

ಬೆಂಗಳೂರು: 'ಅಭಿನಯ ಶಾರದೆ' ಜಯಂತಿ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಕಂಬನಿ ಮಿಡಿದಿದ್ದಾರೆ. ಸುದೀಪ್, ಉಪೇಂದ್ರ, ಧ್ರುವ ಸರ್ಜಾ, ಶರಣ್, ಮಾಲಾಶ್ರೀ, ಅನು ಪ್ರಭಾಕರ್ ಸೇರಿದಂತೆ ಹಲವರು ಜಯಂತಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಪುನೀತ್ ರಾಜಕುಮಾರ್ ಸಹ ಜಯಂತಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಪತ್ರವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ‘ಅಭಿನಯ ಶಾರದೆ’ ನಿಧನಕ್ಕೆ ಸ್ಯಾಂಡಲ್ವುಡ್ ಸಂತಾಪ
'ಜಯಂತಿ ಅಮ್ಮಾವ್ರು ಭಾರತೀಯ ಚಿತ್ರರಂಗದಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಮ್ಮ ತಂದೆಯವರ ಜತೆಗೆ 35ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿದ್ದಾರೆ. ನಮ್ಮ ಕುಟುಂಬಕ್ಕೆ ತುಂಭಾ ಹತ್ತಿರವಾದಂತವರು. ನಮ್ಮ ಮನೆಯ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದರು. ಅಪ್ಪಾಜಿ ಕಾಡಿಗೆ ಹೋಗಿದ್ದಂತಹ ಸಂದರ್ಭದಲ್ಲಿ, ಪ್ರತಿದಿನ ಕರೆ ಮಾಡಿ ನಮ್ಮ ಕುಟುಂಮಬದ ಯೋಗಕ್ಷೇಮ್ ವಿಚಾರಿಸುತ್ತಿದ್ದರು. ನಮಗೆ ಒಳ್ಳೆಯದಾಗಲಿ ಎಂದು ಪೂಜೆಗಳನ್ನು ಮಾಡಿಸುತ್ತಿದ್ದರು. ಅವರ ಜತೆಗೆ 'ರಾಜ್' ಸಿನಿಮಾದಲ್ಲಿ ಅಭಿನಯಿಸಿದ್ದು ನನ್ನ ಭಾಗ್ಯ. ಇವತ್ತು ಅವರನ್ನು ಕಳೆದುಕೊಂಡಿರುವುದು ನನಗೆ ಮತ್ತು ನಮ್ಮ ಕುಟುಂಬಕ್ಕೆ ತುಂಬಾ ನೋವುಂಟು ಮಾಡಿದೆ. ಅವರ ನೆನಪುಗಳು ನಮ್ಮೊಳಗೆ ಸದಾ ಜೀವಂತ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ. ಓಂ ಶಾಂತಿ ...' ಎಂದು ಪುನೀತ್ ಬರೆದುಕೊಂಡಿದ್ದಾರೆ.
Puyn