ನಮಸ್ತೆ ಘೋಷ್ಟ್​ ಚಿತ್ರಕ್ಕೂ ಸುದೀಪ್​ಗೂ ಸಂಬಂಧವಿಲ್ಲ: ಸುಳ್ಳು ಸುದ್ದಿ ಬೆನ್ನಲ್ಲೇ ಚಿತ್ರತಂಡದಿಂದ ಸ್ಪಷ್ಟನೆ

Sudeep
Published on

ಬೆಂಗಳೂರು: ಭರತ್​ ನಂದ ನಿರ್ದೇಶನದ ನಮಸ್ತೆ ಘೋಷ್ಟ್​ ಹೆಸರಿನ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರು ನಟಿಸಲಿದ್ದಾರೆ ಎಂಬ ಸುದ್ದಿ ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆ ಬಗ್ಗೆ ಕೆಲವು ಸುದ್ದಿ ಮಾಧ್ಯಮಗಳು ವರದಿ ಮಾಡಿತ್ತು. ಆದರೆ, ಆ ಸುದ್ದಿ ಸುಳ್ಳಾಗಿದ್ದು, ನಮಸ್ತೆ ಘೋಷ್ಟ್​ ಚಿತ್ರದಲ್ಲಿ ಸುದೀಪ್​ ನಟಿಸುತ್ತಿಲ್ಲ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ.

ನಮಸ್ತೆ ಸರ್... ‌ನನ್ನ ಹೆಸರು ಭರತ್ ನಂದ, ನನ್ನ ಮೊದಲನೇಯ ಸಿನಿಮಾ "ಡಯಾನ ಹೌಸ್" ಅಂತ ಹಾರರ್ ಮೂವಿ. ಈಗ ಮತ್ತೊಂದು ಹಾರರ್ ಸಿನಿಮಾ "ನಮಸ್ತೆ ಘೋಷ್ಟ್" ಅಂತ ಶೂಟಿಂಗ್ ಮುಕ್ತಾಯ ಆಗಿದೆ. ಈ ಒಂದು ವಿಷಯಕ್ಕಾಗಿ ಇದೇ ಜನವರಿ 3ನೆಯ ತಾರೀಖಿನಂದು ಫಸ್ಟ್ ಲುಕ್‌ ಪೋಸ್ಟರ್​ನ ಅಧಿಕೃತವಾಗಿ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಲಾಯಿತು.

ಮರುದಿನ ಆ ಪೋಸ್ಟರಲ್ಲಿ ನಿಂತಿರುವ ನಟ ಕಿಚ್ಚ ಸುದೀಪ್ ರವರೆಂದು ಸುದೀಪರವರ ಮುಂದಿನ ಚಿತ್ರವೆಂದು ತಪ್ಪಾಗಿ ಭಾವಿಸಿ ಸೋಷಿಯಲ್‌ ಮೀಡಿಯಾ ದಲ್ಲಿ ವೈರಲಾಯ್ತು. ಈ ವಿಷಯ ತಿಳಿದು ನಮ್ಮ "ಚಿರಾಯು ಕ್ರಿಯೇಟಿವ್ ಸಿನಿಮಾಸ್" ಅಫೀಶಿಯಲ್ ಪೇಜ್​ನಲ್ಲಿ ಇದು ಸುಳ್ಳು ಸುದ್ದಿ ಆ ಪೋಸ್ಟರಲ್ಲಿರುವ ನಟ ಭರತ್‌ನಂದ ಹಾಗೂ ರಚನೆ ನಿರ್ದೇಶನ ಕೂಡ ಅವರದೇ" ಎಂದು ಹೇಳಿ ಪೋಸ್ಟ್ ಮಾಡಿದಿವಿ. ಆದ್ರೂನೂ ಎಲ್ಲಾ ಮೀಡಿಯಾದಲ್ಲಿ ಇನ್ನೂ ಜಾಸ್ತಿ ವೈರಲ್ಲಾಗ್ತಿರೋದ್ರಿಂದ ಇದು ಬೇರೆ ರೀತಿಯಲ್ಲಿ ಕಿಚ್ಚ ಸುದೀಪ್​ರವರಿಗಾಗಲಿ ಅವರ ಅಭಿಮಾನಿಗಳಿಗಾಗಲಿ ನಮ್ಮ ಸಿನಿಮಾ ಕಂಟೆಂಟ್​ ಉಪಯೋಗಿಸಿ ಬೇರೆ ಯಾರೋ ಮಾಡಿರುವ ಫೇಕ್ ನ್ಯೂಸ್​ನಿಂದ ನೆಗೆಟಿವ್​ ಆಗಿ ರೀಚಾಗಬಾರದೆಂದು ಇದನ್ನು ನಿಮಗೆ ತಿಳಿಸುತಿದ್ದೇವೆ.

ಇಷ್ಟರಲ್ಲೆ ಒಂದು ಪ್ರೆಸ್ ಮೀಟ್ ಮಾಡಿ ನಮ್ಮ "ನಮಸ್ತೆ ಘೋಷ್ಟ್" ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಸಂಪೂರ್ಣವಾಗಿ ಮಾಹಿತಿ ನೀಡಿ ಕ್ಲಾರಿಫಿಕೇಷನ್ ನೀಡುತ್ತೇವೆ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net