ವಿಶ್ವಾದ್ಯಂತ ಪುಷ್ಪ-2 ಭರ್ಜರಿ ಕಲೆಕ್ಷನ್, 922 ಕೋಟಿ ಗಳಿಕೆ ಮಾಡಿದ ರಶ್ಮಿಕಾ ಸಿನಿಮಾ | Pushpa2 Collection

raksh
Published on

‘ಪುಷ್ಪ 2’ ಸಿನಿಮಾವನ್ನು ಬಹುಭಾಷೆಗಳಲ್ಲಿ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದೆ. ಈ ಚಿತ್ರ ಇದೀಗ ವಿಶ್ವಾದ್ಯಂತ 922 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ನಿರ್ಮಾಣ ಸಂಸ್ಥೆ ತಿಳಿಸಿದೆ.

ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ತಾರಕ್ ನಟನೆ ಈ ಸಿನಿಮಾದಲ್ಲಿ ತಿರುವು ನೀಡಲಿದೆ. ಸುಕುಮಾರ್ ನಿರ್ದೇಶನವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಅಲ್ಲು ಅರ್ಜುನ್ ನಟನೆ ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್ ಫ್ಯಾನ್ಸ್‌ಗೆ ಇಷ್ಟವಾಗಿದೆ.

ಶ್ರೀಲೀಲಾ ಕಿಸ್ಸಿಕ್ ಸಾಂಗ್, ಫಹಾದ್ ಫಾಸಿಲ್ ನಟನೆ, ಪುಷ್ಪರಾಜ್ ಜೊತೆಗಿನ ತಾರಕ್ ಪೊನ್ನಪ್ಪ ಸಂಘರ್ಷ ಇವೆಲ್ಲವೂ ಸಿನಿಮಾದಲ್ಲಿ ಹೈಲೆಟ್ ಆಗಿದೆ. ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ತಾರಕ್ ನಟನೆ ಈ ಸಿನಿಮಾದಲ್ಲಿ ತಿರುವು ನೀಡಲಿದೆ. ಸುಕುಮಾರ್ ನಿರ್ದೇಶನವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಡಾಲಿ, ತಾರಕ್, ಅನಸೂಯ, ಜಗಪತಿ ಬಾಬು ಸೇರಿದಂತೆ ಅನೇಕರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net