ಅರಿಯಾನಾ ಸೊಂಟಕ್ಕೆ ಆಶು ರೆಡ್ಡಿ ಕಿಸ್​: ಲೆಸ್ಬಿಯನ್​ ಎಂದ ನೆಟ್ಟಿಗನಿಗೆ ನಟಿ ಕೊಟ್ಟ ಉತ್ತರ ಹೀಗಿತ್ತು...

1229151
Published on

ಹೈದರಾಬಾದ್​: ಸದಾ ವಿವಾದಗಳಿಂದಲೇ ಸುದ್ದಿಯಾಗುವ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಅವರ ಸಂಗಡ ಮಾಡಿ ಬಿಗ್​ಬಾಸ್​ ಬ್ಯೂಟಿಗಳಾದ ಆಶು ರೆಡ್ಡಿ ಮತ್ತು ಅರಿಯಾನಾ ಗ್ಲೋರಿ ಕೂಡ ಇತ್ತೀಚೆಗೆ ಹೆಚ್ಚು ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದಾರೆ.

ಆರ್​ಜಿವಿ ಜತೆ ಲೈಂಗಿಕ ವಿಷಯಗಳ ಬಗ್ಗೆ ಆಶು ರೆಡ್ಡಿ ಮತ್ತು ಅರಿಯಾನಾ ಈ ಹಿಂದೆ ಬೋಲ್ಡ್​ ಆಗಿ ಮಾತನಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದರು. ಅಲ್ಲದೆ, ಅನೇಕರ ಕೆಂಗಣ್ಣಿಗೂ ಗುರಿಯಾಗಿದ್ದರು. ಬಿಗ್​ಬಾಸ್​ನಿಂದ ಹೊರಬಂದಾಗಿನಿಂದ ಸಿನಿಮಾ ಮತ್ತು ಶೋಗಳಲ್ಲಿ ಇಬ್ಬರು ತುಂಬಾ ಬಿಜಿಯಾಗಿದ್ದಾರೆ. ಇತ್ತೀಚೆಗೆ ಇಬ್ಬರು ಪಾಲ್ಗೊಂಡಿದ್ದ ಶೋನಲ್ಲಿ ತೆಗೆದುಕೊಂಡಿರುವ ಫೋಟೋವೊಂದು ಭಾರೀ ವೈರಲ್​ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಫೋಟೋದಲ್ಲಿ ಆಶು ರೆಡ್ಡಿ ಅವರು ಅರಿಯಾನಾ ಸೊಂಟಕ್ಕೆ ಮುತ್ತುಕೊಡುವ ದೃಶ್ಯವಿದೆ. ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿರುವ ಆಶು, ಸಾಟಿಯಿಲ್ಲದ ಅಭಿವ್ಯಕ್ತಿ ಎಂದು ಬರೆದುಕೊಂಡಿದ್ದಾರೆ.

ಆದರೆ, ನೆಟ್ಟಿಗರು ಆಶು ಮತ್ತು ಅರಿಯಾನಾರನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ. ಈ ಪೋಸ್ಟ್‌ನಿಂದ ಏನು ಪ್ರಯೋಜನ ಎಂದು ಯಾರಿಗಾದರೂ ತಿಳಿದಿದೆಯೇ? ಎಂದು ನೆಟ್ಟಿಗರೊಬ್ಬರು ಕೇಳಿದರೆ, ಈ ಫೋಟೋವನ್ನು ಆರ್​ಜಿವಿ ನೋಡಲೇಬೇಕೆಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್​ ಮಾಡಿದ್ದಾನೆ. ಸಲಿಂಗಕಾಮಿಗಳು ಎಂಬ ಪದವನ್ನು ಕೇಳಿದ್ದರೆ, ನೀವು ಇದೀಗ ಅದನ್ನು ನೋಡುತ್ತಿದ್ದೀರಿ ಎಂದರ್ಥ ಎಂದು ಇನ್ನೊಬ್ಬ ನೆಟ್ಟಿಗೆ ಇಬ್ಬರನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದಾರೆ.

ಫೋಟೋ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಆಶು, ಒಳ್ಳೆಯದೋ ಅಥವಾ ಕೆಟ್ಟದ್ದೋ ಜನರು ಯಾವಾಗಲೂ ನಮ್ಮನ್ನು ಜಡ್ಜ್​ ಮಾಡುತ್ತಿರುತ್ತಾರೆ. ಆದರೆ, ನಮ್ಮ ಕ್ರೇಜಿನೆಸ್​ ಅನ್ನು ಮಾತ್ರ ನಾವು ಬಿಡುವುದಿಲ್ಲ. ಏಕೆಂದರೆ, ಈ ಕ್ರೇಜಿನೆಸ್​ ನಮ್ಮನ್ನು ಇತರರಿಗಿಂತ ಹೆಚ್ಚು ವಿಶೇಷವಾಗಿಸುತ್ತದೆ. ಇದನ್ನು ನಾವು ಆರ್​ಜಿವಿ ಅವರಿಂದ ಕಲಿತಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net