ದರ್ಶನ್​ ಹೆಸರಿನ ಸಿಂಹವನ್ನು ದತ್ತು ಪಡೆದ ನಿರ್ಮಾಪಕಿ ಶೈಲಜಾ ನಾಗ್​

Darshan - Shailaja Nag
Published on

ಬೆಂಗಳೂರು: ಕೋವಿಡ್‌ನಿಂದ ಪ್ರಾಣಿಸಂಕುಲಕ್ಕೂ ಸಮಸ್ಯೆ ಉಂಟಾಗಿದ್ದು, ಈ ನಿಟ್ಟಿನಲ್ಲಿ ಪ್ರಾಣಿಗಳ ರಕ್ಷಣಗೆ ದರ್ಶನ್ ನಿಂತಿರುವುದು ಗೊತ್ತೇ ಇದೆ. ದರ್ಶನ್​ ಅವರ ನಡೆಗೆ ಒಳ್ಳೆಯ ಸ್ಪಂದನೆ ಸಿಕ್ಕಿದ್ದು, ಹಲವರು ಕರ್ನಾಟಕದ ಜೂಗಳಲ್ಲಿರುವ ಪ್ರಾಣಿ-ಪಕ್ಷಿಗಳನ್ನು ಒಂದು ವರ್ಷ ಕಾಲಕ್ಕೆ ದತ್ತು ತೆಗೆದುಕೊಂಡಿದ್ದಾರೆ. ಈ ಪೈಕಿ ನಿರ್ಮಾಪಕಿ ಶೈಲಜಾ ನಾಗ್​ ಎಂಬ ಸಿಂಹವನ್ನು ದತ್ತು ಪಡೆದಿದ್ದಾರೆ.

ಮೃಗಾಲಯಗಳಲ್ಲಿರುವ ಪ್ರಾಣಿಗಳು ಸಂಕಷ್ಟಕ್ಕೊಳಗಾಗಿರುವ ಬಗ್ಗೆ ಶನಿವಾರವಷ್ಟೇ ದರ್ಶನ್​ ಗಮನಸೆಳೆದಿದ್ದರು. ಪ್ರಾಣಿ-ಪಕ್ಷಿಗಳನ್ನು ಒಂದು ವರ್ಷಕ್ಕೆ ದತ್ತು ತೆಗೆದುಕೊಂಡು ಸಾಕಿ ಎಂದು ಮನವಿ ಮಾಡಿದ್ದರು. ದರ್ಶನ್ ಅವರು ಮನವಿ ಮಾಡಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅವರ ಅಭಿಮಾನಿಗಳ ಪ್ರಾಣಿಗಳನ್ನು ದತ್ತು ಪಡೆಯಲು ಮುಂದಾಗಿದ್ದಾರೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಗದಗ ಮೃಗಾಲಯ, ಮೈಸೂರಿನ ಜಯಚಾಮರಾಜೇಂದ್ರ ಮೃಗಾಲು ಸೇರಿದಂತೆ ರಾಜ್ಯದ ವಿವಿಧ ಮೃಗಾಲಯಗಳಲ್ಲಿರುವ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ. ಈ ಪೈಕಿ, 'ಯಜಮಾನ' ಚಿತ್ರದ ನಿರ್ಮಾಪಕಿ ಶೈಲಜಾ ನಾಗ್​ ಅವರು ಜಯಚಾಮರಾಜೇಂದ್ರ ಮೃಗಾಲಯದಲ್ಲಿರುವ ದರ್ಶನ್​ ಎಂಬ ಸಿಂಹವನ್ನು ಒಂದು ಲಕ್ಷ ಕೊಟ್ಟು, ಒಂದು ವರ್ಷದ ಕಾಲ ದತ್ತು ಪಡೆದಿದ್ದಾರೆ. ಇನ್ನು ಮಂಡ್ಯದ ದರ್ಶನ್ ಸೇನಾ ಸಮಿತಿಯೂ ಲವ್‌ಬರ್ಡ್ಸ್‌ಗಳನ್ನು ದತ್ತು ಪಡೆದುಕೊಂಡಿದೆ.

ದತ್ತು ಪಡೆದುಕೊಂಡಾಗ ಮೃಗಾಲಯದ ವತಿಯಿಂದ ನೀಡುವ ಪ್ರಮಾಣ ಪತ್ರಗಳನ್ನು ಹಲವರು ದರ್ಶನ್​ಗೆ ಕಳಿಸಿದ್ದು, ಅದಕ್ಕೆ ಪ್ರತಿಯಾಗಿ ದರ್ಶನ್‌ ತಮ್ಮ ಟ್ವಿಟರ್​ ಖಾತೆಯಲ್ಲಿ ಅದನ್ನು ಶೇರ್​ ಮಾಡಿಕೊಂಡು ದತ್ತು ಪಡೆದವರಿಗೆ ಧನ್ಯವಾದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net