ಪುನೀತ್ ನಿಧನದ ನಂತರ ಅವರ ಕಟ್ಟಾ ಅಭಿಮಾನಿಗಳು ತಮ್ಮ ಬೀದಿಗಳಿಗೆ, ಹಲವು ವೃತ್ತಗಳಿಗೆ, ಬೇರೆ ಬೇರೆ ಪ್ರದೇಶಗಳಿಗೂ ಇದ್ದ ಹೆಸರನ್ನು ಬದಲಾಯಿಸಿ ಅಪ್ಪು ಹೆಸರನ್ನು ನಾಮಕರಣ ಮಾಡಿದ್ದಾರೆ. ಅದೆಷ್ಟೂ ಸಿನಿಮಾಗಳು ಮಾಡಿದ ನಂತರ ಮತ್ತು ಬಹಳಷ್ಟು ಖ್ಯಾತಿ ಪಡೆದ ನಂತರವೂ ಹಲವು ಆದರ್ಶ ವ್ಯಕ್ತಿಗಳ ಹೆಸರು, ಒಂದೋ ಅಥವಾ ಎರಡೋ ಸ್ಥಳಗಳ ಹೆಸರುಗಳಾಗುತ್ತವೆ. ಆದರೆ, ಅಪ್ಪು ಹೆಸರನ್ನು ಗೂಗಲ್ ನಕ್ಷೆಯಲ್ಲಿ ಹೊಡೆದರೆ 500ಕ್ಕೂ ಹೆಚ್ಚು ಲೊಕೇಶನ್ಗಳು ಕಾಣಿಸುತ್ತವೆ ಎನ್ನಲಾಗಿದೆ. ಇದೆಲ್ಲವನ್ನು ನೋಡಿದರೆ, ''ಅಪ್ಪು ಹೆಸರೊಂದೇ ಸಾಕು ದಾಖಲೆಗಳು ಬರೆಯಲು'' ಎಂದು ಅನಿಸುತ್ತಿದೆ. ಕೆಲವರಿಗಂತು, ಒಬ್ಬ ಮನುಷ್ಯ ಬದುಕಿದರೆ ಹೀಗೆ ಬದುಕಬೇಕು ಭೂಮಿಯ ಮೇಲೆ ಎಂದನಿಸಿದೆ.