ಪುನೀತ್​ ರಾಜಕುಮಾರ್ ಕಡೆಯಿಂದ ಮನೆಯ ಕಾರು ಚಾಲಕನಿಗೆ ಸಿಕ್ತು ಸರ್ಪ್ರೈಸ್​ ಉಡುಗೊರೆ!

collage
Published on

ಪುನೀತ್​ ರಾಜಕುಮಾರ್ ಸದಯ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​ ಆಗಿದ್ದಾರೆ. ಸಿನಿಮಾ ಸೇರಿ ಸಾಕಷ್ಟು ವಿಚಾರಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ವರ್ಕೌಟ್​ ವಿಡಿಯೋಗಳನ್ನು ಹೆಚ್ಚೆಚ್ಚು ಹಾಕುತ್ತ ಅಭಿಮಾನಿಗಳಿಗೆ ಆರೋಗ್ಯದ ಬಗ್ಗೆ ಸ್ಫೂರ್ತಿ ತುಂಬುತ್ತಿದ್ದಾರೆ. ಇದೀಗ ಇದೇ ಪುನೀತ್​ ಮನೆಯ ಕಾರು ಚಾಲಕನಿಗೆ ಸರ್ಪ್ರೈಸ್​ ನೀಡಿದ್ದಾರೆ.

ಹೌದು, ಕಳೆದ ಹಲವು ವರ್ಷಗಳಿಂದ ಪುನೀತ್​ ಅವರ ಕಾರು ಚಾಲಕರಾಗಿ ಕೆಲ ಮಾಡುತ್ತಿರುವ ಬಾಬು ಮಂಗಳವಾರ ಜನ್ಮದಿನ ಆಚರಿಸಿಕೊಂಡರು. ಅವರ ಜನ್ಮದಿನವನ್ನು ಸ್ವತಃ ಪುನೀತ್​ ಮುಂದೆ ನಿಂತು ಆಚರಣೆ ಮಾಡಿದ್ದಾರೆ. ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ. ಸದ್ಯ ಆ ಬರ್ತ್​ಡೇ ಆಚರಣೆಯ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಪವರ್​ಸ್ಟಾರ್ ಕಾಳಜಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಸಂತೋಷ್​ ಆನಂದ್​ ರಾಮ್​ ನಿರ್ದೇಶನದಲ್ಲಿ ಯುವರತ್ನ ಚಿತ್ರ ಸಿದ್ಧವಾಗುತ್ತಿದೆ. ಈಗಾಗಲೇ ಬಹುತೇಕ ಚಿತ್ರೀಕರಣವನ್ನು ಮುಗಿಸಿಕೊಂಡಿರುವ ಚಿತ್ರತಂಡ, ಶೀಘ್ರದಲ್ಲಿ ಬಾಕಿ ಚಿತ್ರೀಕರಣವನ್ನೂ ಮಾಡಿಕೊಳ್ಳಲು ಪ್ಲಾನ್​ ಹಾಕಿದ್ದಾರೆ. ಹೊಂಬಾಳೆ ಫಿಲಂಸ್​ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸಾಯೇಶಾ ಸೈಗಲ್​ ನಾಯಕಿಯಾಗಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net