

ಚೆನ್ನೈ: ಬಿಕಿನಿ ಉಡುಗೆಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿರುವ ಫೋಟೋವನ್ನು ಸೌತ್ ಬ್ಯೂಟಿ ಅಮಲಾ ಪೌಲ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ.
ಬಿಕಿನಿ ಉಡುಗೆಯಲ್ಲಿ ಅಮಲಾ ಪೌಲ್ ಅಸಾಧಾರಣವಾಗಿ ಕಾಣುತ್ತಿದ್ದು, ಸೊಂಟಕ್ಕೆ ಸೀರೆಯೊಂದನ್ನು ಕಟ್ಟಿ ಕಡಲ ತೀರದಲ್ಲಿ ನಿಂತು ಮಾದಕ ನೋಟ ಬೀರಿದ್ದಾರೆ. ಫೋಟೋ ಹರಿಬಿಡುವುದರ ಜತೆಗೆ ಸಂದೇಶವೊಂದನ್ನು ಸಾರಿರುವ ಅಮಲಾ, ಜೀವನದಲ್ಲಿ ಸ್ವೀಕಾರ ಮತ್ತು ಮಹಿಳೆಯ ಸಾಮರ್ಥ್ಯಗಳ ಬಗ್ಗೆ ದೀರ್ಘವಾದ ಟಿಪ್ಪಣಿಯನ್ನು ಬರೆದಿದ್ದಾರೆ.
ದೇವತೆ ಅಂದರೆ ಏನು? ಎಂದು ಪ್ರಶ್ನಿಸಿರುವ ಅಮಲಾ, ಓರ್ವ ಮಹಿಳೆ ದೇಹ, ಮನಸ್ಸು ಮತ್ತು ಚೈತನ್ಯ ಎಲ್ಲ ಹಂತಗಳಲ್ಲಿ ತನ್ನನ್ನು ತಾನು ತಿಳಿದುಕೊಳ್ಳಲು, ಸ್ವೀಕರಿಸಲು ಮತ್ತು ಪ್ರೀತಿಸಲು ಕಲಿಯುತ್ತಾಳೆ. ಮನರಂಜನೆ, ಹುಮ್ಮಸ್ಸು, ಸಂತೋಷ ಪ್ರೀತಿ ಮತ್ತು ಶಾಂತಿಯಿಂದ ತುಂಬಿರುವ ಜೀವನದಲ್ಲಿ ಸ್ವಯಂ ಬೆಳವಣಿಗೆ, ಸ್ವಯಂ ಅರಿವು, ಸ್ವಯಂ ಅನುಭವಗಳ ಮೇಲೆ ಓರ್ವ ಮಹಿಳೆ ಗಮನ ಹರಿಸುತ್ತಾಳೆ. ತನಗೇನು ಬೇಕೋ ಅದನ್ನು ಮಾಡಿಕೊಳ್ಳುವ ಸಾಮರ್ಥ್ಯವನ್ನು ಮಹಿಳೆ ಅರ್ಥ ಮಾಡಿಕೊಳ್ಳುತ್ತಾಳೆ. ಅವಳ ಕೃತಜ್ಞತೆ ಮತ್ತು ಸಮೃದ್ಧಿಯ ಭಾವದಿಂದ ತನ್ನ ಸುತ್ತಲಿನವರಿಗೆ ಸ್ಫೂರ್ತಿಯಾಗಿರುತ್ತಾಳೆ ಎನ್ನುವ ಮೂಲಕ ಮಹಿಳೆಯೇ ದೇವತೆ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.
ನಾನು ಎಲ್ಲರೊಂದಿಗೆ ನನ್ನನ್ನು ಹೋಲಿಸಿಕೊಳ್ಳುವುದನ್ನು ನಿಲ್ಲಿಸಿದ ದಿನ ನಾನು ನನ್ನ ಸಂತೋಷದ ಸ್ಥಳವನ್ನು ಕಂಡುಕೊಂಡೆ ಎಂದಿರುವ ಅಮಲಾ, ನಿಮ್ಮ ಸ್ವಂತ ಆಂತರಿಕತೆಯ, ನಿಮ್ಮ ಸ್ವಂತ ವ್ಯಕ್ತಿನಿಷ್ಠತೆಯ ಪರಿಶೋಧಕರಾಗಿ ಆಗ ಮಾತ್ರ ನೀವು ಸಾವಿರಾರು ಸಂಭ್ರಮಗಳು, ಅಪಾರ ಆಶೀರ್ವಾದಗಳನ್ನು ಕಾಣುವಿರಿ ಎಂದಿದ್ದಾರೆ.
ಇನ್ನು ಅಮಲಾ ಅವರಾ ಬಿಕಿನಿ ಲುಕ್ಗೆ ಫಿದಾ ಆಗಿರುವ ಅಭಿಮಾನಿಗಳು ಲೈಕ್ಸ್ಗಳ ಸುರಿಮಳೆ ಗೈದಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದರೆ ಅಮಲಾ ಕೊನೆಯದಾಗಿ ಪಿಟ್ಟ ಕಥಾಲು ಚಿತ್ರದಲ್ಲಿ ಕಾಣಿಸಿಕೊಂಡರು. ಇದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಗೊಂಡ ಅಂಥಾಲಜಿ ಆಗಿದೆ. ಸದ್ಯ ಅಧೋ ಅಂಧ ಪಾರವೈ ಪೋಲಾ 2 (ತಮಿಳು) ಮತ್ತು ಆಡುಜೀವಿತಂ (ಮಲಯಾಳಂ) ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್)