ಯಾರೂ ಹೇಳದ ರಹಸ್ಯವೊಂದನ್ನು ಬಹಿರಂಗಪಡಿಸಿದ ನಟಿ ಹೆಬ್ಬಾ ಪಟೇಲ್​ಗೆ ಅಭಿಮಾನಿಗಳ ಬಹುಪರಾಕ್​!​

Hebah Patel
Published on

ಹೈದರಾಬಾದ್​: ನಟ ಶರಣ್​ ಅಭಿನಯದ ಅಧ್ಯಕ್ಷ ಚಿತ್ರದ ಮೂಲಕ ಸ್ಯಾಂಡಲ್​ವುಡ್​ ಪ್ರವೇಶಿಸಿ, ಮೊದಲ ಚಿತ್ರದಲ್ಲೇ ಕನ್ನಡಿಗರ ಮನ ಗೆದ್ದ ಟಾಲಿವುಡ್​ ಬ್ಯೂಟಿ ಹೆಬ್ಬಾ ಪಟೇಲ್​ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುತ್ತಾರೆ. ಮುಂಬೈ ಮೂಲದ ಹೆಬ್ಬಾ, ಟಾಲಿವುಡ್​ನ ಕುಮಾರಿ 21ಎಫ್​ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಸದ್ಯ ತೆಲುಗಿನಲ್ಲಿ ಬಿಜಿಯಾಗಿದ್ದಾರೆ. ಜಾಲತಾಣದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುವ ಹೆಬ್ಬಾ ತಮ್ಮ ಕುರಿತಾದ ರಹಸ್ಯವೊಂದನ್ನು ಅಭಿಮಾನಿಗಳಿಗೆ ಬಹಿರಂಗಪಡಿಸಿದ್ದಾರೆ.

ಹೆಬ್ಬಾಗೆ ಇತ್ತೀಚೆಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿವೆ. ಅದಕ್ಕೆ ಕಾರಣ ಅವರು ಕೊಂಚ ದಪ್ಪಗಾಗಿದ್ದರು. ಅಭಿಮಾನಿಗಳು ಕೂಡ ಹೆಬ್ಬಾರನ್ನು ನೋಡಿ ನಿಮ್ಮ ದೇಹದ ತೂಕವನ್ನು ಇಳಿಸಿ ಎಂದು ಸಲಹೆ ನೀಡಿದ್ದರು. ಇತ್ತೀಚೆಗೆ ಹೆಬ್ಬಾ ಇನ್​ಸ್ಟಾಗ್ರಾಂ ಲೈವ್​ ಬಂದಿದ್ದರು. ಈ ವೇಳೆ ಅವರನ್ನು ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದರು. ಏಕೆಂದರೆ, ಹೆಬ್ಬಾ ಅವರು ತೆಳ್ಳಗಾಗಿ, ಸಖತ್​ ಆಗಿ ಕಾಣುತ್ತಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನಿಮ್ಮ ಬ್ಯೂಟಿ ಸೀಕ್ರೆಟ್​ ಏನೆಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸುವ ಮೂಲಕ ಹೆಬ್ಬಾ ತಮ್ಮ ಕುರಿತಾದ ರಹಸ್ಯವೊಂದರನ್ನು ಹೊರಗಾಕಿದ್ದಾರೆ.

ತಮ್ಮ ಗುಟ್ಟನ್ನು ಇಲ್ಲಿಯವರೆಗೂ ಯಾರಿಗೂ ಹೇಳದ ಹೆಬ್ಬಾ, ದೇವರು ತನಗೆ ಒಂದಿಷ್ಟು ಸೌಂದರ್ಯ ಕೊಟ್ಟರೆ, ಇನ್ನೊಂದಿಷ್ಟು ಕೆಲವು ವೈದ್ಯರಿಂದ ಬರುತ್ತೆ ಎನ್ನುತ್ತಾರೆ. ಈ ಮೂಲಕ ಹೆಬ್ಬಾ ತನ್ನ ಸೌಂದರ್ಯದ ಗುಟ್ಟನ್ನು ಬಹಿರಂಗಪಡಿಸಿದ್ದು, ಸರ್ಜರಿ ಮಾಡಿಸಿಕೊಂಡಿದ್ದೇನೆ ಎಂದು ಹೇಳಲಾರೆ ಎನ್ನುವ ಮೂಲಕ ರಹಸ್ಯ ಹೊರಗಾಕಿದ್ದಾರೆ. ತುಂಬಾ ಸೆಕ್ಸಿಯಾಗಿ ಕಾಣಲು ಹೆಬ್ಬಾ, ದೇಹದ ರೂಪಾಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಇನ್ನು ಚಿತ್ರರಂಗದಲ್ಲಿ ಈ ಶಸ್ತ್ರಚಿಕಿತ್ಸೆ ಸಾಮಾನ್ಯ. ಆದರೆ, ಯಾರೊಬ್ಬರು ಈ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಆದರೆ, ಹೆಬ್ಬಾ ಮುಕ್ತವಾಗಿ ಹೇಳಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದರೆ, ಹೆಬ್ಬಾ, ಒಡೆಲಾ ರೈಲ್ವೇ ಸ್ಟೇಷನ್​ ಮತ್ತು ಟೆಲಿಸಿವಲ್ಲು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net