

ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರವಾದ 'ಗಂಧದ ಗುಡಿ' ಚಿತ್ರವು ಅಕ್ಟೋಬರ್ ಕೊನೆಯ ವಾರ ಬಿಡುಗಡೆಯಾಗಿ ಎಲ್ಲರಿಂದ ಮೆಚ್ಚುಗೆ ಪಡೆದಿತ್ತು. ಈಗ ಜಪಾನ್ ದೇಶದಿಂದ ಬಂದ ಪುನೀತ್ ಅವರ ಅಭಿಮಾನಿಗಳು ಚಿತ್ರವನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ.
ಇದನ್ನೂ ಓದಿ: ಅಭಿಮಾನಿಗಳ ಜತೆಗೆ ರೈಡಿಂಗ್ ಹೊರಟ ಗಣೇಶ್ …
'ಗಂಧದ ಗುಡಿ' ಚಿತ್ರವು ಅ. 29ರಂದು ರಾಜ್ಯಾದ್ಯಂತ 223ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರವನ್ನು ಅಭಿಮಾನಿಗಳಷ್ಟೇ ಅಲ್ಲ, ಸೆಲೆಬ್ರಿಟಿಗಳು ಸಹ ಮೆಚ್ಚಿಕೊಂಡಿದ್ದರು. ಈಗಲೂ ಚಿತ್ರ ಪ್ರದರ್ಶನವಾಗುತ್ತಿದ್ದು, ಆ ಚಿತ್ರವನ್ನು ಜಪಾನ್ನಿಂದ ಬಂದ ಪುನೀತ್ ಅಭಿಮಾನಿಗಳು ವೀಕ್ಷಿಸಿ ಮೆಚ್ಚುಗೆ ಪಡೆದಿದ್ದಾರೆ.
ಅಷ್ಟೇ ಅಲ್ಲ, ಪುನೀತ್ ಸಹೋದರ ರಾಘವೇಂದ್ರ ರಾಜಕುಮಾರ್ ಅವರನ್ನು ಅವರ ನಿವಾಸದಲ್ಲಿ ಭೃಟಿ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಖುಷಿ ವ್ಯಕ್ತಪಡಿಸಿರುವ ರಾಘವೇಂದ್ರ ರಾಜಕುಮಾರ್, ''ಗಂಧದಗುಡಿ' ಚಿತ್ರವನ್ನು ನೋಡಿ ಜಪಾನ್ ದೇಶದಿಂದ ಬಂದ ಅಪ್ಪು ಅಭಿಮಾನಿಗಳನ್ನು ನಮ್ಮ ನಿವಾಸದಲ್ಲಿ ಭೇಟಿಯಾದ ಕ್ಷಣಗಳು... ಒಳ್ಳೆಯ ಕೆಲಸ ಮಾಡಿದರೆ ಈ ಪ್ರಪಂಚವೇ ಗುರುತಿಸುವುದು ಎಂಬುದಕ್ಕೆ ಇದೇ ಉದಾಹರಣೆ ...
'ಗಂಧದ ಗುಡಿ' ಚಿತ್ರವು ಕರ್ನಾಟಕದ ರಮಣೀಯ ಪರಿಸರವನ್ನು ಎತ್ತಿಹಿಡಿಯುವ ಒಂದು ಸಾಕ್ಷ್ಯಚಿತ್ರವಾಗಿದ್ದು, ಈ ಚಿತ್ರವನ್ನು ಅಮೋಘವರ್ಷ ನಿರ್ದೇಶನ ಮಾಡಿದ್ದಾರೆ. ಇನ್ನು, ಈ ಚಿತ್ರವನ್ನು ಪುನೀತ್ ತಮ್ಮ ಪಿಆರ್ಕೆ ಪ್ರೊಡಕ್ಷನ್ಸ್ ವತಿಯಿಂದ ನಿರ್ಮಿಸಿದ್ದಾರೆ.