ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್​ನಲ್ಲಿ ನಟಿಮಣಿಯರ ಬಿಕಿನಿ ಅವತಾರ ಹಿಂದಿರುವ ರಹಸ್ಯ ಬಯಲು!

Maldives-Troll
Published on

ಮುಂಬೈ: ಬಾಲಿವುಡ್​, ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್ವುಡ್​ನ ಸಾಕಷ್ಟು ಸೆಲೆಬ್ರಿಟಿಗಳು ಆಗಾಗ ಮಾಲ್ಡೀವ್ಸ್​ಗೆ ಭೇಟಿ ನೀಡುತ್ತಿರುತ್ತಾರೆ. ನೀಲಾಕಾಶದ ನಡುವೆ ತಿಳಿ ನೀಲಿ ನೀರಿನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು, ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡು ಅಭಿಮಾನಿಗಳ ಬಿಸಿ ಹೆಚ್ಚಿಸುತ್ತಿರುತ್ತಾರೆ.

ಸೆಲೆಬ್ರಿಟಿಗಳ ನೆಚ್ಚಿನ ತಾಣ ಮಾಲ್ಡೀವ್ಸ್​ ಅಂದರೆ, ತಪ್ಪಾಗಲಾರದು. ಅದರಲ್ಲೂ ನಟಿಯರಿಗಂತೂ ಸ್ವರ್ಗವೇ ಸರಿ. ಕಡಲ ಕಿನಾರೆಯಲ್ಲಿ ಮೈಚಳಿ ಬಿಟ್ಟು ಮಿಂದೇಳುತ್ತಾರೆ. ಬಿಕಿನಿ ಧರಿಸಿ ಬೋಲ್ಡ್​ ಅವತಾರದಲ್ಲಿ ಕ್ಯಾಮೆರಾಗೆ ಪೋಸ್​ ನೀಡುತ್ತಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಾರೆ.

ಪ್ರಪಂಚದ ಎಲ್ಲ ಪ್ರವಾಸಿ ತಾಣಗಳಿಗೆ ಹೋಲಿಸಿದರೆ, ಅತಿ ಹೆಚ್ಚು ಸೆಲೆಬ್ರಿಟಿಗಳು ಹೋಗುವುದು ಮಾತ್ರ ಮಾಲ್ಡೀವ್ಸ್​ಗೆ. ಇನ್ನು ನಟಿ ಮಣಿಯರ ಮಾಲ್ಡೀವ್ಸ್​ ಪ್ರವಾಸದ ಹಿಂದೆ ಒಂದು ರಹಸ್ಯವಿದೆ ಎಂದು ಹೇಳಲಾಗುತ್ತಿದೆ. ಅದೇನೆಂದರೆ, ನಟಿಯರು ಈ ಒಂದು ಒಪ್ಪಂದಕ್ಕೆ ಒಪ್ಪಿದರೆ, ಅವರಿಗೆ ಎಲ್ಲವು ಉಚಿತವಾಗಿ ಸಿಗಲಿದೆಯಂತೆ. ಅಲ್ಲಿನ ರೆಸಾರ್ಟ್​, ಊಟ ಸೇರಿದಂತೆ ಎಲ್ಲ ಸೌಲಭ್ಯವು ಉಚಿತವಾಗಿಯೇ ಸಿಗಲಿದೆ ಎಂದು ಹೇಳಲಾಗಿದೆ.

ದಿಶಾ ಪಟಾಣಿ, ರಾಕುಲ್​ ಪ್ರೀತ್​, ಸಮಂತಾ ಅಕ್ಕಿನೇನಿ, ಕಾಜಲ್​ ಅಗರ್​ವಾಲ್​, ಕನ್ನಡದ ಪ್ರಣೀತಾ ಸುಭಾಷ್, ವೇದಿಕಾ, ಮಾಳವಿಕಾ ಮೋಹನನ್​, ಅನುಷ್ಕಾ ಶರ್ಮಾ, ತಮ್ಮನ್ನಾ, ಪೂಜಾ ಹೆಗ್ಡೆ, ರೆಬಾ ಮೋನಿಕಾ ಜಾನ್​, ಆಲಿಯಾ ಭಟ್​, ಶಾನ್ವಿ ಶ್ರೀವಾತ್ಸವ, ಸೋನಾಕ್ಷಿ ಸಿನ್ಹಾ ಸೇರಿದಂತೆ ಬಹುತೇಕ ನಟಿಯರು ಮಾಲ್ಡೀವ್ಸ್​ನಲ್ಲಿ ಮೋಜು ಮಸ್ತಿ ಮಾಡಿ ಬಂದಿದ್ದಾರೆ. ಅಲ್ಲಿ ಸೆರೆಹಿಡಿದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂಗಳಲ್ಲಿ ಹಂಚಿಕೊಂಡಿದ್ದಾರೆ.

ನಟಿಯರಿಗೆ ಮಾಲ್ಡೀವ್ಸ್​ ಉಚಿತ ಪ್ರವಾಸದ ಸೌಲಭ್ಯವಿದೆ ಎನ್ನಲಾಗುತ್ತಿದೆ. ನಟಿಯರು ಬಿಕಿನಿ ಉಡುಗೆಯಲ್ಲಿ ಪೋಸ್​ ನೀಡಿ, ಫೋಟೋಗಳನ್ನು ಜಾಲತಾಣದಲ್ಲಿ ಪೋಸ್ಟ್​ ಮಾಡಿದರೆ, ಅದಕ್ಕೆ ಪ್ರತಿಯಾಗಿ, ನಟಿಯರಿಗೆ ಮಾಲ್ಡೀವ್ಸ್​ನಲ್ಲಿ ಉಚಿತ ಪ್ರವಾಸ ದೊರೆಯುತ್ತಿದೆಯಂತೆ. ಇದೊಂದು ರೀತಿಯ ಪಾವತಿಸಿದ ಪ್ರಚಾರದ ಭಾಗವಾಗಿದೆ. ನಟಿಯರ ಮೂಲಕ ಮಾಲ್ಡೀವ್ಸ್​ ತನ್ನ ಪ್ರವಾಸೋದ್ಯಮವನ್ನು ಪ್ರಚಾರ ಮಾಡುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net