

'ಪುಷ್ಪ-2' ರಿಲೀಸ್ಗೆ ದಿನಗಣನೆ ಪ್ರಾರಂಭವಾಗಿದೆ. 3 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಪುಷ್ಪ ಚಿತ್ರದ ಸೀಕ್ವೆಲ್ ಆಗಿರೋ ಪುಷ್ಪ-2 ಸಿನಿಮಾ ದೊಡ್ಡ ಮಟ್ಟಿನ ಹಿಟ್ ಚಿತ್ರವಾಗಿ ಹೊರ ಹೊಮ್ಮಿತ್ತು.
ಪುಷ್ಪ-2 ಸಿನಿಮಾದ ಟೀಸರ್ಗಳು ಸದ್ದು ಮಾಡಲಿಲ್ಲ. ಆದ್ರೆ 'ಪುಷ್ಪ-2' ಚಿತ್ರದ 2 ಹಾಡುಗಳು ಸಿನಿರಸಿಕರ ಮನಗೆದ್ದಿದೆ. ಪ್ರೀ ರಿಲೀಸ್ ಬ್ಯುಸಿನೆಸ್ 1000 ಕೋಟಿ ರೂ. ದಾಟಿದೆ ಎಂದು ಹೇಳಲಾಗುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.
'ಪುಷ್ಪ-2' ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಚಿತ್ರದ ಬಗ್ಗೆ ಮಾಹಿತಿ ನೀಡಿದೆ, ಆದ್ರೆ ಚಿತ್ರತಂಡದ ಈ ಒಂದು ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಯಸ್, 'ಪುಷ್ಪ-3' ಬಗ್ಗೆಯೂ ನಿರ್ಮಾಪಕರು ಸುಳಿವು ಕೊಟ್ಟಿದ್ದಾರೆ. ಉತ್ತರ ಭಾರತ, ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಓವರ್ಸೀಸ್ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಎನ್ ಸಿನಿಮಾಸ್ ಸಂಸ್ಥೆ ಕರ್ನಾಟಕ ವಿತರಣೆ ಹಕ್ಕು ಕೊಂಡುಕೊಂಡಿದೆ.
ಈ ಬಗ್ಗೆ ಕರ್ನಾಟಕ ವಿತರಣೆ ಹಕ್ಕು ಕೊಂಡುಕೊಂಡಿರುವ ಲಕ್ಷ್ಮಿಕಾಂತ್ ರೆಡ್ಡಿ ಮಾತನಾಡಿದ್ದು, ಅವರ ಈ ಒಂದು ಹೇಳಿಕೆ ಸದ್ಯ ವೈರಲ್ ಆಗುತ್ತಲಿದೆ. ಈವರೆಗೆ ಕರ್ನಾಟಕದಲ್ಲಿ 'KGF-2' ದೊಡ್ಡದಾಗಿ ಬಿಡುಗಡೆಯಾಗಿ ದಾಖಲೆ ಬರೆದಿದೆ. 'ಪುಷ್ಪ-2' ಮೂಲಕ ಅದನ್ನು ಮೀರಿಸುತ್ತೇವೆ ಎಂದು ಹೇಳಿದ್ದಾರೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
'ಪುಷ್ಪ-2' ಚಿತ್ರದ ಮೂಲಕ ಕರ್ನಾಟಕದಲ್ಲಿ ದೊಡ್ಡದಾಗಿ ಬ್ಯುಸಿನೆಸ್ ಮಾಡಿ ತೋರಿಸ್ತೀವಿ. ಈವರೆಗೆ ಕರ್ನಾಟಕದಲ್ಲಿ ಅತಿಹೆಚ್ಚು ಬ್ಯುಸಿನೆಸ್ ಅಂದ್ರೆ 90 ಕೋಟಿ ರೂ. ಆಗಿದೆ. ಅದನ್ನು ಮೀರಿಸಬೇಕು ಎನ್ನುವುದು 'ಪುಷ್ಪ-2' ನಿರ್ಮಾಪಕರ ಲೆಕ್ಕಾಚಾರ. ಕಂಡಿತ ಅದನ್ನು ಸಾಧಿಸಿ ತೋರಿಸುತ್ತೇವೆ. ಈವೆರೆಗೆ ಅತಿಹೆಚ್ಚು ಅಂದ್ರೆ 'KGF-2' ಸುಮಾರು 350 ಸಿಂಗಲ್ ಸ್ಕ್ರೀನ್ ಹಾಗೂ 80 ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆ ಆಗಿತ್ತು.
'ಪುಷ್ಪ-2' ಒಟ್ಟು 500 ಸ್ಕ್ರೀನ್ ಹಾಕಬೇಕು ಎಂದುಕೊಂಡಿದ್ದೇವೆ ಎಂದು ಲಕ್ಷ್ಮಿಕಾಂತ್ ರೆಡ್ಡಿ ಹೇಳಿದ್ದಾರೆ. 'KGF-2' ಮೊದಲ ದಿನ 28ರಿಂದ 30 ಕೋಟಿ ರೂ. ಕರ್ನಾಟಕದಲ್ಲಿ ಗಳಿಕೆ ಕಂಡಿತ್ತು. ಅದನ್ನು 'ಪುಷ್ಪ-2' ಮೀರಿಸಬೇಕು, ಕರ್ನಾಟಕದಲ್ಲಿ ಅಲ್ಲು ಅರ್ಜುನ್ ಅಂದ್ರೆ ಅಭಿಮಾನ ಹೆಚ್ಚು. 'ಪುಷ್ಪ' ಚಿತ್ರ ಒಂದೇ ಭಾಷೆಯಲ್ಲಿ ತೆರೆಗೆ ಬಂದಿತ್ತು. ಈಗ ಪಾರ್ಟ್-2 ಹಿಂದಿ, ಕನ್ನಡ ಎಲ್ಲಾ ಭಾಷೆಗಳಲ್ಲಿ ಬರುವುದರಿಂದ ಭಾರೀ ಬ್ಯುಸಿನೆಸ್ ಮಾಡುತ್ತದೆ ಎಂದು ಭಾವಿಸುತ್ತೇವೆ ಎಂದು ವಿತರಕರು ವಿವರಿಸಿದ್ದಾರೆ.