ಬಾಲಿವುಡ್​ ಬ್ಯೂಟಿ ಅನುಷ್ಕಾ ಶರ್ಮಾ ಬಾಡಿಗಾರ್ಡ್​ ಸಂಬಳ ಕೇಳಿದ್ರೆ ಬೆರಗಾಗುವುದು ಖಂಡಿತ!

Anushka
Published on

ಮುಂಬೈ: ಸೆಲೆಬ್ರಿಟಿಗಳು ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಸಿನಿಮಾದಿಂದಾಚೆಗೆ ಸೆಲೆಬ್ರಿಟಿಗಳು ಜೀವನ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳು ಹಾಗೂ ವೀಕ್ಷಕರಲ್ಲಿರುತ್ತದೆ. ಸೆಲೆಬ್ರಿಟಿಗಳ ಮನೆ, ಬಳಸುವ ವಾಹನ ಹಾಗೂ ಗ್ಯಾಜೆಟ್​ಗಳ ಬಗ್ಗೆ ತಿಳಿದುಕೊಳ್ಳುವ ಹಂಬಲ ಇರುತ್ತದೆ.

ಸದ್ಯ ಬಾಲಿವುಡ್​ ಬ್ಯೂಟಿ ಹಾಗೂ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಮಡದಿ ಅನುಷ್ಕಾ ಶರ್ಮಾ ಅವರ ಬಾಡಿಗಾರ್ಡ್​ ಸೋನು ಭಾರಿ ಸುದ್ದಿಯಾಗಿದ್ದಾರೆ. ತನ್ನ ಬಾಡಿಗಾರ್ಡ್​ಗೆ ಅನುಷ್ಕಾ ನೀಡುವ ಸಂಬಳ ಬಗ್ಗೆ ನೆಟ್ಟಿಗರು ಭಾರಿ ಚರ್ಚಿಸುತ್ತಿದ್ದಾರೆ.

ಸೋನು, ಅನುಷ್ಕಾ ಬಾಡಿಗಾರ್ಡ್​ ಆಗಿ ಅನೇಕ ದಿನಗಳಿಂದ ಕೆಲಸ ಮಾಡುತ್ತಿದ್ದಾರೆ. ವರ್ಷಕ್ಕೆ ಸೋನುಗೆ ಸಿಗುತ್ತಿರುವ ಸಂಬಳ 1.2 ಕೋಟಿ ರೂ. ಎಂದು ಹೇಳಲಾಗಿದೆ. ಆತನ ಸಂಬಳ ಕೇಳಿ ಎಲ್ಲರೂ ಬಾಯಿ ಮೇಲೆ ಬೆರಳಿಡುವಂತಾಗಿದೆ. ಓರ್ವ ಕಂಪನಿಯ ಸಿಇಒ ಪಡೆಯುವಷ್ಟು ಸಂಬಳವನ್ನು ಬಾಡಿಗಾರ್ಡ್​ ಪಡೆದುಕೊಳ್ಳುತ್ತಿರುವುದು ಅಚ್ಚರಿಯ ವಿಚಾರವೇ ಸರಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net