

ಬೆಂಗಳೂರು: ಟಾಲಿವುಡ್ ನಟ ಜೂ. ಎನ್ಟಿಆರ್ ಬರ್ತ್ಡೇ ನಿಮಿತ್ತ ಟಾಲಿವುಡ್ ಸೇರಿ ದಕ್ಷಿಣ ಭಾರತದ ಹಲವು ಇಂಡಸ್ಟ್ರಿಗಳ ಸ್ನೇಹಿತರು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಕನ್ನಡದ ಹಲವು ಕಲಾವಿದರು, ನಿರ್ದೇಶಕರು ವಿಶ್ ಮಾಡಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್, ನಟಿ ಪ್ರಣೀತಾ ಸುಭಾಷ್ ನೆಚ್ಚಿನ ನಟನಿಗೆ ಶುಭ ಕೋರಿದ್ದಾರೆ. ಇದೀಗ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಕಡೆಯಿಂದಲೂ ಸ್ನೇಹಿತನಿಗೆ ಶುಭಾಶಯದ ವಿಡಿಯೋ ಸಂದೇಶ ರವಾನೆಯಾಗಿದೆ.
ಹೌದು, ಸಿನಿಮಾ ಇಂಡಸ್ಟ್ರಿ ಬೇರೆ ಬೇರೆಯಾದರೂ, ಪುನೀತ್ ಮತ್ತು ಎನ್ಟಿಆರ್ ಆಪ್ತ ಸ್ನೇಹಿತರು ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ಆ ಸ್ನೇಹಕ್ಕೆ ಬೆಲೆ ಕೊಟ್ಟು ಪುನೀತ್ ನಟನೆಯ ಚಕ್ರವ್ಯೂಹ ಚಿತ್ರದ ‘ಗೆಳೆಯಾ ಗೆಳೆಯಾ..’ ಹಾಡಿಗೆ ಎನ್ಟಿಆರ್ ಧ್ವನಿ ನೀಡಿದ್ದರು. ಬೆಂಗಳೂರಿಗೆ ಬಂದಾಗ ಪುನೀತ್ಗೆ ಭೇಟಿಯಾಗಿಯೇ ತೆರಳುತ್ತಿದ್ದರು. ಇದೀಗ ಅಂಥ ಸ್ನೇಹಿತನ ಜನ್ಮದಿನಕ್ಕೆ ಪುನೀತ್ ವಿಡಿಯೋ ಮಾಡಿ ಆ ಮೂಲಕ ಜನ್ಮದಿನದ ಶುಭಾಶಯವನ್ನು ರವಾನಿಸಿದ್ದಾರೆ.
‘ಹ್ಯಾಪಿ ಬರ್ತ್ಡೇ ಬ್ರದರ್.. ವಿತ್ ಗುಡ್ ಹೆಲ್ತ್ ಆ್ಯಂಡ್ ಹ್ಯಾಪಿನೆಸ್.. ಆಲ್ವೇಸ್ ಹ್ಯಾಪಿನೆಸ್’ ಎಂದು ಹೇಳಿ ವಿಶ್ ಮಾಡಿದ್ದಾರೆ. ಸದ್ಯ ಈ ವಿಡಿಯೋವನ್ನು ಟಾಲಿವುಡ್ ಎನ್ಟಿಆರ್ ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದು, ಪವರ್ಸ್ಟಾರ್ ಪ್ರೀತಿಗೆ ಧನ್ಯವಾದ ಅರ್ಪಿಸಿದ್ದಾರೆ.