ಬಾಯ್​ಫ್ರೆಂಡ್​ಗಾಗಿ ಬರೋಬ್ಬರಿ 175 ಕೋಟಿ ರೂ. ಖರ್ಚು ಮಾಡಿದ ಶ್ರೀಲಂಕಾ ಬ್ಯೂಟಿ!

Jacquelin
Published on

ಮುಂಬೈ: ವೈಯಕ್ತಿಕ ಜೀವನವನ್ನು ಬಹಿರಂಗ ಪಡಿಸಲು ಇಚ್ಛಿಸದ ಬಾಲಿವುಡ್​ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಎಂದಿಗೂ ಡೇಟಿಂಗ್​ ಜೀವನದ ಬಗ್ಗೆ ಎಲ್ಲಿಯೂ ಮುಕ್ತವಾಗಿ ಮಾತನಾಡಿಲ್ಲ. ಆದರೆ, ಇತ್ತೀಚಿನ ವರದಿಯ ಪ್ರಕಾರ ಜಾಕ್ವೆಲಿನ್​ ಐಷಾರಾಮಿ ಬಂಗಲೆಗೆ ತನ್ನ ಬಾಯ್​ಫ್ರೆಂಡ್​ ಜತೆಯಲ್ಲಿ ಸ್ಥಳಾಂತರಗೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ.

ಒಳ್ಳೆಯ ಮನೆಗಾಗಿ ಬಹುದಿನಗಳಿಂದ ಹುಡುಕಾಡುತ್ತಿದ್ದ ಜಾಕ್ವೆಲಿನ್​ಗೆ ಕೊನೆಗೂ ತನ್ನಿಷ್ಟದ ಪರಿಪೂರ್ಣವಾದ ಮನೆ ದೊರಕಿದೆ. ಸುಮಾರು 175 ಕೋಟಿ ರೂ. ಬೆಲೆ ಬಾಳುವ ಬಂಗಲೆಯನ್ನು ಜಾಕ್ವೆಲಿನ್​ ಅಂತಿಮಗೊಳಿಸಿದ್ದು, ತನ್ನ ಬಾಯ್​ಫ್ರೆಂಡ್​ ಜತೆಯಲ್ಲಿ ಅಲ್ಲಿಗೆ ಸ್ಥಳಾಂತರ ಆಗಲಿದ್ದಾರೆಂದು ಹೇಳಲಾಗುತ್ತಿದೆ.

ದಂಪತಿಗಳು ಸ್ವಲ್ಪ ಸಮಯದ ಬಳಿಕ ಒಟ್ಟಿಗೆ ಸ್ಥಳಾಂತರಗೊಳ್ಳಲು ಬಯಸುತ್ತಿದ್ದಾರೆ ಮತ್ತು ಅಂತಿಮವಾಗಿ ಅವರು ಜುಹುದಲ್ಲಿನ ಆಸ್ತಿಯೊಂದನ್ನು ಖಾಲಿ ಮಾಡಲಿದ್ದಾರೆ ಎಂದು ವರದಿಯಾಗಿದೆ.

ತಮ್ಮ ಸಂಬಂಧವನ್ನು ಇಬ್ಬರು ಗಂಭೀರವಾಗಿ ತೆಗೆದುಕೊಂಡಿರುವಂತೆ ಕಾಣುತ್ತಿದೆ. ಅವರು ಅಂತಿಮಗೊಳಿಸಿದ ಮನೆ ಜುಹುವಿನ ಪ್ರಮುಖ ಸ್ಥಳದಲ್ಲಿದ್ದು, ಶ್ರೀಲಂಕಾದ ಬ್ಯೂಟಿ ಶಾಶ್ವತವಾಗಿ ಮುಂಬೈನಲ್ಲಿ ಉಳಿಯಲಿದ್ದಾರೆ. ದಂಪತಿಗಳು ತಮ್ಮ ಮನೆಯ ಒಳಾಂಗಣ ವಿನ್ಯಾಸ ಮಾಡಲು ಫ್ರಾನ್ಸ್‌ನ ಇಂಟೀರಿಯರ್ ಡಿಸೈನರ್‌ನನ್ನು ನೇಮಿಸಿದ್ದಾರೆಂದು ತಿಳಿದುಬಂದಿದೆ..

ಇನ್ನು ಸಿನಿಮಾ ವಿಚಾರಕ್ಕೆ ಬಂದಾಗ ಜಾಕ್ವೆಲಿನ್​, ಭೂತ್​ ಪೊಲೀಸ್​ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸೈಫ್​ ಅಲಿ ಖಾನ್​, ಅರ್ಜುನ್​ ಕಪೂರ್​ ಮತ್ತು ಯಾಮಿ ಗೌತಮ್​ ಮುಖ್ಯಭೂಮಿಕೆಯಲ್ಲಿದ್ದಾರೆ. ರಾಮಸೇತು ಚಿತ್ರದಲ್ಲೂ ಜಾಕ್ವೆಲಿನ್​ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net