

ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜಕುಮಾರ್ ನಾಯಕತ್ವದ ಯುವರತ್ನ ಚಿತ್ರದ ಬಗ್ಗೆ ಹೊಸ ಅಪ್ಡೇಟ್ ಮಾಹಿತಿಯೊಂದು ಇದೀಗ ಲಭ್ಯವಾಗಿದೆ. ಹಾಗಂತ ಸಿನಿಮಾ ತಂಡ ಹೊಸ ಟೀಸರ್ ಏನಾದ್ರೂ ಬಿಡುಗಡೆ ಮಾಡುತ್ತ ಎಂದುಕೊಳ್ಳಬೇಡಿ. ಬದಲಿಗೆ ಪುನೀತ್ ಮತ್ತೆ ಸಿನಿಮಾ ಶೂಟಿಂಗ್ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಈಗಾಗಲೇ ಮಾತಿನ ಭಾಗದ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ‘ಯುವರತ್ನ’ ಚಿತ್ರತಂಡ ಸದ್ಯಕ್ಕೆ ಎರಡು ಹಾಡಿನ ಶೂಟಿಂಗ್ ಮಾತ್ರ ಬಾಕಿ ಉಳಿಸಿಕೊಂಡಿದೆ. ಇದೀಗ ಆರು ತಿಂಗಳ ಬಳಿಕ ಸಿನಿಮಾ ಕೆಲಸಗಳಲ್ಲಿ ತಂಡ ಭಾಗಿಯಾಗಲಿದೆ. ಇದನ್ನೂ ಓದಿ: Photos: ಗೋಶಾಲೆಗೆ ಭೇಟಿ ಕೊಟ್ಟು ಕರುಗಳಿಗೆ ನಾಮಕರಣ ಮಾಡಿ ಬಂದ ಸಂಯುಕ್ತಾ
ನಿರ್ದೇಶಕ ಸಂತೋಷ್ ಆನಂದ್ರಾಮ್ ಇಂಟ್ರೋಡಕ್ಷನ್ ಹಾಡಿನ ಶೂಟಿಂಗ್ಗೆ ಪ್ಲಾನ್ ಮಾಡಿಕೊಂಡಿದ್ದು, ಸೆ. 20ರಿಂದ ಶುರುವಾಗಲಿದೆ. ಈ ಹಾಡಿನ ಬಗ್ಗೆ ಮಾಹಿತಿ ನೀಡುವ ಚಿತ್ರದ ಕಾರ್ಯಕಾರಿ ನಿರ್ವಪಕ ಕಾರ್ತಿಕ್ ಗೌಡ, ‘ಇಂಟ್ರೊಡಕ್ಷನ್ ಹಾಡಿಗೆ ಅದ್ದೂರಿ ಸೆಟ್ ಸಿದ್ಧಪಡಿಸಲಾಗಿದೆ. ಈಗಾಗಲೇ ಆ ಕೆಲಸ ಚಾಲ್ತಿಯಲ್ಲಿದೆ. ಇನ್ನೆರಡು ವಾರದ ಬಳಿಕ ಹಾಡಿನ ಚಿತ್ರೀಕರಣ ಶುರುವಾಗಲಿದ್ದು, ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ’ ಎನ್ನುತ್ತಾರೆ.
ಈ ಹಾಡನ್ನು ಬಿಟ್ಟು ಇನ್ನೊಂದು ಹಾಡಿಗೂ ಕಲರ್ಫುಲ್ ಲೊಕೇಷನ್ ಅಂತಿಮ ಮಾಡಲಾಗಿದ್ದು, ಹೊರರಾಜ್ಯದಲ್ಲಿ ಅದರ ಶೂಟಿಂಗ್ ನಡೆಯಲಿದೆ. ಇದೆಲ್ಲ ಒಂದೆಡೆಯಾದರೆ, ಚಿತ್ರದ ಸಂಗೀತ ನಿರ್ದೇಶಕ ಥಮನ್, ಇದೇ ತಿಂಗಳಲ್ಲಿ ‘ಯುವರತ್ನ’ ಚಿತ್ರದ ಹಾಡೊಂದು ಹೊರಬರಲಿದೆ ಎಂಬ ಸುಳಿವು ನೀಡಿದ್ದಾರೆ. ಇದು ಅಭಿಮಾನಿ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.