More

    ಇದು ನಟಿ ಅದಿತಿ ಪ್ರಭುದೇವ ಹಳ್ಳಿ ಜೀವನ

    ಬೆಂಗಳೂರು: ಕೊಟ್ಟಿಗೆ ಸ್ವಚ್ಛಗೊಳಿಸುವುದೇನು.. ದನಕರುಗಳಿಗೆ ಮೇವು ಹಾಕಿ, ಹಸುವಿನ ಹಾಲು ಕರೆಯುವುದೇನು.. ಕಟ್ಟಿಗೆ ಒಲೆ ಮುಂದೆ ಕುಳಿತು ಬಿಸಿ ಬಿಸಿ ಜೋಳದ ರೊಟ್ಟಿ ತಟ್ಟುವುದೇನು.. ಜಮೀನಿನಲ್ಲಿ ಟ್ರ್ಯಾಕ್ಟರ್​ ಏರಿ ಉಳುಮೆ ಮಾಡುವುದೇನು.. ಹೌದು, ಸ್ಯಾಂಡಲ್​ವುಡ್ ನಟಿ ಅದಿತಿ ಪ್ರಭುದೇವ ಪಕ್ಕಾ ಹಳ್ಳಿ ಹೆಣ್ಣುಮಗಳಾಗಿದ್ದಾರೆ. ಹಾಗಂತ ಇದ್ಯಾವುದೋ ಸಿನಿಮಾ ಸಲುವಾಗಿ ಮಾಡಿದ್ದು ಎಂದುಕೊಳ್ಳಬೇಡಿ. ಬದಲಿಗೆ ಲಾಕ್​ಡೌನ್ ವೇಳೆ ತಮ್ಮ ಹಳ್ಳಿಯಲ್ಲಿ ಅದಿತಿ ಮಾಡಿದ ಕೆಲಸವಿದು.

    ಮೂಲತಃ ದಾವಣಗೆರೆಯವರಾದರೂ ಚಿಕ್ಕಂದಿನಿಂದಲೇ ಹಳ್ಳಿಗಾಡಿನಲ್ಲಿ ಆಡಿ ಬೆಳೆದಿದ್ದಾರವರು. ಹಾಗಾಗಿಯೇ ಅಲ್ಲಿನ ಕೆಲಸವನ್ನು ಅಷ್ಟೇ ಸಲೀಸಾಗಿ ಮಾಡುತ್ತಾರೆ. ಇದೀಗ ಅಲ್ಲಿ ಕಳೆದ ದಿನಗಳನ್ನು ವಿಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಅದಿತಿ. ‘ಚಿಕ್ಕಂದಿನಿಂದ ಹಳ್ಳಿಯಲ್ಲಿ ಬೆಳೆದವಳು ನಾನು. ಬೆಳೆಯುತ್ತ ಆಧುನಿಕ ಬದುಕಿಗೆ ಹತ್ತಿರವಾದರೂ, ಮನಸ್ಸು ಮಾತ್ರ ಸದಾ ಹಳ್ಳಿಯಲ್ಲಿ ಜೀವಂತ. ಜೀವನದಲ್ಲಿ ಏನೇ ಸಿಕ್ಕರೂ ಪ್ರೀತಿ, ನೆಮ್ಮದಿ ಎಲ್ಲದಕ್ಕೂ ಮಿಗಿಲು ಎಂದು ತಿಳಿದವಳು ನಾನು. ಹಳ್ಳಿಯಲ್ಲಿನ ಅಜ್ಜಿ ಮನೆಗೆ ಹೋದಾಗ ನನ್ನ ದಿನಚರಿ ಹೀಗಿತ್ತು..’ ಎಂದು ಬರೆದುಕೊಂಡಿದ್ದಾರೆ.

    ಇದು ನಟಿ ಅದಿತಿ ಪ್ರಭುದೇವ ಹಳ್ಳಿ ಜೀವನ

    ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ತುರ್ತಾಗಿ ಕರೊನಾ ಲಸಿಕೆ ತೆಗೆದುಕೊಳ್ಳುವುದು ಅನಿವಾರ್ಯ..

    ಪೊಲೀಸರಿನ್ನು ಕ್ರಿಮಿನಲ್‌ಗಳ ಜತೆ ಪಾರ್ಟಿಗೆ ಹಾಜರಾಗುವಂತಿಲ್ಲ; ರೌಡಿ-ಗೂಂಡಾಗಳ ಸಮಾರಂಭಗಳಲ್ಲಿ ಭಾಗಿ ಆಗುವಂತಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts