ನೆಟ್ಟಿಗ ಕೇಳಿದ ತೀರಾ ಅಶ್ಲೀಲ ಪ್ರಶ್ನೆಗೆ ಖ್ಯಾತ ಕಿರುತೆರೆ ನಟಿ ಕೊಟ್ಟ ಬೋಲ್ಡ್​ ಉತ್ತರ ಹೀಗಿತ್ತು...

Neelima
Published on

ಚೆನ್ನೈ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್​ ಮಾಡುವ ಹಾಗೂ ಇಲ್ಲಸಲ್ಲದ್ದನ್ನು ಕೇಳಿ ಬೇಸರ ಉಂಟು ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್​ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್​ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ತಮ್ಮ ವಿರುದ್ಧದ ಕಾಮೆಂಟ್​ಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ.

ಇದೀಗ ಅದೇ ರೀತಿಯ ಕಾಮೆಂಟ್​ಗೆ ತಮಿಳಿನ ಖ್ಯಾತ ಕಿರುತೆರೆ ಕಲಾವಿದೆ ನೀಲಿಮಾ ರಾಣಿ ಉತ್ತರವನ್ನು ನೀಡಿದ್ದಾರೆ. ನೀಲಿಮಾ ಅವರು ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅಲ್ಲದೆ, ಕಂಠದಾನ ಕಲಾವಿದೆಯೂ ಹೌದು. ಕಮಲ್​ ಹಾಸನ್​ ಅವರ ದೇವರ ಮಗನ್​ ಸಿನಿಮಾ ಮೂಲಕ ಬಾಲ ಕಲಾವಿದೆಯಾಗಿ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟರು. 2008ರಲ್ಲಿ ತಮ್ಮ ಬಾಯ್​ಫ್ರೆಂಡ್​ ಜೊತೆಯಾದರೆ, ಈ ವರ್ಷದ ಜನವರಿಯಲ್ಲಿ ನೀಲಿಮಾ ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಸಿನಿಮಾ ಹೊರತುಪಡಿಸಿ ನೀಲಿಮಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರೀಯರಾಗಿರುತ್ತಾರೆ. ಅಭಿಮಾನಿಗಳ ಜೊತೆ ಆಗಾಗ ಸಂವಾದವನ್ನು ನಡೆಸುತ್ತಿರುತ್ತಾರೆ. ಇತ್ತೀಚೆಗೆ ಅವರು ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪ್ರಶೋತ್ತರ ಸೆಷೆನ್ಸ್​ ನಡೆಸಿದ್ದರು. ವೇಳೆ ನೆಟ್ಟಿಗನೊಬ್ಬ ಕೇಳಿದ ತೀರಾ ಅಶ್ಲೀಲ ಪ್ರಶ್ನೆಗೆ ಸಖತ್​ ಬೋಲ್ಡ್​ ಆಗಿಯೇ ಉತ್ತರಿಸಿದ್ದಾರೆ.

ನೀವು ಧರಿಸುವ ಒಳಉಡುಪಿನ ಸೈಜ್​ ಎಷ್ಟು? ಎಂದು ನೆಟ್ಟಿಗನೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ನೀಲಿಮಾ ನಾನೇಕೆ ಅದನ್ನು ನಿನಗೆ ಹೇಳಬೇಕು? ನೀನೇನು ಮಾರಾಟ ಮಾಡುತ್ತೀದ್ದೀಯಾ? ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗ ನಿಮಗೆ ಯಾವ ಲೈಂಗಿಕ ಭಂಗಿ ಇಷ್ಟ? ತಿಂಗಳಲ್ಲಿ ಎಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸುತ್ತೀರಾ? ಎಂದು ಕೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿರುವ ನೀಲಿಮಾ, ಇಂತಹ ಕ್ಷೀಣಬುದ್ಧಿ ಪ್ರಶ್ನೆಗಳಿಗೆ ಹೇಗೆ ಉತ್ತರ ನೀಡಲಿ ಎಂದಿದ್ದಾರೆ.

ಕೆಲ ನೆಟ್ಟಿಗರು ಕೇಳಿರುವ ಪ್ರಶ್ನೆಗಳನ್ನು ನೋಡಿ ಅನೇಕ ನೆಟ್ಟಿಗರು ಶಾಕ್​ ಆಗಿದ್ದಾರೆ. ಈ ರೀತಿಯ ಪ್ರಶ್ನೆಗಳನ್ನೆಲ್ಲ ಕೇಳುತ್ತಾರ ಎಂದು ಹುಬ್ಬೇರಿಸಿದ್ದಾರೆ. ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ. ಸೆಲೆಬ್ರಿಟಿಗಳಿಗೂ ಒಂದು ಜೀವನವಿರುತ್ತದೆ. ಅದನ್ನು ಗೌರವಿಸಬೇಕು ಎಂದು ಅನೇಕರು ಕಾಮೆಂಟ್​ ಮೂಲಕ ಅಶ್ಲೀಲ ಕಾಮೆಂಟ್​ಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net