ಪುಷ್ಪ-2 ಸಿನಿಮಾಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆ: ರಿಲೀಸ್​ ಆಗೋದು ಯಾವಾಗ?

Pushpa 2
Published on

ಹೈದರಾಬಾದ್: ಸೌತ್​ ಸಿನಿಮಾ ಇಂಡಸ್ಟ್ರಿಯ ಬಹು ನಿರೀಕ್ಷಿತ ಪ್ಯಾನ್​ ಇಂಡಿಯಾ ಸಿನಿಮಾಗಳಲ್ಲಿ ಪುಷ್ಪ-2 ಕೂಡ ಒಂದು. ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಮತ್ತೆ ನಿರಾಸೆ ಮೂಡಿಸಿದೆ.

ಹೌದು, 2024ರ ಅಗಸ್ಟ್​ನಲ್ಲೇ ತೆರೆಗೆ ಬರಬೇಕಿದ್ದ ಪುಷ್ಪ-2 ಚಿತ್ರ, ಡಿಸೆಂಬರ್​ಗೆ ಮುಂದಾಡಲಾಗಿತ್ತು. ಆದರೆ, ಈಗ ಮತ್ತೆ 2025ರ ಏಪ್ರಿಲ್ ಅಥವಾ ಜೂನ್​ನಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ತೀವ್ರ ಆಸಕ್ತಿಯಿಂದ ಎದುರು ನೋಡುತ್ತಿದ್ದ ಸ್ಟೈಲಿಸ್ ಸ್ಟಾರ್ ಅಲ್ಲು ಅರ್ಜನ್ ಫ್ಯಾನ್ಸ್​ ಮತ್ತು ಸಿನಿರಸಿಕರು ಇದೀಗ 2025ರ ವರೆಗೆ ಕಾಯುವ ಪರಿಸ್ಥಿತಿ ಎದುರಾಗಿದೆ.

ಸಿನಿಮಾ ಮುಂದೂಡಲು ಕಾರಣ ಏನು? ಪುಷ್ಪ ಸಿನಿಮಾದ ಮುಂದುವರಿದ ಭಾಗವಾಗಿರುವ ಪುಷ್ಪ-2 ಚಿತ್ರವನ್ನು ಪದೇಪದೆ ಮುಂದೂಡಲು ಹಲವು ಕಾರಣಗಳನ್ನು ಚಿತ್ರತಂಡ ನೀಡುತ್ತಿದೆ. ಸಹಜವಾಗಿಯೇ ಇದು ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಮುಖ್ಯವಾಗಿ ಸಿನಿಮಾ ಇನ್ನು ಶೂಟಿಂಗ್ ಹಂತದಲ್ಲಿದೆ. ಕೆಲ ತುಣುಕುಗಳನ್ನು ಮತ್ತೆ ಶೂಟ್ ಮಾಡುತ್ತಿದ್ದು, ಇದರಿಂದಾಗಿ ಅಂದುಕೊಂಡ ಸಮಯದಲ್ಲಿ ಸಿನಿಮಾವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಅಲ್ಲು ಅರ್ಜುನ್​-ಫಾಹದ್ ಫಾಜಿಲ್​ ಭಾಗದ ಶೂಟಿಂಗ್​ ಇನ್ನೂ ಬಾಕಿ ಇದೆ ಎಂದು ಚಿತ್ರ ತಂಡ ಹೇಳುತ್ತಿದೆ. ಹೀಗಾಗಿ, ಚಿತ್ರತಂಡ ಕೂಡ ಸಿನಿಮಾ ಮುಂದೂಡುವ ಬಗ್ಗೆ ಬೇಸರ ವ್ಯಕ್ತಪಡಿಸಿದೆ.

ಪುಷ್ಪ ಮೊದಲ ಭಾಗ ಹಿಟ್: ನಿರೀಕ್ಷೆ ಇಲ್ಲದೆ ತೆರೆಗೆ ಬಂದ ಪುಷ್ಪ ಸಿನಿಮಾ ನಿರೀಕ್ಷೆಗೂ ಮೀರಿ ದೇಶದ್ಯಂತ ಹಿಟ್ ಆಯಿತು. ಅಲ್ಲದೆ, ಈ ಚಿತ್ರದ ಹಾಡುಗಳು ಕೂಡ ರೀಲ್ಸ್​ನಲ್ಲಿ ಹಲ್​ಚಲ್ ಎಬ್ಬಿಸಿದ್ದು ಎಲ್ಲರಿಗೂ ಗೊತ್ತೆ ಇದೆ. ಹಲವಾರು ಸಿನಿಮಾ ವಿಭಾಗಳಲ್ಲಿ ಪ್ರಶಸ್ತಿಯನ್ನು ಸಹ ಬಾಚಿದೆ. ಅಲ್ಲು ಅರ್ಜನ್ ಈ ಸಿನಿಮಾದಲ್ಲಿನ ನಟನೆಗಾಗಿ ಅತ್ಯುತ್ತಮ ನಟ ವಿಭಾಗದಿಂದ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net