ಬಿಗ್​ಬಾಸ್​ ಮನೆಯಿಂದ ಹೊರಬಂದ ಸ್ಫೂರ್ತಿ ಗೌಡ ಎರಡೇ ವಾರದಲ್ಲಿ ಗಳಿಸಿದ ಹಣ ಇಷ್ಟೊಂದಾ?

Spoorthy 1
Published on

ಬೆಂಗಳೂರು: ಬಿಗ್​ಬಾಸ್​ ಕನ್ನಡದ ಒಟಿಟಿ ಎರಡು ವಾರ ಪೂರ್ಣಗೊಳಿಸಿ ಮೂರನೇ ವಾರಕ್ಕೆ ಲಗ್ಗೆ ಇಟ್ಟಿದೆ. ಮೊದಲ ವಾರದಲ್ಲಿ ಕಿರಣ್​ ಯೋಗೇಶ್ವರ್​ ಅವರು ಮನೆಯಿಂದ ಹೊರಬಂದರೆ, ಎರಡನೇ ವಾರದಲ್ಲಿ ಸ್ಫೂರ್ತಿಗೌಡ ಬಿಗ್​ಬಾಸ್​ ಮನೆಯಿಂದ ಎಲಿಮಿನೇಟ್​ ಆಗಿದ್ದಾರೆ.

ಎಲಿನಿನೇಷನ್​ ಸುತ್ತಿನಲ್ಲಿ ಸ್ಫೂರ್ತಿ ಮತ್ತು ಅಕ್ಷತಾ ಕುಕ್ಕಿ ಕೊನೆಯಲ್ಲಿದ್ದರು. ಅಂತಿಮವಾಗಿ ಸ್ಫೂರ್ತಿ ಹೊರಬಂದಿದ್ದಾರೆ. ರಾಕೇಶ್​ ಅಡಿಗ ಮತ್ತು ಸ್ಫೂರ್ತಿ ನಡುವಿನ ಲವ್​ ಟ್ರ್ಯಾಕ್​ಗಾಗಿ ಸ್ಫೂರ್ತಿ ಅವರನ್ನು ಎಲಿಮಿನೇಟ್​ ಮಾಡದೆ ಉಳಿಸಿಕೊಳ್ಳುತ್ತಾರೆ ಎಂದು ವೀಕ್ಷಕರು ಭಾವಿಸಿದ್ದರು. ಆದರೆ, ಸ್ಫೂರ್ತಿಗೌಡ ಮನೆಯಿಂದ ಆಚೆ ಬಂದಿರುವುದು ನಿಜಕ್ಕೂ ವೀಕ್ಷಕರಿಗೆ ಅಚ್ಚರಿಯಾಗಿದೆ.

ಲವ್​ ಗಾಸಿಪ್​ ಬಿಟ್ಟರೆ, ಟಾಸ್ಕ್​ ವಿಚಾರದಲ್ಲಿ ಸ್ಫೂರ್ತಿ ಕಳಪೆಯಾಗಿದ್ದರು. ಯಾವುದೇ ಟಾಸ್ಕ್​ ಕೊಟ್ಟರೂ ಸರಿಯಾಗಿ ನಿಭಾಯಿಸುತ್ತಿರಲಿಲ್ಲ ಮತ್ತು ವೀಕ್ಷಕರ ಗಮನ ಸೆಳೆಯುವಂತಹ ಯಾವುದೇ ಪ್ರದರ್ಶನ ನೀಡುತ್ತಿರಲಿಲ್ಲ. ಕಳೆದ ವೀಕೆಂಡ್​ ಎಪಿಸೋಡ್​ ನಿರೂಪಕ ಕಿಚ್ಚ ಸುದೀಪ್​ ಕೂಡ ಸ್ಫೂರ್ತಿಗೆ ಕ್ಲಾಸ್​ ತೆಗೆದುಕೊಂಡಿದ್ದರು. ಕೊನೆಗೆ ಸ್ಫೂರ್ತಿಯೇ ಎಲಿಮಿನೇಟ್​ ಆಗಿದ್ದು, ಇನ್ನು ಮುಂದೆ ರಾಕೇಶ್​ ಮತ್ತು ಸ್ಫೂರ್ತಿಯ ವಿನೋದವನ್ನು ವೀಕ್ಷಕರು ಮಿಸ್​ ಮಾಡಿಕೊಳ್ಳಲಿದ್ದಾರೆ.

ಇನ್ನು ಸ್ಫೂರ್ತಿ ಗೌಡ ಅವರು ಬಿಗ್​ಬಾಸ್​ನಲ್ಲಿ ಗಳಿಸಿದ ಹಣವೆಷ್ಟು ಎಂಬ ವಿಚಾರಕ್ಕೆ ಬರುವುದಾದರೆ, ಒಂದು ಮೂಲಗಳ ಪ್ರಕಾರ ಸ್ಫೂರ್ತಿ ಅವರು ಒಂದು ವಾರಕ್ಕೆ 2.5 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದರಂತೆ. ಎರಡು ವಾರಗಳ ಕಾಲ ಮನೆಯಲ್ಲಿದ್ದರು. ಒಟ್ಟು ಸುಮಾರು 7 ಲಕ್ಷ ರೂಪಾಯಿ ಹಣವನ್ನು ಸ್ಫೂರ್ತಿ ಸಂಪಾದಿಸಿದ್ದಾರೆಂದು ತಿಳಿದುಬಂದಿದೆ.

ಮೂರನೇ ವಾರದ ಎಲಿಮಿನೇಷನ್​ನಲ್ಲಿ ಜ್ಯೋತಿಷಿ ಆರ್ಯವರ್ಧನ್​, ರೂಪೇಶ್​ ಶೆಟ್ಟಿ, ಅಕ್ಷತಾ ಕುಕಿ, ಚೈತ್ರಾ, ಸೋಮಣ್ಣ ಮಾಚಿಮಾಡ, ಜಯಶ್ರೀ ಆರಾಧ್ಯ ಮತ್ತು ಉದಯ್​ ಸೂರ್ಯ ನಾಮಿನೇಟ್​ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net