ಜನಪ್ರಿಯ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್ ಐಪಿಎಲ್‌ನಲ್ಲಿ ಪುನರಾಗಮನ?

ipl mayanti web
Published on

ಬೆಂಗಳೂರು: ಸುಸ್ಪಷ್ಟ ವಾಗ್ಝರಿ, ಆಕರ್ಷಕ ಧ್ವನಿ, ಗ್ಲಾಮರಸ್ ಲುಕ್ ಮತ್ತು ಆಟದ ಬಗೆಗಿನ ಅಪಾರ ಜ್ಞಾನದಿಂದಾಗಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದ ಜನಪ್ರಿಯ ಟಿವಿ ನಿರೂಪಕಿ ಮಯಾಂತಿ ಲ್ಯಾಂಗರ್. ಆದರೆ ಕಳೆದೆರಡು ವರ್ಷಗಳಿಂದ ಅವರು ಟಿವಿ ಪರದೆಯಿಂದ ಮರೆಯಾಗಿದ್ದರು. ಇದೀಗ ಐಪಿಎಲ್ 15ನೇ ಆವೃತ್ತಿಯ ಮೂಲಕ ಅವರು ಸ್ಟಾರ್ ಸ್ಪೋರ್ಟ್ಸ್ ಚಾನಲ್‌ನಲ್ಲಿ ಕ್ರಿಕೆಟ್ ಕಾರ್ಯಕ್ರಮದ ನಿರೂಪಣೆಗೆ ಮರಳುತ್ತಿದ್ದಾರೆ ಎನ್ನಲಾಗಿದೆ.

ತಾಯ್ತನದಿಂದಾಗಿ ಮಯಾಂತಿ 2020-2021ರ ಕ್ರಿಕೆಟ್ ಋತುವಿನಿಂದ ಬಿಡುವು ಪಡೆದಿದ್ದರು. ಕರ್ನಾಟಕದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಪತ್ನಿ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಹಾಗೂ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಅವರ ಸೊಸೆಯಾಗಿರುವ ಮಯಾಂತಿ, 2020ರ ಸೆಪ್ಟೆಂಬರ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.

2020ರ ಆರಂಭದಲ್ಲಿ ಗರ್ಭಿಣಿಯಾಗಿದ್ದ ನಡುವೆಯೇ ಕೆಲ ಅಂತಾರಾಷ್ಟ್ರೀಯ ಪಂದ್ಯಗಳ ವೇಳೆ ನಿರೂಪಕಿಯಾಗಿದ್ದರು. 2020ರ ಐಪಿಎಲ್ ನಿಗದಿಯಂತೆಯೇ ನಡೆದಿದ್ದರೆ ಅದರಲ್ಲೂ ಮಯಾಂತಿ ನಿರೂಪಕಿ ಆಗಿರುತ್ತಿದ್ದರು. ಆದರೆ ಕರೊನಾದಿಂದಾಗಿ ಟೂರ್ನಿ ಮುಂದೂಡಿಕೆಯಾದ ಕಾರಣ, ಮಯಾಂತಿ ತಾಯ್ತನದ ಬಿಡುವಿಗೆ ಆದ್ಯತೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net