More

    ಇವತ್ತು ನಿನಗೆ ಶಾಂತಿ, ನೆಮ್ಮದಿ ಸಿಗಲಿ- ಆತ್ಮಹತ್ಯೆಗೂ ಮುನ್ನ ‘ಅಮೆರಿಕ ಸುಂದರಿ’ಯ ಪೋಸ್ಟ್‌ ವೈರಲ್‌

    ನ್ಯೂಯಾರ್ಕ್‌: ಮಾಡೆಲ್‌, ವಕೀಲೆ, ವರದಿಗಾರ್ತಿಯಾಗಿ ಖ್ಯಾತಿ ಪಡೆದು 2019ರಲ್ಲಿ ಮಿಸ್‌ ಯುಎಸ್‌ಎ (ಅಮೆರಿಕ ಸುಂದರಿ) ಆಗಿಯೂ ಹೊರಹೊಮ್ಮಿದ್ದ ಚೆಸ್ಲಿ ಕ್ರಿಸ್ಟ್ 60ನೇ ಮಹಡಿಯಿಂದ ಬಿದ್ದು ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು.

    ಇದು ಆತ್ಮಹತ್ಯೆಯೋ, ಆಕಸ್ಮಿಕವೋ ಎಂಬ ಬಗ್ಗೆ ಸಂದೇಹ ವ್ಯಕ್ತವಾಗಿತ್ತು. ಆದರೆ ಇದೀಗ ಅವರು ಸಾಯುವ ದಿನ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದ ಪೋಸ್ಟ್‌ ಸಿಕ್ಕಿದ್ದು, ಇದರಿಂದ ಅವರು ಆತ್ಮಹತ್ಯೆಯೇ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅವರು ಹಾಕಿದ್ದ ಪೋಸ್ಟ್‌ ಎಂದರೆ, ಈ ದಿನ ನಿನಗೆ ಶಾಂತಿ ಮತ್ತು ವಿಶ್ರಾಂತಿಯನ್ನು ತರಲಿ ಎಂದು. ಇದರಿಂದ ಯಾರನ್ನಾದರೂ ಉದ್ದೇಶಿಸಿ ಅವರು ಈ ಪೋಸ್ಟ್‌ ಹಾಕಿದ್ದರೆ? ತಮ್ಮ ಸಾವಿನಿಂದ ಯಾರಿಗಾದರೂ ಖುಷಿಯಾಗುತ್ತದೆ ಎಂಬ ಸಂದೇಶ ಈ ಪೋಸ್ಟ್‌ನಲ್ಲಿ ಇದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

    1991ರಲ್ಲಿ ಜನಿಸಿದ್ದ ಚೆಸ್ಲಿ ಕ್ರಿಸ್ಟ್ ಫ್ಯಾಷನ್ ಲೋಕದಲ್ಲಿ ಅಪಾರ ಹೆಸರು ಮಾಡಿದ್ದರು. ಮಾತ್ರವಲ್ಲದೇ ವೇಕ್ ಫಾರೆಸ್ಟ್ ಯೂನಿವರ್ಸಿಟಿ ಸ್ಕೂಲ್ ಆಫ್ ಲಾದಿಂದ ಕಾನೂನು ಪದವಿ ಪಡೆದು ವಕೀಲೆಯಾಗಿಯೂ ಖ್ಯಾತಿ ಪಡೆದವರು. ಅಮೆರಿಕದ ಎಕ್ಸ್‌ಟ್ರಾ ಟಿವಿ ವರದಿಗಾರ್ತಿಯಾಗಿಯೂ ಸೇವೆ ಸಲ್ಲಿಸಿದ್ದ ಇವರು, ‘ವೈಟ್ ಕಾಲರ್ ಗ್ಲಾಮ್’ ಎಂಬ ಫ್ಯಾಷನ್​ ಬ್ಲಾಗ್​ ಸ್ಥಾಪಿಸಿ ಜಗದ್ವಿಖ್ಯಾತಿ ಗಳಿಸಿದ್ದರು.

    ನಮ್ಮ ಪ್ರೀತಿಯ ಚೆಸ್ಲಿ ಕ್ರಿಸ್ಟ್​ ನಮ್ಮ ಪಾಲಿಗೆ ಬಹುದೊಡ್ಡ ಬೆಳಕಾಗಿದ್ದಳು. ಎಲ್ಲರನ್ನೂ ಕಾಳಜಿ ಮಾಡುತ್ತಿದ್ದಳು, ಎಲ್ಲರನ್ನೂ ಪ್ರೀತಿಸುತ್ತಿದ್ದಳು. ಅವಳನ್ನು ಕಳೆದುಕೊಂಡಿದ್ದು ತುಂಬ ನೋವು ತಂದಿದೆ. ಆಕೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದಳು. ಎಲ್ಲರನ್ನೂ ಪ್ರೀತಿಸುತ್ತಿದ್ದಳು. ಬಡವರ ಸೇವೆ ಮಾಡುತ್ತಿದ್ದಳು. ನಮ್ಮ ಮನೆಯ ಮಗಳಾಗಿ, ಸಹೋದರಿಯಾಗಿ, ಸ್ನೇಹಿತೆ, ಮಾರ್ಗದರ್ಶಿಯಾಗಿ ಇದ್ದಳು ಎಂದು ಚೆಸ್ಲಿ ಕುಟುಂಬದವರು ಹೇಳಿದ್ದಾರೆ.

    2019ರಲ್ಲಿ ಮಾನಸಿಕ ಆರೋಗ್ಯ, ಒತ್ತಡ ನಿಭಾಯಿಸುವ ಬಗ್ಗೆ ಹೇಳಿಕೊಂಡಿದ್ದ ಚೆಸ್ಲಿ, ನಾನು ನನ್ನ ಮನಸಿನ ಸುಸ್ಥಿರ ಆರೋಗ್ಯಕ್ಕಾಗಿ ಆಗಾಗ ಕೌನ್ಸೆಲರ್​ ಬಳಿ ಕೂಡ ಮಾತನಾಡುತ್ತೇನೆ. ಇದು ನನಗೆ ಬಹುದೊಡ್ಡ ಸಮಾಧಾನ ಕೊಡುತ್ತದೆ ಎಂದಿದ್ದರು.

    ಇನ್‌ಸ್ಟಾಗ್ರಾಂ ಪೋಸ್ಟ್‌ ಇಲ್ಲಿದೆ ನೋಡಿ…

    ಪೊಲೀಸ್‌ ಠಾಣೆ ಮೆಟ್ಟಿಲೇರಿದ ಐಎಎಸ್‌ ದಂಪತಿ ಫಸ್ಟ್‌ನೈಟ್ ಕೇಸ್‌! 32 ವರ್ಷಗಳ ಬಳಿಕ ದೂರು

    VIDEO: ಎಂಟು ಮಂದಿಗೆ ಒಬ್ಬನೇ ಗಂಡ: ಜಗಳವೂ ಇಲ್ಲ, ಗಲಾಟೆಯೂ ಇಲ್ಲ… ಸುಖ ಸಂಸಾರದ ಗುಟ್ಟು ಬಿಚ್ಚಿಟ್ಟಾನೆ ಪತಿರಾಯ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts