ಪುನೀತ್-ದಿನಕರ್ ಸೇರಿಸಿದ ಜಯಣ್ಣ; ಮಾರ್ಚ್ 17ಕ್ಕೆ ಹೊಸ ಚಿತ್ರದ ಅಧಿಕೃತ ಘೋಷಣೆ

Puneeth
Published on

ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ಚಿತ್ರವೊಂದನ್ನು ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶಿಸಲಿದ್ದಾರೆ ಎಂಬ ವಿಷಯ ಕೇಳಿ ಬರುತ್ತಲೇ ಇತ್ತು. ಆದರೆ, ಆ ಚಿತ್ರವನ್ನು ನಿರ್ವಿುಸುತ್ತಿರುವವರು ಯಾರು? ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಈಗ ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು, ಚಿತ್ರವನ್ನು ಜಯಣ್ಣ ಕಂಬೈನ್ಸ್​ನಡಿ ಜಯಣ್ಣ ಮತ್ತು ಭೋಗೇಂದ್ರ ನಿರ್ವಿುಸುತ್ತಿದ್ದಾರೆ.

ಮೂರು ವರ್ಷಗಳ ಹಿಂದೆ ಬಿಡುಗಡೆಯಾದ ‘ನೆನಪಿರಲಿ’ ಪ್ರೇಮ್ ಪ್ರಜ್ವಲ್ ಮತ್ತು ಹರಿಪ್ರಿಯಾ ಅಭಿನಯದ ‘ಲೈಫ್ ಜತೆ ಒಂದು ಸೆಲ್ಪಿ’ ಚಿತ್ರ ನಿರ್ದೇಶಿಸಿದ್ದ ದಿನಕರ್, ಆ ನಂತರ ಯಾವು ಚಿತ್ರಕ್ಕೂ ಕೈಹಾಕಿರಲಿಲ್ಲ. ಲಾಕ್​ಡೌನ್ ಸಮಯದಲ್ಲಿ ಅವರೊಂದು ಕಥೆ ಮಾಡಿಟ್ಟುಕೊಂಡಿದ್ದು, ಪುನೀತ್ ಅವರನ್ನು ಭೇಟಿ ಮಾಡಿ ಕಥೆ ಹೇಳಿದರಂತೆ. ಕಥೆ ಕೇಳಿ ಒಪ್ಪಿದ್ದ ಪುನೀತ್, ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಸಹ ನೀಡಿದ್ದರಂತೆ. ಈಗ ಈ ಚಿತ್ರವನ್ನು ನಿರ್ವಿುಸಲು ಜಯಣ್ಣ ಮುಂದೆ ಬಂದಿದ್ದು, ‘ಪರಮಾತ್ಮ’ ಮತ್ತು ‘ರಣವಿಕ್ರಮ’ ನಂತರ ಮೂರನೆಯ ಬಾರಿಗೆ ಜಯಣ್ಣ ನಿರ್ಮಾಣದ ಚಿತ್ರದಲ್ಲಿ ಪುನೀತ್ ನಟಿಸುತ್ತಿದ್ದಾರೆ.

ಸದ್ಯ, ‘ಜೇಮ್್ಸ’ ಚಿತ್ರದಲ್ಲಿ ನಟಿಸುತ್ತಿರುವ ಪುನೀತ್, ಅದು ಮುಗಿದ ನಂತರ ಹೊಂಬಾಳೆ ಪ್ರೊಡಕ್ಷನ್ಸ್ ನಿರ್ವಣದ ಮತ್ತು ಸಂತೋಷ್ ಆನಂದರಾಮ್ ನಿರ್ದೇಶನದ ಇನ್ನೊಂದು ಚಿತ್ರದಲ್ಲಿ ನಟಿಸಲಿದ್ದಾರೆ. ಅದು ಮುಗಿದ ನಂತರ ದಿನಕರ್ ನಿರ್ದೇಶನದ ಚಿತ್ರ ಪ್ರಾರಂಭವಾಗುವ ಸಾಧ್ಯತೆ ಇದೆ. ಚಿತ್ರದ ಹೆಸರು ಸೇರಿದಂತೆ ಅಧಿಕೃತ ಪ್ರಕಟಣೆಯು, ಪುನೀತ್ ಹುಟ್ಟುಹಬ್ಬದಂದು (ಮಾರ್ಚ್ 17) ಅಧಿಕೃತವಾಗಿ ಹೊರಬೀಳುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net