

ಬೆಂಗಳೂರು: ಬಿಗ್ಬಾಸ್ ಕನ್ನಡದ ಒಟಿಟಿ ಎರಡು ವಾರ ಪೂರ್ಣಗೊಳಿಸಿ ಮೂರನೇ ವಾರಾಂತ್ಯಕ್ಕೆ ಲಗ್ಗೆ ಇಟ್ಟಿದೆ. ಮೊದಲ ವಾರದಲ್ಲಿ ಕಿರಣ್ ಯೋಗೇಶ್ವರ್ ಅವರು ಮನೆಯಿಂದ ಹೊರಬಂದರೆ, ಎರಡನೇ ವಾರದಲ್ಲಿ ಸ್ಫೂರ್ತಿಗೌಡ ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇದೀಗ ಮೂರನೇ ವಾರದಲ್ಲಿ ಯಾರು ದೊಡ್ಮನೆ ತೊರೆಯಲ್ಲಿದ್ದಾರೆ ಎಂಬ ಊಹೆಗಳು ನಡೆಯುತ್ತಿದೆ. ಇದರ ನಡುವೆ ಎಲಿಮಿನೇಶನ್ ವಿಚಾರದಲ್ಲಿ ರಾಕೇಶ್ ಅಡಿಗ ಸುದ್ದಿಯಾಗಿದ್ದಾರೆ.
ಕನ್ನಡದ ರ್ಯಾಪರ್ ರಾಕೇಶ್ ಅಡಿಗ ಸ್ಯಾಂಡಲ್ವುಡ್ನ ಯುವ ನಟರ ಪೈಕಿ ಒಬ್ಬರು. ಜೋಶ್ ಮೂಲಕ ಎಲ್ಲರ ಮನ ಗೆದ್ದ ರಾಕೇಶ್ ಅವರಿಗೆ ನಂತರ ಬಂದ ಯಾವ ಸಿನಿಮಾಗಳು ಕೈ ಹಿಡಿಯಲಿಲ್ಲ. ಸದ್ಯ ಸಿನಿಮಾದಿಂದ ಕೊಂಚ ಅಂತರ ಕಾಯ್ದುಕೊಂಡಿರುವ ರಾಕೇಶ್, ಸದ್ಯ ಬಿಗ್ಬಾಸ್ ಕನ್ನಡ ಒಟಿಟಿ ಸೀಸನ್ 1ರ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಬಿಗ್ಬಾಸ್ನಲ್ಲಿ ಸ್ಪರ್ಧಿಸಿದ ಬಳಿಕ ರಾಕೇಶ್ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಲ್ಲದೆ, ಅಭಿಮಾನಿಗಳು ರಾಕೇಶ್ ಅವರ ಹೆಸರನ್ನು ಜಾಲತಾಣದಲ್ಲಿ ಟ್ರೆಂಡ್ ಸಹ ಮಾಡುತ್ತಿದ್ದಾರೆ.
ರಾಕೇಶ್ ಈಗಾಗಲೇ ಬಿಗ್ಬಾಸ್ ಮನೆಯಲ್ಲಿ ಎಲಿಮಿನೇಶನ್ಗೆ ನಾಮಿನೇಟ್ ಆಗಿದ್ದರು ಅತ್ಯಧಿಕ ಮತಗಳಿಂದ ಮನೆಯಲ್ಲೇ ಪ್ರತಿ ವಾರ ಉಳಿದುಕೊಳ್ಳುತ್ತಿದ್ದಾರೆ. ಐದು ಫೈನಲ್ ಸ್ಪರ್ಧಿಗಳಲ್ಲಿ ರಾಕೇಶ್ ಕೂಡ ಇರುತ್ತಾರೆ ಎಂದು ನೆಟ್ಟಿಗರು ಊಹಿಸಿದ್ದಾರೆ. ಅಲ್ಲದೆ, ಬಿಗ್ಬಾಸ್ ವಿಜೇತರು ಆಗಬಹುದು ಎಂದು ಅಂದಾಜಿಸಿದ್ದಾರೆ.
ಆದರೆ, ಒಂದು ವರ್ಗದ ವೀಕ್ಷಕರು ಹೇಳುವ ಪ್ರಕಾರ ರಾಕೇಶ್ ಅಡಿಗ ಬಲವಾದ ಪಿಆರ್ ಟೀಮ್ ಹೊಂದಿದ್ದಾರಂತೆ. ಟಾಸ್ಕ್ನಲ್ಲಿ ಸರಿಯಾಗಿ ನಿರ್ವಹಣೆ ತೋರದಿದ್ದರೂ ಪಿಆರ್ ಟೀಮ್ ಮೂಲಕ ರಾಕೇಶ್ ಎಲಿಮಿನೇಶನ್ನಿಂದ ಬಚಾವ್ ಆಗುತ್ತಿದ್ದಾರೆ ಎಂದು ಕೆಲ ವೀಕ್ಷಕರು ಹೇಳುತ್ತಿದ್ದಾರೆ. ಅಲ್ಲದೆ, ಪ್ರತಿ ಬಿಗ್ ಬಾಸ್ ಸ್ಪರ್ಧಿಗಳು ಅವರಿಗೆ ಬೇರೂರಲು ಪಿಆರ್ ತಂಡಗಳನ್ನು ನೇಮಿಸಿಕೊಳ್ಳುತ್ತಾರೆ ಮತ್ತು ಹಿಂದೆ ಸೇರಿದಂತೆ ಎಲ್ಲಾ ಭಾಷೆಗಳ ಬಿಗ್ಬಾಸ್ನಲ್ಲಿಯೂ ಇದು ನಡೆಯುತ್ತಿದೆ. PR ತಂಡವು ನಿರ್ದಿಷ್ಟ ಸ್ಪರ್ಧಿಯನ್ನು ಕಾರ್ಯಕ್ರಮದಿಂದ ಹೊರಹಾಕುವುದನ್ನು ತಡೆಯಲು ಅವರನ್ನು ಉತ್ತೇಜಿಸುತ್ತದೆ. ಬಲವಾದ ಪಿಆರ್ ಟೀಮ್ ನೇಮಕ ಮಾಡಿಕೊಂಡರು, ಕೆಲವೊಮ್ಮೆ ಶೇಕಡವಾರು ಮತಗಳಿಂದಾಗಿ ಮನೆಯಿಂದ ಹೊರ ನಡೆಯಬೇಕಾದ ಅನಿವಾರ್ಯತೆ ಎದುರಾಗುತ್ತದೆ.
ಸದ್ಯ ರಾಕೇಶ್ ತಮ್ಮ ಉತ್ತಮವಾದದ್ದನ್ನು ನೀಡಲು ಪ್ರಯತ್ನ ಪಡುತ್ತಿದ್ದಾರೆ. ಇತ್ತೀಚೆಗೆ ಟಾಸ್ಕ್ಗಳಲ್ಲಿಯೂ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಜನರ ಮನ ಗೆದ್ದರೆ, ರಾಕೇಶ್, ಬಿಗ್ಬಾಸ್ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)