ಒಂದೊಳ್ಳೆ ಬಿಕಿನಿ ಫೋಟೋ ಇದ್ರೆ ಕೊಡಿ...ದಿಶಾ ಪಟಾನಿ ಪೋಸ್ಟ್​ ಮಾಡಿದ ಫೋಟೋ ನೋಡಿ ನೆಟ್ಟಿಗ ಶಾಕ್​!

Disha
Published on

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಬಾಲಿವುಡ್​ ಬ್ಯೂಟಿ ದಿಶಾ ಪಟಾಣಿ ಅವರು ಇನ್​ಸ್ಟಾಗ್ರಾಂನಲ್ಲಿ ಯಾವಾಗಲೂ ಬಿಕಿನಿ ಫೋಟೋಗಳನ್ನೇ ಹೆಚ್ಚಾಗಿ ಹರಿಬಿಡುತ್ತಿರುತ್ತಾರೆ. ಸದಾ ಹಾಟ್​ ಆ್ಯಂಡ್​ ಬೋಲ್ಡ್​ ಆಗಿ ಕಾಣಿಸಿಕೊಳ್ಳುವ ದಿಶಾ, ಇದೀಗ ನೆಟ್ಟಿಗರೊಬ್ಬರ ಬೇಡಿಕೆಯನ್ನು ವಿಚಿತ್ರವಾಗಿ ಈಡೇರಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಪ್ರವಾಸ ಪ್ರಿಯೆ ಆಗಿರುವ ದಿಶಾ, ಶೂಟಿಂಗ್​ ವಿರಾಮದ ವೇಳೆ ತಮ್ಮ ಕನಸಿನ ತಾಣಗಳಿಗೆ ಆಗಾಗ ಭೇಟಿ ನೀಡುವ ಮೂಲಕ ಸಖತ್​ ಎಂಜಾಯ್​ ಮಾಡುತ್ತಾರೆ. ಅಲ್ಲದೆ, ಈ ವೇಳೆ ತಾವು ಸೆರೆಹಿಡಿದಂತಹ ಫೋಟೋಗಳನ್ನು ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುವುದು ಸಾಮಾನ್ಯ. ಅದರಲ್ಲೂ ಹೆಚ್ಚಾಗಿ ಬಿಕಿನಿ ಫೋಟೋಗಳನ್ನೇ ಹರಿಬಿಡುತ್ತಿರುತ್ತಾರೆ.

ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ದಿಶಾ ಅವರು "ಆಸ್ಕ್​ ಮಿ ಎನಿಥಿಂಗ್​" ಸೆಷನ್ಸ್​ ನಡೆಸಿದ್ದರು. ಯಾವುದೇ ಪ್ರಶ್ನೆಗಳನ್ನು ಮುಕ್ತವಾಗಿ ಕೇಳಲು ನೆಟ್ಟಿಗರಿಗೆ ದಿಶಾ ತಿಳಿಸಿದ್ದರು. ಈ ವೇಳೆ ನೆಟ್ಟಿಗನೊಬ್ಬ ನಿಮ್ಮ ಯಾವುದಾದರೊಂದು ಒಳ್ಳೆಯ ಬಿಕಿನಿ ಫೋಟೋ ಕೊಡಿ ಎಂದು ಕೇಳಿದ್ದ. ಇದಕ್ಕೆ ಖಡಕ್​ ಉತ್ತರ ನೀಡಿರುವ ದಿಶಾ, ಪಾಂಡಾ ರೀತಿಯ ಪ್ರಾಣಿ, ಬಿಕಿನಿ ತೊಟ್ಟಿರುವ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್​ ಮಾಡಿದ್ದಾರೆ. ಇದೀಗ ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ದಿಶಾ, 2022 ರಲ್ಲಿ ಎರಡು ದೊಡ್ಡ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧರ್ಮ ಪ್ರೊಡಕ್ಷನ್ಸ್‌ನ ಆಕ್ಷನ್-ಫ್ರಾಂಚೈಸ್ 'ಯೋಧ' ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜತೆ ನಟಿಸಿದ್ದಾರೆ. ಮೋಹಿತ್ ಸೂರಿ ಅವರ 'ಏಕ್ ವಿಲನ್ ರಿಟರ್ನ್ಸ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಜಾನ್ ಅಬ್ರಹಾಂ, ಅರ್ಜುನ್ ಕಪೂರ್ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net