ದಿವ್ಯಾ ಅವರೇನು ಕರ್ನಾಟಕದ ಮೊದಲ ಮಹಿಳಾ ಮುಖ್ಯಮಂತ್ರಿನಾ? ನೀವು ಮಾಡ್ತಿರೋದು ಸರಿನಾ?

Divya
Published on

ಬೆಂಗಳೂರು: ದಿವ್ಯಾ ಉರುಡುಗ ಬಿಗ್​ಬಾಸ್​ ಸೀಸನ್​ 8ರ ಪ್ರಖ್ಯಾತ ಸ್ಪರ್ಧಿ ಎಂಬುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ ಟ್ವಿಟರ್​ನಲ್ಲಿ ಟ್ರೆಂಡ್​ ಆದ ಏಕೈಕ ಸ್ಪರ್ಧಿ ಎಂಬ ಹೆಗ್ಗಳಿಕೆ ಹೊಂದಿರುವ ದಿವ್ಯಾ, ತಮ್ಮ ನೈಜ ಆಟದಿಂದ ಬಿಗ್​ ಮನೆಯಲ್ಲಿ ವೀಕ್ಷಕರ ಮೆಚ್ಚಿನ ಸ್ಪರ್ಧಿಯಾಗಿದ್ದಾರೆ.

ಪ್ರಸಕ್ತ ಆವೃತ್ತಿಯ ಮೊದಲ ಮಹಿಳಾ ಕ್ಯಾಪ್ಟನ್​ ಎಂಬ ಖ್ಯಾತಿಯನ್ನು ದಿವ್ಯಾ ಪಡೆದುಕೊಂಡಿದ್ದಾರೆ. ಬಿಗ್​ಬಾಸ್​ ಮೊದಲ ಇನ್ನಿಂಗ್ಸ್​ನಲ್ಲಿ ಉಳಿಸಿಕೊಂಡಿದ್ದ ಇಮೇಜ್​ ಅನ್ನು ಎರಡನೇ ಇನ್ನಿಂಗ್ಸ್​ನಲ್ಲೂ ದಿವ್ಯಾ ಮುಂದುವರಿಸಿದ್ದಾರೆ. ಆದರೆ, ವೀಕ್ಷಕರು ಕಲರ್ಸ್​ ಕನ್ನಡಕ್ಕೆ ಪ್ರಶ್ನೆಯೊಂದನ್ನು ಕೇಳಿದ್ದಾರೆ.

ದಿವ್ಯಾ ಉರುಡುಗ ಅವರು ಮನೆಯಲ್ಲಿ ಇರುವ ಒಬ್ಬಳೇ ಸ್ಪರ್ಧಿ ಎಂಬಂತೆ ಯಾಕೆ ನೀವು ದಿವ್ಯಾರನ್ನು ಹೆಚ್ಚು ಪ್ರಮೋಟ್​ ಮಾಡುತ್ತಿದ್ದೀರಾ ಎಂದು ಕೇಳಿದ್ದಾರೆ. ದಿವ್ಯಾ ಅವರು ಕರ್ನಾಟಕದ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬಂತೆ ಬಿಲ್ಡ್ ಅಪ್ ನೀಡುತ್ತಿದ್ದಾರೆ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net