

ಹೈದರಾಬಾದ್: ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ "ಶ್ರೀರಾಮಚಂದ್ರ" ಚಿತ್ರದ ಮೂಲಕ ಕನ್ನಡ ಸಿನಿರಸಿಕರ ಮನಗೆದ್ದಿದ್ದ ನಟಿ ಮೋಹಿನಿ, ಕನ್ನಡದಲ್ಲಿ ಬೆರಳೆಣಿಕೆ ಚಿತ್ರಗಳಲ್ಲಿ ಅಭಿನಯಿಸಿದರೂ ಕೂಡ ಕನ್ನಡಿಗರಿಗೆ ಎಂದಿಗೂ ಚಿರಪರಿಚಿತರಾಗಿದ್ದಾರೆ.
ನಟ ರಾಘವೇಂದ್ರ ರಾಜ್ಕುಮಾರ್ ನಟನೆಯ ಕಲ್ಯಾಣ ಮಂಟಪ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಮೋಹಿನಿ, ಶ್ರೀರಾಮಚಂದ್ರ, ಜ್ವಾಲಾ, ಸಿಡಿದೆದ್ದ ಪಾಂಡವರು, ಗಡಿಬಿಡಿ ಅಳಿಯ, ರೌಡಿ, ಲಾಲಿ ಹಾಗೂ ನಿಶ್ಯಬ್ದ, ಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ಮೋಹಿನಿ ನಟಿಸಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ರಂತಹ ದಿಗ್ಗಜ ನಟರೊಂದಿಗೆ ನಟಿಸಿದ ಕೀರ್ತಿಯನ್ನು ಮೋಹಿನಿ ಹೊಂದಿದ್ದಾರೆ.
ಒಳ್ಳೆಯ ಅವಕಾಶಗಳು ಬರುತ್ತಿದ್ದಾಗಲೇ ನಟಿ ಮೋಹಿನಿ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಸಿನಿಮಾ ಜಗತ್ತಿನ ಅಂತರ ಕಾಯ್ದುಕೊಂಡಿದ್ದಾರೆ. ಮೋಹಿನಿ ಅವರು 1999ರಲ್ಲಿ ಭರತ್ ಎಂಬುವರನ್ನು ವಿವಾಹವಾದರು ಮತ್ತು ಅಮೆರಿಕದ ವಾಷಿಂಗ್ಟನ್ನ ಸಿಯಾಟಲ್ನಲ್ಲಿ ನೆಲೆಸಿದರು. ದಂಪತಿಗೆ ಅನಿರುದ್ಧ್ ಮತ್ತು ಅದ್ವೈತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಮೋಹಿನಿ 2006ರಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ತಿಳಿದುಬಂದಿದೆ.
ಇತ್ತೀಚೆಗಷ್ಟೇ ತನ್ನ ಅಭಿಮಾನಿಗಳಿಗೆ ತನ್ನ ಜೀವನದ ಕೆಲವು ಅದ್ಭುತ ಹಾಗೂ ನೋವಿನ ಕ್ಷಣಗಳನ್ನು ಮೋಹಿನಿ ತೆರೆದಿಟ್ಟಿದ್ದಾರೆ. ಮದುವೆ ಆದ ಐದು ವರ್ಷಗಳವರೆಗೆ ಮೋಹಿನಿ ಅವರ ಜೀವನ ತುಂಬಾ ಸಂತಸದಿಂದ ಕೂಡಿತ್ತಂತೆ. ಆದರೆ, ನಂತರದ ದಿನಗಳಲ್ಲಿ ಅವರಿಗೆ ಗೊತ್ತಿಲ್ಲದಂತೆಯೇ ಬದಲಾದ ಆಕೆಯ ಮಾನಸಿಕ ವೇದನೆ ಇಡೀ ಜೀವನವನ್ನೇ ಬದಲಾಯಿಸಿಬಿಡ್ತಂತೆ. ತಾನು ಏನು ಮಾಡುತ್ತಿದ್ದೇನೆ ಎಂದು ತಿಳಿಯುವುದು ಸಹ ಕಷ್ಟವಾಯಿತಂತೆ. ಈ ಸಮಯದಲ್ಲಿ ಎರಡು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದೆ ಎಂದು ಮೋಹಿನಿ ಹೇಳಿಕೊಂಡಿದ್ದಾರೆ.
ಪ್ರತಿದಿನ ಅಮ್ಮಾವರಿ ಪೂಜೆ, ದಿವ್ಯದರ್ಶನಗಳನ್ನು ಪೂಜಿಸಲು ನನಗೆ ಹೃದಯವೂ ಇರಲಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿದ್ದಾಗ ಜ್ಯೋತಿಷಿಯೊಬ್ಬರನ್ನು ಸಂಪರ್ಕಿಸಿದೆ. ನಿಮ್ಮ ವಿರುದ್ಧ ವಾಮಾಚಾರ ನಡೆದಿದೆ ಎಂದು ಜ್ಯೋತಿಷಿ ಹೇಳಿದರು. ಐದು ವರ್ಷಗಳು ಕಳೆದಿರುವುದರಿಂದ ಎನೂ ಮಾಡಲು ಸಾಧ್ಯವಿಲ್ಲ. ದೇವರು ಮಾತ್ರ ಒಬ್ಬರೇ ನಿಮ್ಮನ್ನು ರಕ್ಷಿಸಬಲ್ಲನೆಂದು ಹೇಳಿದರು.
ಯಾರು ನನ್ನನ್ನು ರಕ್ಷಿಸುತ್ತಾರೆ ಎಂಬ ಗೊಂದಲದಲ್ಲಿದ್ದೆ. ನಿಜವಾದ ದೇವರು ಬಂದು ನನ್ನನ್ನು ಹೇಗೆ ರಕ್ಷಿಸುತ್ತಾನೆ ಎಂದು ನನಗೆ ಅರ್ಥವಾಗಲಿಲ್ಲ. ಆ ಸಂದಿಗ್ಧ ಪರಿಸ್ಥಿತಿಯಲ್ಲಿ ಧ್ಯಾನಿಸುತ್ತಿರುವಾಗ, ನಾನು ಯೇಸುವನ್ನು ಕನಸಿನಲ್ಲಿ ನೋಡಿದೆ ಎಂದು ಮೋಹಿನಿ ವಿವರಿಸಿದರು. ಈ ಅನುಕ್ರಮದಲ್ಲಿಯೇ ನಾನು ಮಹಾನ್ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದಾಗ ಯೇಸು ತನ್ನ ವಕ್ರತೆಯನ್ನು ನೋಡುತ್ತಿರುವುದನ್ನು ಮತ್ತು ನನ್ನನ್ನು ರಕ್ಷಿಸುವುದನ್ನು ನಾನು ನೋಡಿದೆ ಎಂದು ಹೇಳಿಕೊಂಡಿದ್ದಾರೆ.
ಮೋಹಿನಿ ಅವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಮೋಹಿನಿ ಅವರ ಹೇಳಿಕೆಯನ್ನು ಒಪ್ಪಿದರೆ, ಇನ್ನು ಕೆಲವರು ಅವರ ಹೇಳಿಕೆ ಮತಾಂತರ ಮಾಡುವ ರೀತಿ ಇದೆ ಎಂದು ಜರಿದಿದ್ದಾರೆ. (ಏಜೆನ್ಸೀಸ್)