ಇಂಡಿಯನ್​ ಟೆಲಿವಿಷನ್​ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಬಿಗ್​ಬಾಸ್​ 8ನೇ ಆವೃತ್ತಿ!

BBK8
Published on

ಬೆಂಗಳೂರು: ಕರೊನಾ ಲಾಕ್​ಡೌನ್​ನಿಂದ 75 ದಿನಗಳಿಗೆ ಮೊಟಕುಗೊಂಡಿದ್ದ ಬಿಗ್​ಬಾಸ್​ 8ನೇ ಆವೃತ್ತಿಯು ಎರಡನೇ ಇನ್ನಿಂಗ್ಸ್​ ಆರಂಭಿಸಲು ಸಜ್ಜಾಗಿದೆ. ಈಗಾಗಲೇ ಎರಡನೇ ಇನ್ನಿಂಗ್ಸ್​ ಪ್ರೋಮೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶೋ ಪ್ರಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.

ಇನ್ನು ಎರಡನೇ ಇನ್ನಿಂಗ್ಸ್​ ಆರಂಭಿಸುವ ಮೂಲಕ ಟಿವಿ ರಿಯಾಲಿಟಿ ಶೋಗಳಲ್ಲಿ ಕಲರ್ಸ್​ ಕನ್ನಡ ಹೊಸ ಇತಿಹಾಸವೊಂದನ್ನು ಬರೆಯುತ್ತಿದೆ. ಹೇಗೆಂದು ತಿಳಿಯಲು ಮುಂದೆ ಓದಿ. ಕರೊನಾ ಲಾಕ್​ಡೌನ್​ನಿಂದಾಗಿ ರಿಯಾಲಿಟಿ ಶೋ ಅನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಮತ್ತೆ ಮುಂದುವರಿಯುತ್ತಾ ಎಂಬ ಬಗ್ಗೆ ಯಾವುದೇ ಸುಳಿವು ಸಹ ಇರಲಿಲ್ಲ. ಆದರೆ, ಮತ್ತೆ ಶೋ ಆರಂಭಿಸುವುದಾಗಿ ಕಲರ್ಸ್​ ಕನ್ನಡ ಘೋಷಣೆ ಮಾಡಿದ್ದು ಬಹುತೇಕರಿಗೆ ಅಚ್ಚರಿಯ ವಿಷಯ. ಇನ್ನು ಕಳೆದ ವರ್ಷ ಮಲಯಾಳಂನಲ್ಲಿ ಲಾಕ್​ಡೌನ್​ನಿಂದ ಮೊಟಕುಗೊಂಡ ಶೋ ಮತ್ತೆ ಆರಂಭವಾಗಲೇ ಇಲ್ಲ. ಈ ವೇಳೆ ಯಾವುದೇ ವಿಜೇತರ ಘೋಷಣೆಯನ್ನು ಮಾಡಲಿಲ್ಲ. ಬದಲಾಗಿ ಹೊಸ ಸ್ಪರ್ಧಿಗಳೊಂದಿಗೆ ಶೋ ಅನ್ನು ಆರಂಭಿಸಿದರು.

ಆದರೆ, ಈ ನಿಟ್ಟಿನಲ್ಲಿ ಕಲರ್ಸ್​ ಕನ್ನಡ ಹೊಸ ಇತಿಹಾಸ ಬರೆದಿದೆ. ಅರ್ಧಕ್ಕೆ ನಿಂತಿದ್ದ ಶೋ ಅನ್ನು ಮತ್ತೆ ಆರಂಭಿಸಿದೆ. ಈ ರೀತಿ ಯಾವುದೇ ಶೋನಲ್ಲಿಯೂ ನಡೆದಿಲ್ಲ. ಇಂಡಿಯನ್​ ಟೆಲಿವಿಷನ್​ ಇತಿಹಾಸದಲ್ಲೇ ಇದೇ ಮೊದಲು. ಹೀಗಾಗಿ ಎರಡನೇ ಇನ್ನಿಂಗ್ಸ್​ ಯಾವ ರೀತಿ ಆರಂಭವಾಗುತ್ತದೆ ಎಂಬ ಕುತೂಹಲ ವೀಕ್ಷಕರಲ್ಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net