ಪ್ಯಾಂಟ್​ ಇಲ್ಲದ ಜೀವನ ಬೇಕೆಂದ ಗೋವಾ ಬ್ಯೂಟಿ ಇಲಿಯಾನಾಗೆ ನೆಟ್ಟಿಗರು ಹೇಳಿದ್ದು ಹೀಗೆ...

Illeana
Published on

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ನಟಿ ಇಲಿಯಾನಾ ಡಿಕ್ರೂಜ್ ಇನ್​ಸ್ಟಾಗ್ರಾಂನಲ್ಲಿ ಯಾವಾಗಲೂ ಬಿಕಿನಿ ಫೋಟೋಗಳನ್ನೇ ಹೆಚ್ಚಾಗಿ ಹರಿಬಿಡುತ್ತಿರುತ್ತಾರೆ. ಸದಾ ಹಾಟ್​ ಆ್ಯಂಡ್​ ಬೋಲ್ಡ್​ ಆಗಿ ಕಾಣಿಸಿಕೊಳ್ಳುವ ಇಲಿಯಾನಾ ಈ ಬಾರಿಯ ಬೋಲ್ಡ್​ ಹೇಳಿಕೆಯನ್ನು ನೀಡುವ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ.

ಪ್ರವಾಸ ಪ್ರಿಯೆ ಆಗಿರುವ ಇಲಿಯಾನಾ ಶೂಟಿಂಗ್​ ವಿರಾಮದ ವೇಳೆ ತಮ್ಮ ಕನಸಿನ ತಾಣಗಳಿಗೆ ಆಗಾಗ ಭೇಟಿ ನೀಡುವ ಮೂಲಕ ಸಖತ್​ ಎಂಜಾಯ್​ ಮಾಡುತ್ತಾರೆ. ಅಲ್ಲದೆ, ಈ ವೇಳೆ ತಾವು ಸೆರೆಹಿಡಿದಂತಹ ಫೋಟೋಗಳನ್ನು ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುವುದು ಸಾಮಾನ್ಯ. ಅದರಲ್ಲೂ ಹೆಚ್ಚಾಗಿ ಬಿಕಿನಿ ಫೋಟೋಗಳನ್ನೇ ನಟಿ ಹರಿಬಿಡುತ್ತಿರುತ್ತಾರೆ.

ಇದೀಗ ಹಳೆಯ ಬಿಕಿನಿ ಫೋಟೋವೊಂದನ್ನು ಮತ್ತೆ ಶೇರ್​ ಮಾಡಿರುವ ಇಲಿಯಾನಾ ಐ ಆ್ಯಮ್​ ಆಲ್​ ಅಬೌಟ್​ ನೋ ಪ್ಯಾಂಟ್​ ಲೈಫ್ ಎಂದು ಬರೆದುಕೊಂಡಿದ್ದಾರೆ. ಅಂದರೆ ಇಲಿಯಾನಾಗೆ ಪ್ಯಾಂಟೇ ಇಲ್ಲದ ಜೀವನ ಬೇಕಂತೆ.

ಇಲಿಯಾನಾರ ಈ ಹೇಳಿಕೆ​ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ. ಪ್ರತಿಕ್ರಿಯೆ ನೀಡಿರುವ ಅನೇಕ ನೆಟ್ಟಿಗರು ನಿಮ್ಮ ನಿರ್ಧಾರಕ್ಕೆ ನಮ್ಮ ಸಂಪೂರ್ಣ ಒಪ್ಪಿಗೆ ಇದೆ. ನಿಮ್ಮ ನಿರ್ಧಾರದಿಂದ ನಮಗೇನು ತೊಂದರೆ ಇಲ್ಲ. ಅಂದರೆ ನೀವು ಶಿಶು ಜೀವನ ಬಯಸಿದ್ದೀರಾ ಎಂದೆಲ್ಲ ಕಮೆಂಟ್​ ಮಾಡಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಇಲಿಯಾನಾ ಕೊನೆಯದಾಗಿ ಅಭಿಶೇಕ್​ ಬಚ್ಚನ್​ ಅಭಿನಯದ ಬಿಗ್​ಬುಲ್​ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ ಒಟಿಟಿಯಲ್ಲಿ ಬಿಡುಗಟಡೆಯಾಗಿ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net