ಬಳ್ಳಾರಿ: ಹೊಸಪೇಟೆ ಮತ್ತು ಗಂಗಾವತಿ ತಾಲೂಕಿನ ವಿವಿಧೆಡೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯಿಸುತ್ತಿರುವ 'ಜೇಮ್ಸ್' ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ. ಜೇಮ್ಸ್ ಸಿನಿಮಾ ಶೂಟಿಂಗ್ಗಾಗಿ ಹೊಸಪೇಟೆಗೆ ಬಂದಿರುವ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಬಂದ ನೂರಾರು ಅಭಿಮಾನಿಗಳಿಗೆ ಪುನೀತ್ ರಾಜ್ಕುಮಾರ್, ಕೈ ಸನ್ನೆ ಮೂಲಕವೇ ಮಾಸ್ಕ್ ಹಾಕಿಕೊಳ್ಳಿ ಎಂದು ಮನವಿ ಮಾಡಿದರು. ಹಂಪಿ ಬಳಿಯ ರೆಸಾರ್ಟ್ವೊಂದರಲ್ಲಿ ತಂಗಿರುವ ಪುನೀತ್ರನ್ನು ನೋಡಲು ಬಂದ ಅಭಿಮಾನಿಗಳಿಗೂ ದೂರದಿಂದಲೇ ಮಾಸ್ಕ್ ಹಾಕಿ ಪ್ಲೀಸ್ ಎನ್ನುತ್ತ ಕೈ ಮುಗಿದರು. ಚಿತ್ರೀಕರಣ ಸ್ಥಳಕ್ಕೂ ಮುಗಿಬಿದ್ದಂತೆ ಬಂದ ಅಭಿಮಾನಿಗಳಿಗೂ ಮಾಸ್ಕ್ ಹಾಕದೆ ಬರಬೇಡಿ ಎನ್ನುವ ಮೂಲಕ ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸುವಂತೆ ಸೂಚ್ಯವಾಗಿ ತಿಳಿಸಿದರು. ಶುಕ್ರವಾರ ಸಂಜೆ ಪುನೀತ್ ತುಂಗಭದ್ರಾ ಡ್ಯಾಂ ವೀಕ್ಷಿಸಿದ್ದರು.