ಬಾಡಿ ಗಾಡ್​ಗೆ ಸಿಕ್ಕ ಅಪ್ಪು ಧ್ವನಿ; ‘ಆರೇಸ ಡನ್ಕನಕ..’ ಬಿಡುಗಡೆ..

Body God
Published on

ಬೆಂಗಳೂರು: ನಟನೆಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಗಾಯನಕ್ಕೂ ನೀಡಿದ್ದರು ಪುನೀತ್ ರಾಜಕುಮಾರ್. ತಮ್ಮ ಚಿತ್ರಗಳಿಗಿಂತ, ಬೇರೆಯವರ ಚಿತ್ರಗಳಿಗೇ ಅವರು ಧ್ವನಿಯಾಗಿದ್ದು ಹೆಚ್ಚು. ಅದರಂತೆ ಪುನೀತ್, ‘ಬಾಡಿ ಗಾಡ್’ ಎನ್ನುವ ಚಿತ್ರದ ಹಾಡಿಗೂ ಧ್ವನಿಯಾಗಿದ್ದರು. ‘ಆರೇಸ ಡನ್ಕನಕ..’ ಸಾಹಿತ್ಯವುಳ್ಳ ಆ ಹಾಡು ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದು, ಹಾಡಿನಲ್ಲಿನ ಪದಗಳಿಗೂ ಪುನೀತ್ ಅಕಾಲಿಕ ನಿಧನಕ್ಕೂ ಹಾಡಿನ ಸಾಹಿತ್ಯ ಸಾಮ್ಯತೆ ಇರುವುದು ವಿಪರ್ಯಾಸ.

ಶ್ರೀನಿವಾಸ್ ಪ್ರಭು ನಿರ್ದೇಶನದಲ್ಲಿ ಸಿದ್ಧವಾಗಿರುವ ‘ಬಾಡಿ ಗಾಡ್’ ಸಿನಿಮಾದಲ್ಲಿ ‘ಮೊಗ್ಗಿನ ಮನಸ್ಸು’ ಸಿನಿಮಾ ಖ್ಯಾತಿಯ ಮನೋಜ್ ಹೀರೋ. ನಾಯಕನಷ್ಟೇ ಸಮಾನಾಂತರವಾದ ಪಾತ್ರ ನಿರ್ದೇಶಕ ಗುರುಪ್ರಸಾದ್ ಅವರದ್ದು. ‘ಅಪು್ಪ ಅವರ ಬಳಿಯೇ ಈ ಹಾಡನ್ನು ಹಾಡಿಸಬೇಕಿತ್ತು. ಹೈಪಿಚ್ ಇರುವುದರಿಂದ ‘ಸರಿ ಅನಿಸದಿದ್ದರೆ, ಬೇರೆಯವರಿಂದ ಹಾಡಿಸಿ’ ಎಂದೂ ಅವರು ಹೇಳಿದ್ದರು. ನಮಗೆ ನೀವೇ ಬೇಕು ಎಂದು ಹಠಹಿಡಿದು ಹಾಡಿಸಿದ ಹಾಡಿದು’ ಎಂದರು ನಿರ್ದೇಶಕ ಶ್ರೀನಿವಾಸ್ ಪ್ರಭು.

‘ಅಪ್ಪು ಅವರ ಹಾಡಿಗೆ ಡಾನ್ಸ್ ಮಾಡಬೇಕೆಂಬ ಆಸೆ ಇತ್ತು. ಅದು ಈಡೇರಿದರೂ, ಅವರಿಲ್ಲ ಅನ್ನೋ ನೋವು ಹೆಚ್ಚು ಕಾಡುತ್ತಿದೆ’ ಎಂದು ಭಾವುಕರಾದರು ನಾಯಕ ಮನೋಜ್. ನಾಯಕಿಯಾಗಿ ದೀಪಿಕಾ ಅವರಿಗಿದು ಮೊದಲ ಸಿನಿಮಾ. ಎಸ್​ಕೆಎಸ್ ಈ ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ಉಜ್ಜಲ್ ಚಂದ್ರ ಸಂಕಲನ, ಕರಣ್ ಕೃಪ ಸಂಗೀತ, ವೇಲ್ ಮುರುಗನ್ ಛಾಯಾಗ್ರಹಣ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net