ದೇಶಕನಿಂದ ಅಭಿನಯ ಚಕ್ರವರ್ತಿಗೆ ಆ್ಯಕ್ಷನ್ ಕಟ್! ಕಿಚ್ಚನ ಕೈರುಚಿಗೆ ಫಿದಾ

Sudeep
Published on

ಕೋಟಿಗೊಬ್ಬ 3 ಹಾಗೂ ವಿಕ್ರಾಂತ್ ರೋಣದ ಕೆಲಸ ಕಾರ್ಯ ಮುಗಿಸಿರುವ ಕಿಚ್ಚ ಸುದೀಪ್ ನಟನೆಯ ಮುಂದಿನ ಸಿನಿಮಾದ ದೊಡ್ಡ ಸುದ್ದಿ ಹೊರಬಿದ್ದಿದೆ. ಖ್ಯಾತ ತಮಿಳು ನಿರ್ದೇಶಕ ಕಿಚ್ಚನಿಗೆ ಡೈರೆಕ್ಟ್ ಮಾಡಲಿದ್ದಾರೆ.

ತಮಿಳಿನ ಸ್ಟಾರ್ ನಟ ಅಜಿತ್ ಕರಿಯರ್'ಗೆ 'ಮಂಕಾಥ' ಮೂಲಕ ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದ ನಿರ್ದೇಶಕ ವೆಂಕಟ್ ಪ್ರಭು ಅವರ ಮುಂದಿನ ಚಿತ್ರಕ್ಕೆ ಕಿಚ್ಚ ಸುದೀಪ್ ಹೀರೋ. ಇಂದು ಕಿಚ್ಚನನ್ನು ಭೇಟಿಯಾಗಿರೋ ವೆಂಕಟ್ ಪ್ರಭು, ಕಿಚ್ಚನ ಕೈರುಚಿ ಸವಿದು ಸಂತಸಗೊಂಡಿದ್ದಾರೆ.ಇದೇ ಖುಷಿಯಲ್ಲಿ ಟ್ವೀಟ್ ಮಾಡಿರೋ ವೆಂಕಟ್ ಪ್ರಭು, ನಿಮ್ಮ ಮುಂದಿನ ಸಿನಿಮಾ ನಿರ್ದೇಶಿಸಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ವೆಂಕಟ್ ಪ್ರಭು ಸುಮಾರು ಹತ್ತು ಸಿನಿಮಾ ‌ನಿರ್ದೆಶಿಸಿದ್ದಾರೆ. ಎಲ್ಲವೂ ತಮಿಳು ಸಿನಿಮಾಗಳು. ಕೆಲ ತಿಂಗಳ ಹಿಂದೆ ತಮ್ಮ ಮುಂದಿನ ಸಿನಿಮಾ 'ಮಾನಾಡು' ಶೂಟಿಂಗ್ ಮುಗಿಸಿದ್ದಾರೆ.

ಕಿಚ್ಚನಿಗೆ ಪ್ರಭುರಿಂದ ಪ್ಯಾನ್ ಇಂಡಿಯಾ ಮೂವೀ?

ಕಿಚ್ಚನಿಗಾಗಿ ವೆಂಕಟ್ ಪ್ರಭು ಪಕ್ಕಾ ಆ್ಯಕ್ಷನ್ ಥ್ರಿಲ್ಲರ್ ಕಥೆ ರೆಡಿ ಮಾಡಿದ್ದಾರೆ ಎನ್ನುವುದು ಬಲ್ಲ‌ ಮೂಲಗಳ ಮಾಹಿತಿ. ಇದರನ್ವಯ ಕಿಚ್ಚನ ಈ ಚಿತ್ರ ಪ್ಯಾನ್ ಇಂಡಿಯಾ ಆಗಲಿದೆ ಎನ್ನಲಾಗಿದೆ. ಸುದೀಪ್ ಹುಟ್ಟುಹಬ್ಬದಂದು ಈ ಸಿನಿಮಾ‌ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಇದೇ ನಿಟ್ಟಿನಲ್ಲಿ ವೆಂಕಟ್ ಪ್ರಭು ಕಿಚ್ಚನ ಮನೆಗೆ ಭೇಟಿ ಕೊಟ್ಟಿದ್ದಾರೆ. ಸದ್ಯಕ್ಕಂತೂ ಈ ನಟ- ನಿರ್ದೇಶಕರ ಭೇಟಿಯ ಫೋಟೋ ಸಖತ್ ಸುದ್ದಿಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net