ಬೆಂಗಳೂರು: ಕೆಜಿಏಫ್-2 ಸಿನಿಮಾದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿರವ ನಟ ಸಂಜಯ್ ದತ್ 'ಅಧೀರ'ನಾಗಿ ಮಿಂಚಲಿದ್ದಾರೆ. ಕೆಜಿಏಫ್-2ಗೆ ಮೊನ್ನೆ ತಾನೆ ಡಬ್ಬಿಂಗ್ ಮುಗಿಸಿದ್ದರು ನಟ ಸಂಜಯ್ ದತ್. ಆದರೆ, ಅಷ್ಟರೊಳಗೆ ಅವರು ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ, ಕೆಜಿಏಫ್-2 ನಂತೆ ಅವರು ಎರಡನೇ ಸಿನಿಮಾದಲ್ಲೂ ಸಂಜಯ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಹೌದು, ನಟ ಧ್ರುವ ಸರ್ಜಾ ಸದ್ಯ 'ಮಾರ್ಟಿನ್' ಚಿತ್ರದಲ್ಲಿ ನಟಿಸುತ್ತಿದ್ದು, ಅದರ ನಂತರ ಪ್ರೇಮ್ ಅವರು ನಿರ್ದೇಶನ ಮಾಡುತ್ತಿರುವ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.