

ಬೆಂಗಳೂರು: ಕರೊನಾ ಲಾಕ್ಡೌನ್ನಿಂದ ರದ್ದಾಗಿದ್ದ ಬಿಗ್ಬಾಸ್ 8ನೇ ಆವೃತ್ತಿಯು ಮತ್ತೆ ಶುರುವಾಗಿರುವುದು ವೀಕ್ಷಕರಿಗೆ ಖುಷಿತಂದಿದೆ. ಸ್ಪರ್ಧಿಗಳೆಲ್ಲ ಮತ್ತೆ ಮನೆ ಸೇರಿದ್ದು, ಅಸಲಿ ಆಟ ಆರಂಭವಾಗಿದೆ.
ಶೋನಲ್ಲಿರುವ ಮಹಿಳಾ ಸ್ಪರ್ಧಿಗಳ ಬಗ್ಗೆ ಹೇಳುವುದಾದರೆ, ದಿವ್ಯಾ ಉರುಡುಗ ಮತ್ತು ವೈಷ್ಣವಿ ಮೊದಲ ಇನ್ನಿಂಗ್ಸ್ನಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದ್ದರು. ಮನೆಯಿಂದ ಹೊರಬಂದ ನಂತರವೂ ಇಬ್ಬರು ಅಪಾರ ಗಮನವನ್ನು ಮತ್ತು ಖ್ಯಾತಿಯನ್ನು ಪಡೆದಿದ್ದು, ಅವರು ಕೂಡ ನಿರೀಕ್ಷಿಸಿರಲಿಲ್ಲ.
ಮೊದಲ ಇನ್ನಿಂಗ್ಸ್ನಲ್ಲಿ ವೈಷ್ಣವಿಯವರು ಆಟದಲ್ಲಿ ತಮ್ಮ ಸಂಪೂರ್ಣ ತೊಡಗಿಸಿಕೊಳ್ಳದಿದ್ದರೂ ಎರಡನೇ ಇನ್ನಿಂಗ್ಸ್ನಲ್ಲಿ ಮತ್ತೊಂದು ಅವಕಾಶ ದೊರೆತಿದ್ದು, ಈ ಬಾರಿ ಉತ್ತಮವಾಗಿ ಆಡಲಿದ್ದಾರೆ ಎಂಬುದು ಅಭಿಮಾನಿಗಳು ಅಭಿಪ್ರಾಯ. ಬಿಗ್ಬಾಸ್ನ ಟಾಪ್-5 ಸ್ಪರ್ಧಿಗಳಲ್ಲಿ ವೈಷ್ಣವಿ ಸಹ ಒಬ್ಬರಾಗಿರುತ್ತಾರೆ ಎಂದು ಫ್ಯಾನ್ಸ್ ಭವಿಷ್ಯ ನುಡಿದಿದ್ದಾರೆ.
ವೈಷ್ಣವಿ ಅವರನ್ನು ಕೊಂಡಾಡಿರುವ ಅಭಿಮಾನಿಗಳು ಶೂನ್ಯ ದ್ವೇಷಿಗಳನ್ನು ಹೊಂದಿರುವ ಏಕೈಕ ಸ್ಪರ್ಧಿಯೆಂದರೆ ಅದು ವೈಷ್ಣವಿ ಎಂದಿದ್ದಾರೆ. ಹೀಗಾಗಿ ಅಭಿಮಾನಿಗಳು ಇಟ್ಟಿರುವ ನಿರೀಕ್ಷೆಯನ್ನು ವೈಷ್ಣವಿ ಉಳಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್)