#BBK8: ಪ್ರಶಾಂತ್​ ಸಂಬರಗಿ ವಿರುದ್ಧ ಗಂಭೀರ ಆರೋಪ ಮಾಡಿದ ದಿವ್ಯಾ ಸುರೇಶ್​..!

divya Suresh
Published on

ಬೆಂಗಳೂರು: ಕನ್ನಡ ಟೆಲಿವಿಷನ್​ ಇತಿಹಾಸದಲ್ಲೇ ಬಿಗ್​ಬಾಸ್​ ಶೋ ಅಂತ್ಯಂತ ಜನಪ್ರಿಯತೆ ಗಳಿಸಿರುವ ಕಾರ್ಯಕ್ರಮ ಎಂದರೆ ತಪ್ಪಾಗಲಾರದು. ಅದರಲ್ಲೂ ನಟ ಸುದೀಪ್​ ನಿರೂಪಣೆಯಿಂದಾಗಿ ಬಿಗ್​ಬಾಸ್​ ಭಾರಿ ಜನಮನ್ನಣೆ ಗಳಿಸಿದೆ. ಟಿಆರ್​ಪಿಯಲ್ಲೂ ಶೋ ಹಿಂದೆ ಬಿದ್ದಿಲ್ಲ.

ಕರೊನಾ ಲಾಕ್​ಡೌನ್​ನಿಂದಾಗಿ 75 ದಿನಗಳಿಗೆ ಮೊಟಕುಗೊಂಡಿದ್ದ ಬಿಗ್​ಬಾಸ್​ 8ನೇ ಆವೃತ್ತಿ ಮತ್ತೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದು, ವೀಕ್ಷಕರ ಸಂತಸಕ್ಕೆ ಕಾರಣವಾಗಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ಸ್ಪರ್ಧಿಗಳು ಸಹ ತಮ್ಮ ಗೇಮ್​ ಪ್ಲಾನ್​ ಬದಲಾವಣೆಯೊಂದಿಗೆ ಅಖಾಡಕ್ಕೆ ಇಳಿದಿದ್ದಾರೆ.

ಎಂದಿನಂತೆ ಕಲರ್ಸ್​ ಕನ್ನಡ ಪ್ರೋಮೋ ಮೂಲಕವೇ ಶೋ ಮೇಲೆ ಹೆಚ್ಚು ಕುತೂಹಲ ಮೂಡಿಸುತ್ತದೆ. ಅದರಂತೆಯೇ ಇತ್ತೀಚೆಗೆ ಬಿಡುಗಡೆಯಾದ ಪ್ರೋಮೋದಲ್ಲಿ ದಿವ್ಯಾ ಸುರೇಶ್​ ಮತ್ತು ಪ್ರಶಾಂತ್​ ಸಂಬರಗಿ ವಾಗ್ವಾದಕ್ಕಿಳಿದಿರುವುದು ಹೆಚ್ಚು ಗಮನ ಸೆಳೆದಿದೆ. ದಿವ್ಯಾ ಸುರೇಶ್ ಅವರೊಂದಿಗೆ ಜಗಳವಾಡುತ್ತಿರುವುದು ಕಂಡುಬರುತ್ತದೆ.

ಪ್ರಶಾಂತ್ ಪ್ರತಿವಾರ ನನ್ನ ಮೇಲೆ ಟಾರ್ಗೆಟ್​ ಮಾಡುತ್ತಾರೆ. ನೀವು ಯಾವಾಗಲೂ ನನ್ನನ್ನೇ ಏಕೆ ಟಾರ್ಗೆಟ್​ ಮಾಡುತ್ತೀರಿ ಎಂದು ದಿವ್ಯಾ ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸಿರುವ ಪ್ರಶಾಂತ್ ಸಾಬರಗಿ ನಾಮಿನೇಶನ್​ ಸಮಯದಲ್ಲಿ ಮಾತ್ರ ನಿಮ್ಮ ಬಗ್ಗೆ ಮಾತನಾಡುತ್ತೇನೆ. ಅದನ್ನು ಬಿಟ್ಟು ನಿಮ್ಮನ್ನು ನಾನು ಟಾರ್ಗೆಟ್​ ಮಾಡುತ್ತಿಲ್ಲ ಎಂದು ಸಮರ್ಥನೆ ನೀಡಿದ್ದಾರೆ. ಅವಳು ಉಚಿತ ಸಲಹೆಯನ್ನು ಬಯಸಿದಾಗಲೆಲ್ಲಾ ಕೊಡುವುದೇ ನಾನು ಮಾಡಿವ ತಪ್ಪು ಎಂದರು.

ಪ್ರೋಮೋ ನೋಡಿದ ನೆಟ್ಟಿಗರು ಪ್ರಶಾಂತ್ ಸಂಬರಗಿ ಬೆಂಬಲಕ್ಕೆ ನಿಂತಿದ್ದು, ಅವರು ನ್ಯಾಯಯುತ ಆಟ ಆಡುತ್ತಿದ್ದಾರೆಂದು ಹೊಗಳಿದ್ದಾರೆ. ದಿವ್ಯಾ ಸುರೇಶ್​ ಮೇಲೆಯೇ ವೀಕ್ಷಕರು ಅಸಮಾಧಾನ ಹೊರಹಾಕಿದ್ದಾರೆ. ಈ ಶೋನಲ್ಲಿ ಟಾಪ್​ ಐವರಲ್ಲಿ ಪ್ರಶಾಂತ್​ ಸಂಬರಗಿ ಸಹ ಬರುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಏಕೆಂದರೆ ದಿನದಿಂದ ದಿನಕ್ಕೆ ಅವರ ಖ್ಯಾತಿ ಹೆಚ್ಚಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net